ಜಾರಕಿಹೊಳಿ ಸಂಸ್ಕೃತಿ ರಾಜ್ಯ ನೋಡಿದೆ: ಸಚಿವೆ ಲಕ್ಷ್ಮೀ

KannadaprabhaNewsNetwork |  
Published : Jun 29, 2024, 12:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ವಿಷ ಕನ್ಯೆ ಪದ ಬಳಕೆ ಮಾಡಿರುವ ಶಾಸಕ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ. ಅವರ ಸಂಸ್ಕೃತಿ ಎಂಥದ್ದು ಅಂತ ರಾಜ್ಯದ ಜನರು ನೋಡಿದ್ದಾರೆ ಎಂದು ಮಹಿಳಾ‌ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಟಾಂಗ್ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿಷ ಕನ್ಯೆ ಪದ ಬಳಕೆ ಮಾಡಿರುವ ಶಾಸಕ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ. ಅವರ ಸಂಸ್ಕೃತಿ ಎಂಥದ್ದು ಅಂತ ರಾಜ್ಯದ ಜನರು ನೋಡಿದ್ದಾರೆ ಎಂದು ಮಹಿಳಾ‌ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಟಾಂಗ್ ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಷಕನ್ಯೆ ಪದ ಬಳಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರ ಹೇಳಿಕೆಗೆ ನಾನು ಉತ್ತರ ಕೊಡುವುದಿಲ್ಲ. ಜನರೇ ತಕ್ಕ ಉತ್ತರ ಕೊಡುತ್ತಾರೆ. ಭಾರತದ ಸಂಸ್ಕೃತಿಯಲ್ಲಿ ವಿಶ್ವಾಸ ಇಟ್ಟವರು ನಾವು. ಅವರು ವಿಷಕನ್ಯೆ ಅಂತಾರೋ, ಇನ್ನೊಂದು ಕನ್ಯೆ ಅಂತಾರೋ ಅವರೇನು, ಸಂಸ್ಕೃತಿ ಏನು ಎನ್ನುವುದು ರಾಜ್ಯದ ಜನ ನೋಡಿದ್ದಾರೆ. ಅವರ ಸಂಸ್ಕೃತಿ ಬಗ್ಗೆಯೂ ನೋಡಿದ್ದಾರೆ. ಅವರು ದೊಡ್ಡವರು ಅವರ ಬಗ್ಗೆ ಮಾತನಾಡಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ನಮ್ಮ ಬಳಿ ಎಲ್ಲಿ ದುಡ್ಡಿದೆ? ನಾನು ಹೆಸರಿಗಷ್ಟೆ ಲಕ್ಷ್ಮೀ. ನನ್ನ ಬಳಿ ಹಣವಿಲ್ಲ. ಅವರಿಗೆ ಸಾಹುಕಾರ್ ಅಂತಾರೆ. ನಮ್ಮ ಬಳಿ ಎಲ್ಲಿ ದುಡ್ಡು? ಸಾಹುಕಾರಗಳು ಅವರಲ್ವಾ ಎಂದು ಲೇವಡಿ ಮಾಡಿದ ಅವರು, ನಾನು ಯಾರ ಬಳಿಯಾದರೂ ಹಣ ತೆಗೆದುಕೊಂಡಿದ್ದರೆ ದಾಖಲೆ ಕೊಡಲಿ. ಆಮೇಲೆ ಮಾತನಾಡುತ್ತೇನೆ ಎಂದು ಹೇಳಿದರು.

ನಾನು ಆಸೆ ಪಟ್ಟರೆ ಡಿಸಿಎಂ ಮಾಡಿಯೇ ಬಿಡುತ್ತಾರೆಯೇ? ನನಗೆ ಏನೇ ಸ್ಥಾನಮಾನ ಕೊಟ್ಟರೂ ಅದು ಹೈಕಮಾಂಡ್ ತೀರ್ಮಾನ. ರಾಜ್ಯದಲ್ಲಿ ನನಗೆ ದೊಡ್ಡ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶ ನೀಡಿದೆ. ಇದನ್ನು ನಿಭಾಯಿಸುತ್ತೇನೆ. ನಾನು‌ ಮುಗಿಲಿಗೆ ಏಣಿ ಹಾಕುವವಳಲ್ಲ. ರಾಜಕಾರಣ ಎಂದರೆ ಯುದ್ಧದಲ್ಲಿ ಸೋಲನ್ನು ಒಪ್ಪಿಕೊಂಡು ಶಸ್ತ್ರಾಸ್ತ್ರ ತ್ಯಾಗ ಮಾಡಿದಾಗ ಅದು ಸೋಲು. ರಾಜಕಾರಣದಲ್ಲಿ ಸೋಲು ಒಂದೇ ಎಂದು ತೆಗೆದುಕೊಳ್ಳಲಾಗುವುದಿಲ್ಲ. ಸೋಲನ್ನು ಕೂಡ ಸಮಾನವಾಗಿ ಸ್ವೀಕಾರ ಮಾಡಿ ಗೆಲುವಿನ‌ ಮುನ್ನುಡಿ ಬರೆದಿರುವುದು ಜನರಿಗೆ ಗೊತ್ತಿದೆ. ಈಗ ನನ್ನ ಮಗ ಸೋಲು ಕಂಡಿದ್ದಾನೆ. ಎಲ್ಲಿ ಸೋಲು ಕಂಡಿದ್ದಾನೋ ಅಲ್ಲಿಯೇ ಗೆಲ್ಲಬೇಕು ಎನ್ನುವ ಛಲ ಮಾಡಿದ್ದಾನೆ. ಇದೊಂದೆ ಸೋಲಿನಿಂದ ಕಂಗೆಡುವಂತಿಲ್ಲ. ನಾವು ಮೌನಕ್ಕೆ ಜಾರಿರುವುದು ಎಲ್ಲಿ ನಮ್ಮಿಂದ ತಪ್ಪಾಗಿದೆ ಎನ್ನುವುದನ್ನು ಹುಡುಕುತ್ತಿದ್ದೇವೆ ಎಂದು ತಿಳಿಸಿದರು.

------------------------------------------ಬಾಕ್ಸ್‌....

ಹೈಕಮಾಂಡ್‌ ತೀರ್ಮಾನವೇ ಅಂತಿಮ

ನಮ್ಮ ಪಕ್ಷದಲ್ಲಿ 136 ಜನ ಶಾಸಕರಿದ್ದಾರೆ. ಎಲ್ಲರ ಅಭಿಪ್ರಾಯ ತೆಗೆದುಕೊಂಡು ಒಳ್ಳೆಯ ಮುಖ್ಯಮಂತ್ರಿಯನ್ನು ನೇಮಕ ಮಾಡಿದ್ದಾರೆ. ನಮ್ಮಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಈಗಾಗಲೇ ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನೆ ಈಡೇರಿಸಿ ಮುಂದೆ ಹೋಗುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕ್ಷ ಸಂಘಟನೆ ಮಾಡಿದ್ದಾರೆ. ಸಿದ್ದರಾಮಯ್ಯನವರು ಸಂಘಟನೆ ಮಾಡಿ ಮುಖ್ಯಮಂತ್ರಿಯಾಗಿದ್ದಾರೆ. ಇಬ್ಬರೂ ಕಾಂಗ್ರೆಸ್‌ನ ಎರಡು ಕಣ್ಣು ಇದ್ದ ಹಾಗೆ‌. ನಾನು ತಳಮಟ್ಟದಿಂದ ಬಂದ ಕಾರ್ಯಕರ್ತೆ. ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

---------------------------------------

ಬಾಕ್ಸ್‌.....

ಹಾರ ಎಲ್ಲಿದೆ ಎಂದು ಕಾಯುತ್ತಿದ್ದೇನೆ...!

ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರ ಸೊಕ್ಕಿನಿಂದ ಏನಾಯಿತು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಇಡೀ ರಾಜ್ಯದಲ್ಲಿ ಹೆಚ್ಚಿನ ಮತಗಳಿಂದ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದರು. ಬಳಿಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಮತಕ್ಷೇತ್ರದಲ್ಲಿ ಶತಾಯಗತಾಯ ನನ್ನ ಸೋಲಿಸಬೇಕು ಎಂದು ಬಂದಿದ್ದರು. ಅದಕ್ಕೆ ಜನ ಏನು ಉತ್ತರ ಕೊಟ್ಟಿದ್ದಾರೆ ಎನ್ನುವುದು ಗೊತ್ತು. ದೊಡ್ಡ ಹಾರವನ್ನು ತಂದು ಲಕ್ಷ್ಮೀ ಹೆಬ್ಬಾಳಕರ ಕೊರಳಿಗೆ ಹಾಕುತ್ತೇನೆ. 2018ರಲ್ಲಿ ನಾನೇ ಗೆಲ್ಲಿಸಿದ್ದು, ನಾನೇ ಸೋಲಿಸುತ್ತೇನೆ ಎಂದಿದ್ದರು. ನಾನು, ಇನ್ನೂ ಹಾರ ಎಲ್ಲಿದೆ ಎಂದು ಕಾಯುತ್ತಿದ್ದೇನೆ. ಗೆದ್ದ ಮೇಲೂ ನಾನೂ ಉತ್ತರ ಕೊಡಲಿಲ್ಲ. ಈಗಲೂ ಉತ್ತರ ಕೊಡಲ್ಲ, ಕಾಲಾಯ ತಸ್ಮೈ ನಮಃ. ಯಾರಿಗೆ ಸೊಕ್ಕು ಬಂದಿದೆ. ಉತ್ತರ ಬರಲಿದೆ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ