ರಾಜ್ಯ ಸರ್ಕಾರದ ಸಂಕುಚಿತ ಮನೋಭಾವ: ಬೊಮ್ಮಾಯಿ ಆರೋಪ

KannadaprabhaNewsNetwork |  
Published : Sep 27, 2025, 12:00 AM IST
26 ಬೀರೂರು 1ಬೀರೂರಿನ ಮುಖಂಡ ಕೆ.ಬಿ.ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಭೇಟಿ ನೀಡಿದ ಸಂಸದ ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದರು. ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ , ಮಾರ್ಗದ ಮಧು , ಬಿ.ಆರ್. ಮೋಹನ್ಕುಮಾರ್ ಮತ್ತಿತರಿದ್ದರು | Kannada Prabha

ಸಾರಾಂಶ

ಬೀರೂರು, ಕೆಎಸ್ಆರ್ಟಿಸಿ ನೌಕರರ ವೇತನ ಪರಿಷ್ಕರಣೆ ಮತ್ತು ಹಿಂಬಾಕಿ ಪಾವತಿ ಕುರಿತು ರಾಜ್ಯ ಸರ್ಕಾರ ಸಂಕುಚಿತ ಮನೋಭಾವ ಪ್ರದರ್ಶಿಸುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

- ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಭೇಟಿ

ಕನ್ನಡಪ್ರಭ ವಾರ್ತೆ, ಬೀರೂರು

ಕೆಎಸ್ಆರ್ಟಿಸಿ ನೌಕರರ ವೇತನ ಪರಿಷ್ಕರಣೆ ಮತ್ತು ಹಿಂಬಾಕಿ ಪಾವತಿ ಕುರಿತು ರಾಜ್ಯ ಸರ್ಕಾರ ಸಂಕುಚಿತ ಮನೋಭಾವ ಪ್ರದರ್ಶಿಸುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಎಸ್.ಎಲ್. ಭೈರಪ್ಪ ಅವರ ಅಂತಿಮ ದರ್ಶನಕ್ಕೆ ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಬೀರೂರು ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಮುಖಂಡ ಹಾಗು ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಭೇಟಿ ನೀಡಿ, ಕುಶಲೋಪರಿ ವಿಚಾರಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.ಕೋವಿಡ್ ಕಾರಣದಿಂದ 2020ರಲ್ಲಿ ಕೆಎಸ್ಆರ್ಟಿಸಿ ನೌಕರರ ವೇತನ ಪರಿಷ್ಕರಣೆ ಆಗಿರಲಿಲ್ಲ ಬದಲಿಗೆ 2023ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಅದೇ ವರ್ಷದ ಮೇ ತಿಂಗಳಿನಲ್ಲಿ ಹೊಸ ಸರ್ಕಾರ ಬಂದಿತ್ತು. ಅವರು 2020ರಿಂದಲೇ ಅನ್ವಯಗೊಳಿಸಲು ಅವಕಾಶವಿತ್ತು. ಆದರೆ, ತಾಂತ್ರಿಕ ಕಾರಣದ ನೆಪ ಒಡ್ಡಿ ನೌಕರರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಸರ್ಕಾರ ಬಿಟ್ಟು ಸಂಕುಚಿತ ಮನೋಭಾವ ತೊರೆದು, ನೌಕರರಿಗೆ ಸಲ್ಲಬೇಕಾದ ಬಾಕಿ ಪಾವತಿಸಲಿ. 2024ರಿಂದ ವೇತನ ಪರಿಷ್ಕರಣೆಗೆ ಮುಂದಾಗಲಿ ಎಂದು ಆಗ್ರಹಿಸಿದರು.ಮುಖಂಡ ಕೆ.ಬಿ.ಮಲ್ಲಿಕಾರ್ಜುನ ಅವರು, ನನ್ನ ತಂದೆ ಎಸ್.ಆರ್.ಬೊಮ್ಮಾಯಿ ಆತ್ಮೀಯರು. ದೇವೇಗೌಡ ಮತ್ತು ಜೆ.ಎಚ್. ಪಟೇಲರ ಮುಂದಾಳತ್ವದಲ್ಲಿ ಎ.ಬಿ.ಪಾಟೀಲ್, ಉಮೇಶ್ ಕತ್ತಿ ಮೊದಲಾದವರ ಜತೆ 2ನೇ ತಲೆಮಾರಿನ ನಾಯಕರಾಗಿ ಬೆಳೆದು ಬಂದವರು. ಅವರಿಗೆ ನಾಳೆ 75 ವರ್ಷ ತುಂಬುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲ ಪಕ್ಷಗಳ ಮುಖಂಡರು, ಕಾರ್ಯಕರ್ತರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಜನರ ಪ್ರೀತಿ ಗಳಿಸಿದ ಜನಪರ ಚಿಂತನೆ ನಾಯಕರು. ಸಾರ್ವಜನಿಕ ಜೀವನದಲ್ಲಿ ಇಂತಹವರ ಉಪಸ್ಥಿತಿ ಬೇಕಿದೆ, ಆರೋಗ್ಯದಲ್ಲಿ ಅವರು ಸುಧಾರಿಸಿಕೊಂಡು ರಾಜಕಾರಣ ದಲ್ಲಿ ಇನ್ನಷ್ಟು ಕಾಲ ಮುಂದುವರೆಯಲಿ ಎಂದು ಆಶಿಸಿದರು.ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ ಅವರು ಬೊಮ್ಮಾಯಿ ಅವರಿಗೆ ಕುಟುಂಬದ ಪರವಾಗಿ ಗೌರವ ಸಮರ್ಪಿಸಿದರು.ಪುಷ್ಪಾ ಮಲ್ಲಿಕಾರ್ಜುನ, ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ , ಉಪಾಧ್ಯಕ್ಷ ಎನ್.ಎಂ. ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೆಟ್ಟಿಹಳ್ಳಿ ರಾಮಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ರಮೇಶ್, ಪುರಸಭೆ ಸದಸ್ಯರಾದ ಸುದರ್ಶನ್,ಬಿ.ಆರ್. ಮೋಹನ್ಕುಮಾರ್, ಹಿರಿಯ ವಕೀಲ ರಾದ ಜಯಣ್ಣ, ಕೆ.ಎನ್. ಬೊಮ್ಮಣ್ಣ, ಮುಖಂಡ ಮಾರ್ಗದ ಮಧು ಇದ್ದರು.26 ಬೀರೂರು 1ಬೀರೂರಿನ ಮುಖಂಡ ಕೆ.ಬಿ.ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಭೇಟಿ ನೀಡಿದ ಸಂಸದ ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದರು. ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ , ಮಾರ್ಗದ ಮಧು , ಬಿ.ಆರ್. ಮೋಹನ್ಕುಮಾರ್ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ