ದಲಿತರ ನಿಗಮಗಳಿಗೆ ಹಣ ನೀಡದ ರಾಜ್ಯ ಸರ್ಕಾರ; ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಆರೋಪ

KannadaprabhaNewsNetwork | Published : Apr 18, 2024 2:27 AM

ಸಾರಾಂಶ

ಕಳೆದ 11ತಿಂಗಳು ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ದಲಿತರ ಮತ್ತು ಶೋಷಿತರ ಏಳಿಗೆಗೆ ಇರುವ ನಿಗಮಗಳಿಗೆ ಯಾವುದೇ ಹಣ ಕೊಡಲು ಸಾಧ್ಯವಾಗದೆ ಬೀದಿಗೆ ತಳ್ಳಿದ್ದಾರೆ ಎಂದು ಕೇಂದ್ರ ಸಚಿವ ಎ.ನಾರಾಯಣಾಸ್ವಾಮಿ ದೂರಿದರು.

- ತರಳುಬಾಳು ಕಲ್ಯಾಣ ಮಂದಿರದಲ್ಲಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರಕನ್ನಡಪ್ರಭ ವಾರ್ತೆ, ಬೀರೂರು.ಕಳೆದ 11ತಿಂಗಳು ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ದಲಿತರ ಮತ್ತು ಶೋಷಿತರ ಏಳಿಗೆಗೆ ಇರುವ ನಿಗಮಗಳಿಗೆ ಯಾವುದೇ ಹಣ ಕೊಡಲು ಸಾಧ್ಯವಾಗದೆ ಬೀದಿಗೆ ತಳ್ಳಿದ್ದಾರೆ ಎಂದು ಕೇಂದ್ರ ಸಚಿವ ಎ.ನಾರಾಯಣಾಸ್ವಾಮಿ ದೂರಿದರು.ಪಟ್ಟಣದಲ್ಲಿ ಬುಧವಾರ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಒಂದು ಗಂಗಾಕಲ್ಯಾಣ ಯೋಜನೆ ನೀಡಿಲ್ಲ. ದಲಿತರಿಗೆ, ಅಭಿವೃದ್ಧಿ ನಿಗಮಗಳಿಗೆ ಸಬ್ಸಿಡಿ ನೀಡುವ ಯೋಗ್ಯತೆ ಇಲ್ಲ. ಉದ್ಯೋಗ ಇಲ್ಲದೆ ನಮ್ಮ ಮಕ್ಕಳನ್ನು ಬೀದಿಗೆ ತಳ್ಳಿದ್ದಾರೆ. ಇದನ್ನು ನೋಡಿ ನಿಮಗೆ ಮತ ನೀಡಬೇಕಾ? ಎಂದು ತರಾಟೆಗೆ ತೆಗೆದುಕೊಂಡರು. ನರೇಂದ್ರ ಮೋದಿ ಸರ್ಕಾರ ಎಲ್ಲಾ ವರ್ಗದವರ ಅಭಿವೃದ್ಧಿಗೆ ವಿಶ್ವಕರ್ಮ ಯೋಜನೆಯಡಿ ಸಾಲ ನೀಡಲು ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಿ ಪ್ರೋತ್ಸಾಹಿಸಿದೆ ಎಂದರು.

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಪ್ರತಿಮನೆಗೂ ಶೌಚಾಲಯ, ಬಡವರಿಗೆ ಸೂರು, ಅಡುಗೆ ಅನಿಲ, ಆರೋಗ್ಯ ರಕ್ಷಣೆಗೆ ಆಯುಷ್ಮಾನ್, ಶುದ್ಧ ಕುಡಿಯುವ ನೀರು ಸೇರಿದಂತೆ ನಾನಾ ಜನಪರ ಯೋಜನೆಗಳನ್ನು ಕಳೆದ ೭೫ ವರ್ಷಗಳಲ್ಲಿ ನೀಡದ್ದನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದರು.ರಾಜ್ಯದಲ್ಲಿ ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದೇನೆ ಎಂದು ಪ್ರಚಾರ ನಡೆಸುತ್ತಾರೆ. ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರೈತರ ಪ್ರೋತ್ಸಾಹಕ್ಕೆ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ ನಿಲ್ಲಿಸಿ ಕೃಷಿಕರಿಗೆ ಅನ್ಯಾಯ ವೆಸಗಿದ್ದಾರೆ. ರೈತರು- ದಲಿತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾಸಿರಿ ಯೋಜನೆ ಯಾವ ಕಾರಣಕ್ಕೆ ನಿಲ್ಲಿಸಿದ್ದೀರಿ ಎಂದ ಅವರು, ನಮ್ಮ ಮಕ್ಕಳಿಗಾಗಿ ಶೈಕ್ಷಣಿಕ ಕ್ಷೇತ್ರದ ಕ್ರಾಂತಿಯಾಗ ಬೇಕೇ , ೨ಸಾವಿರ ರು. ಪಡೆಯುವ ಬಿಕ್ಷುಕರಾಗಬೇಕೆ ನೀವೇ ಯೋಚಿಸಿ ಎಂದರು.1947ರಲ್ಲಿ 30ಕೋಟಿ ಜನಸಂಖ್ಯೆ ಇದ್ದ ಪ್ರಮಾಣದಲ್ಲಿ ಮೀಸಲಾತಿ ಪ್ರಮಾಣ ಶೇ.15ರಷ್ಟು ನೀಡಿತ್ತು. ನಮ್ಮ ಬಿಜೆಪಿ ಸರ್ಕಾರ ಅದನ್ನು ಶೇ.17ಕ್ಕೆ ಏರಿಸಿದೆ. ಅದನ್ನು ದಲಿತರು ಯೋಚಿಸಬೇಕು ಎಂದರು.ದೇಶದಲ್ಲಿ ನರೇಂದ್ರ ಮೋದಿ ಆಡಳಿತ ನೋಡಿದ ಜನ, ಕಾರ್ಯಕರ್ತರು ಮತ್ತೊಮ್ಮೆ ಮೋದಿ ಎನ್ನುತ್ತಾರೆ. ಆದರೆ ಕಳೆದ ೫೦ ವರ್ಷಗಳಿಂದಲೂ ಕಾಂಗ್ರೆಸ್ ನಾಯಕರು ಇಂದಿರಾಗಾಂಧಿ, ರಾಜೀವ್ ಗಾಂಧಿ ತೋರಿಸಿ ಮತ ಕೇಳುತ್ತಾರೆ. ಆದರೆ ರಾಹುಲ್ ಗಾಂಧಿ ತೋರಿಸಿ ಯಾಕೆ ಮತ ಕೇಳುತ್ತಿಲ್ಲ ಎಂದರು.ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಈ ದೇ ಶದ ೧೪೦ಕೋಟಿ ಜನಸಂಖ್ಯೆ ಸುರಕ್ಷತೆ ಮತ್ತು ಸುಭದ್ರತೆಗೆ ಪ್ರಧಾನಿ ಮೋದಿಯನ್ನು ಮತ್ತೆ ಗೆಲ್ಲಿಸುವ ಪಣತೊಡಬೇಕು ಎಂದರು.

ಮಾಜಿ ಶಾಸಕ ವೈಎಸ್.ವಿ.ದತ್ತ ಮಾತನಾಡಿ, ದೇಶದ ಜನ ನೆಮ್ಮದಿಯಿಂದ ಬಾಳಬೇಕಾದರೆ ಮೋದಿ ಸಮರ್ಥ ವ್ಯಕ್ತಿ ಯಾಗಿದ್ದು ಎನ್.ಡಿ.ಎ ಗೆಲುವಿಗೆ ನಾವೆಲ್ಲ ಶ್ರಮಿಸೋಣ ಎಂದರು.ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕೆ.ಆರ್.ಮಹೇಶ್ ಒಡೆಯರ್, ಕೆ.ಎಂ.ನಿವಾಯಕ್, ಜೆ.ಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಮಂಡಲ ಅಧ್ಯಕ್ಷ ದೇವಾನಂದ್, ಲಕ್ಕಪ್ಪ, ಎಂ.ಪಿ.ಸುದರ್ಶನ್, ಸವಿತಾರಮೇಶ್, ಬಿದರೆ ಜಗದೀಶ್, ಶೂದ್ರ ಶ್ರೀನಿವಾಸ್, ಹುಲ್ಲೇಹಳ್ಳಿ ಲಕ್ಷ್ಮಣ್, ಬಿ.ಎಂ.ರುದ್ರಪ್ಪ, ಪುರಸಭೆ ಸದಸ್ಯರಾದ ಬಿ.ಆರ್.ಮೋಹನ್ ಕುಮಾರ್, ಮಾನಿಕ್ ಭಾಷ, ಬಾವಿಮನೆ ಮಧು, ಸಹನಾ ವೆಂಕಟೇಶ್, ನಾಗರಾಜ್, ಜಿಮ್ ರಾಜು, ಮಾನಿಕ್ ಭಾಷ, ಜಿಗಣೇಹಳ್ಳಿ ನೀಲಕಂಠಪ್ಪ, ಬೀರೂರು ಗಣೇಶ್ ಸೇರಿದಂತೆ ಮತ್ತಿತ್ತರ ಕಾರ್ಯಕರ್ತರು ಇದ್ದರು.--ಬಾಕ್ಸ್--

ಚುನಾವಣೆ ಪ್ರಾರಂಭದ ದಿನದಿಂದಲೂ ಕಡೂರು ಕ್ಷೇತ್ರ ಶಾಸಕರು ಮತ್ತು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಸಂಸದರ ಕೊಡುಗೆ ಏನು? ಎಂದು ಪ್ರಶ್ನೆ ಮಾಡಿ ಕ್ಷೇತ್ರದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅವರಲ್ಲಿ ಬಹುತೇಕರಿಗೆ ಗಣಿತ ಬರುತ್ತೆ ಎಂದು ಭಾವಿಸಿದ್ದೇನೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಮನೆಮನೆಗೆ ಶುದ್ಧ ಕುಡಿವ ನೀರು ಪೂರೈಕೆಗೆ ಚಿಕ್ಕಮಗಳೂರು ಜಿಲ್ಲೆಗೆ 968ಕೋಟಿ ಮೀಸಲಿರಿಸಿ ಅದಕ್ಕೆ ಕೇಂದ್ರಸಚಿವ ಎ.ನಾರಾಯಣಸ್ವಾಮಿ ಮತ್ತು ಸಂಜನ್ ಝಾ ಸಮಿತಿ ರಚಿಸಿತ್ತು. ನಾನು ಅವರ ಜೊತೆ ಕಿತ್ತಾಡಿದ್ದ ರಿಂದ ಚಿಕ್ಕಮಗಳೂರು ತಾಲೂಕಿಗೆ 166 ಕೋಟಿ, ಕಡೂರು ಕ್ಷೇತ್ರಕ್ಕೆ 802 ಕೋಟಿ ರು. ಬಂತು. ಇದು ಯಾರ ಯೋಜನೆ, ಎಂದು ಪ್ರಶ್ನಿಸಿದರು.ಬೆಳ್ಳಿ ಪ್ರಕಾಶ್ ಶಾಸಕರಾಗಿದ್ದ ಸಂದರ್ಭದಲ್ಲಿ ದತ್ತ ರವರ ಸಲಹೆ ಮೇರೆಗೆ ರೇವಣ್ಣ ನವರು ಲೋಕೋಪಯೋಚಿ ಸಚಿವ ರಾಗಿದ್ದ ಸಂದರ್ಭದಲ್ಲಿ ಕಡೂರು ಕ್ಷೇತ್ರದ ಲೋಕೋಪಯೋಗಿ ಇಲಾಖೆ ಕಾರ್ಯಕ್ರಮಗಳಿಗೆ 250ಕೋಟಿ ರು. ಮಂಜೂರು ಮಾಡಿಸಿದ್ದೇನೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಅಭಿವೃದ್ಧಿಗಾಗಿ 50ಕೋಟಿ. ವಿರೋಧ ಪಕ್ಷದ ಸದಸ್ಯನಾಗಿ ಕಡೂರು ಕ್ಷೇತ್ರಕ್ಕೆ ಒಟ್ಟು 1180ಕೋಟಿ ಅನುದಾನ ತಂದಿದ್ದೇನೆ. ಇವು ಅಭಿವೃದ್ಧಿ ಕೆಲಸ ಅಲ್ಲವೇ? ಎಂದ ಅವರು ತಾವು ಆಡಳಿತ ಪಕ್ಷದ ಶಾಸಕರಾಗಿ ಕಳೆದ 11ತಿಂಗಳಿನಿಂದ ಕಡೂರು ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂದು ಸಾಬೀತು ಮಾಡಲಿ, ಬೇರೆಯವರನ್ನು ಬೆಟ್ಟು ಮಾಡುವ ಮೊದಲು 4 ಬೆರಳು ತಮ್ಮನ್ನು ನೋಡುತ್ತಿವೆ ಎಂಬುದು ನೆನಪಿರಲಿ ಎಂದರು. ರಾಜ್ಯದಲ್ಲಿ ಎಲ್ಲಾ ವರ್ಗಕ್ಕೂ ಸಿದ್ದರಾಮಯ್ಯ ಫ್ರೀ ಕೊಟ್ಟಿದ್ರೆ ಅದು ಕೇವಲ ಬರಗಾಲ ಎಂದು ಟೀಕಿಸಿದರು.

೧೭ ಬೀರೂರು ೧ಬೀರೂರಿನ ತರಳುಬಾಳು ಕಲ್ಯಾಣ ಮಂದಿರದಲ್ಲಿ ಬುಧವಾರ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನವರ ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾಜಿ ಶಾಸಕರುಗಳಾದ ಬೆಳ್ಳಿ ಪ್ರಕಾಶ್, ವೈ.ಎಸ್.ವಿ.ದತ್ತ ಮತ್ತಿತರಿದ್ದರು.

Share this article