ರಾಜ್ಯ ಸರ್ಕಾರದ ಯೋಜನೆಗಳು ರಾಜಕೀಯ ಪ್ರೇರಿತ

KannadaprabhaNewsNetwork |  
Published : Jul 19, 2025, 02:00 AM IST
ಗುದ್ದಲಿ ಪೂಜೆ ಮತ್ತು ಶಂಕುಪಾಸ್ತಪನೆಗೆ ಸಂಸದ ಡಾ.ಕೆ.ಸುಧಾಕರ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಗೌರಿಬಿದನೂರು ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹೈಮಾಸ್ಟ್‌ ದೀಪಗಳನ್ನು ಅಳವಡಿಸುವ ಒಟ್ಟು 12 ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ 52 ಲಕ್ಷಗಳ ಅನುದಾನ ನೀಡಿದೆ. ರಸ್ತೆಗಳು, ನೀರಾವರಿ, ವಿದ್ಯುತ್, ಶಿಕ್ಷಣ, ಆರೋಗ್ಯ ಮುಂತಾದ ಯೋಜನೆಗಳನ್ನು ರಾಜ್ಯ ಸರ್ಕಾರ ಸರಿಯಾಗಿ ಜಾರಿಮಾಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ರಾಜ್ಯ ಕಾಂಗ್ರೆಸ್‌ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ರಾಜಕೀಯ ಉದ್ದೇಶಕ್ಕಾಗಿ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ಟೀಕಿಸಿದರು.

ಶುಕ್ರವಾರ ಗೌರಿಬಿದನೂರು ನಗರದ ನಗರಸಭೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೇಂದ್ರ ಸರ್ಕಾರ ಅನುದಾನ ನೀಡಿರುವ 12 ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅ‍ವರು, ಗೌರಿಬಿದನೂರು ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹೈಮಾಸ್ಟ್‌ ದೀಪಗಳನ್ನು ಅಳವಡಿಸುವ ಒಟ್ಟು 12 ಕಾಮಗಾರಿಗಳನ್ನು ಕೈಗೊಳ್ಳಲು ರೂ 52 ಲಕ್ಷಗಳ ಅನುದಾನ ನೀಡಲಾಗಿದೆ ಎಂದರು.

ಮನೆ ಮನೆಗೆ ನಲ್ಲಿ ನೀರುಕೇಂದ್ರ ರಸ್ತೆನಿಧಿ (ಸಿಆರ್‌ಎಫ್‌), ರಾಷ್ಟ್ರೀಯ ಹೆದ್ದಾರಿ-94ರಿಂದ ನಕ್ಕಲಹಳ್ಳಿ ಕಾತನಕಲ್ಲು ಜಿಲಾಕುಂಟೆ ಮಾರ್ಗವಾಗಿ ನಗರಗೆರೆ ಸೇರುವ 8 ಕಿ.ಮೀ.ರಸ್ತೆ ಅಭಿವೃದ್ಧಿಗಾಗಿ 6ಲಕ್ಷ ರು.ಗಳ ಅನುದಾನ ನೀಡಲಾಗಿ. ಜಲಜೀವನ್ ಮಿಷನ್ ಯೋಜನೆಯಡಿ ತಾಲೂಕಿನಾದ್ಯಂತ 296 ಗ್ರಾಮಗಳಲ್ಲಿ ಮನೆ-ಮನೆಗೆ ಕುಡಿಯುವ ನೀರು ಸರಬರಾಜು ಕಾಮಗಾರಿಯು ಪ್ರಗತಿಯಲ್ಲಿದ್ದು ಇದಕ್ಕಾಗಿ ಕೇಂದ್ರ ಸರ್ಕಾರದ ವತಿಯಿಂದ 102. 50ಕೋಟಿ ಅನುದಾನ ನೀಡಲಾಗಿರುತ್ತದೆ ಎಂದು ತಿಳಿಸಿದರು.

ನೀರು ಸರಬರಾಜು ಕಾಮಗಾರಿ

2024-25ನೇ ಸಾಲಿನ, ಅಮೃತ್ 2.0ಯೋಜನೆಯಡಿ ಗೌರಿಬಿದನೂರು ನಗರ ನೀರು ಸರಬರಾಜು ಕಾಮಗಾರಿಗೆ 66.60 ಕೋಟಿ ರು.ಗಳ ಅನುದಾನ ಬಿಡುಗಡೆಯಾಗಿ.ರಾಷ್ಟ್ರೀಯ ಹೆದ್ದಾರಿ-69 ಮಧುಗಿರಿ-ಮುಳಬಾಗಿಲು ರಸ್ತೆ ವಯಾ ಗೌರಿಬಿದನೂರು ಚಿಕ್ಕಬಳ್ಳಾಪುರ ಕಾಮಗಾರಿಯು ಪ್ರಗತಿಯಲ್ಲಿದ್ದು ಇದಕ್ಕಾಗಿ ಕೇಂದ್ರಸರ್ಕಾರವು 398.48ಕೋಟಿ ಅನುದಾನ ಒದಗಿಸಿದೆ. ಗೌರಿಬಿದನೂರು ಬೈಪಾಸ್ ರಸ್ತೆ (ಗುಂಡಾಪುರ ಮಾರ್ಗವಾಗಿ) ಅಭಿವೃದ್ಧಿಗೆ 40.68 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಪಿ.ಎಂ. ನಿಧಿ ಯೋಜನೆಯಡಿ ಗೌರಿಬಿದನೂರು ನಗರದಾದ್ಯಂತ 558 ಜನ ಫಲಾನುಭವಿಗಳಿಗೆ ಸಹಾಯಧನ ವಿತರಿಸಿದ್ದು ಇದಕ್ಕಾಗಿ 56.0 ಲಕ್ಷ ರು.ಗಳ ಅನುದಾನ ನೀಡಲಾಗಿರುತ್ತದೆ ಎಂದರು.

ಕನಿಷ್ಠ, ಬೆಂಬಲ ಬೆಲೆ ಯೋಜನೆಯಡಿ ಗೌರಿಬಿದನೂರು ತಾಲೂಕಿನಲ್ಲಿ 571 ಜನ ರೈತರಿಗೆ ರಾಗಿ ಬೆಳೆಗಾಗಿ ರೂ 3 ಕೋಟಿ ಅನುದಾನ ಒದಗಿಸಿ 8497.50 ಕ್ವೀoಟಲ್ ರಾಗಿಯನ್ನು ಖರೀದಿಸಲಾಗಿದೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಆದಿ ಆದರ್ಶ ಗ್ರಾಮ ಯೋಜನೆಯಡಿ ಗೌರಿಬಿದನೂರು ತಾಲ್ಲೂಕಿನಲ್ಲಿ ಮಾಚೇನಹಳ್ಳಿ ಲಕ್ಕಸಂದ್ರ ಹಾಗೂ ದೊಡ್ಡ ಮಲೆಕೆರೆ ಗ್ರಾಮಗಳನ್ನು ಆಯ್ಕೆ ಮಾಡಿದ್ದು 2024-25ನೇ ಸಾಲಿನಲ್ಲಿ ತಲಾ ಒಟ್ಟು 61.14 ಲಕ್ಷ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ಕಡುಬಡವರಿಗೆ ಮನೆ ನಿರ್ಮಾಣಮುಂದಿನ ದಿನಗಳಲ್ಲಿ ಇನ್ನೂ ಅಭಿವೃದ್ದಿ ಕಾರ್ಯಗಳಾದ ರಾಷ್ಟೀಯ ಹೆದ್ದಾರಿ, ರೈಲ್ವೆ ಸೇತುವೆ, ಶುದ್ದ ಕುಡಿಯುವ ನೀರಿನ ಒದಗಿಸುವ ಎಲ್ಲಾ ಪ್ರಯತ್ನಗಳನ್ನು ಸಹ ಬಿಜೆಪಿ ಸರ್ಕಾರ ಮಾಡಲಾಗುತ್ತದೆ. ಪ್ರಧಾನ ಮಂತ್ರಿಗಳ ಆವಾಜ್‌ ಯೋಜನೆಅಡಿಯಲ್ಲಿ ಕಡುಬಡವರಿಗೆ ಅತಿಶೀಘ್ರದಲ್ಲಿ ಮನೆಗಳ ನಿರ್ಮಾಣ ಮಾಡಲಾಗುತ್ತದೆ. ರಾಜ್ಯಸರ್ಕಾರದಿಂದ ಕಡುಬಡವರಿಗೆ ಮನೆಗಳ ನಿರ್ಮಾಣದ ಪ್ರಗರಿ ಶೂನ್ಯವಾಗಿದೆ ಎಂದು ಟೀಕಿಸಿದರು.

ಯೋಜನೆಗಳು ಜಾರಿಯಾಗುತ್ತಿಲ್ಲ ಕುಂಠಿತವಾದ ರಾಜ್ಯದ ಅಭಿವೃದ್ಧಿ, ವಿಫಲವಾದ ಗ್ಯಾರಂಟಿ ಯೋಜನೆ, ಅನುದಾನದ ಕೊರತೆ, ಹಗರಣಗಳ ಸರಮಾಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ. ರಸ್ತೆಗಳು, ನೀರಾವರಿ, ವಿದ್ಯುತ್, ಶಿಕ್ಷಣ, ಆರೋಗ್ಯ ಮುಂತಾದ ಯೋಜನೆಗಳು ಸರಿಯಾಗಿ ಜಾರಿಮಾಡದಿರುವುದು. ಉದ್ಯೋಗಾವಕಾಶಗಳು ಕಡಿಮೆಯಾಗಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಲಕ್ಷ್ಮೀನಾರಾಯಣಪ್ಪ, ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ, ಎನ್.ಎಂ.ರವಿನಾರಾಯಣರೆಡ್ಡಿ, ಸಿ.ಎಸ್.‌ನರಸಿಂಹಮೂರ್ತಿ, ಡಾ.ಶಶಿಧರ್‌, ನಗರಸಭೆ ಸದಸ್ಯರಾದ ಮಾರ್ಕೆಟ್‌ ಮೋಹನ್‌, ಪುಣ್ಯವತಿಜಯಣ್ಣ, ಬಿ.ಜಿ.ಪಿ ಕಾರ್ಯಕರ್ತ ರಮೇಶ್‌ರಾವ್‌ಶೆಳ್ಕೆ, ಜಯಣ್ಣ, ಪಾರ್ವತಮ್ಮ, ಮಾರುತಿ, ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌