ಹುಬ್ಬಳ್ಳಿ:
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಕಾನೂನು ಸುವ್ಯವಸ್ಥೆ ನಮ್ಮ ಕೈಮೀರಿ ಹೋಗಿಲ್ಲ. ವ್ಯವಸ್ಥಿತವಾಗಿದೆ ಎಂದರು.
ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಕೈಗಾರಿಕೆಗಳು ಬರುತ್ತಿಲ್ಲ ಎಂಬ ಆರೋಪಕ್ಕೆ ಉತ್ತರಿಸಿ, ಇದೂ ಸತ್ಯಕ್ಕೆ ದೂರವಾದುದು. ಯಾವ ಕೈಗಾರಿಕೋದ್ಯಮಿಗಳು ರಾಜ್ಯದಿಂದ ಹೊರಗೆ ಹೋಗುತ್ತೇವೆ ಎಂದಿಲ್ಲ. ಜತೆಗೆ ಹೊರಗಿನಿಂದ ಬಂದವರು ಯಾರೂ ಈ ರೀತಿಯ ಅಪವಾದ ಮಾಡಿಲ್ಲ ಎಂದರು.ರಾಜ್ಯದಲ್ಲಿ ಈಗಲೂ ಕೊಲೆ, ಕಳ್ಳತನ ಹಾಗೂ ಡ್ರಗ್ಸ್ ದಂಧೆಗಳು ನಡೆಯುತ್ತಿವೆ ನಿಜ. ಆದರೆ, ಅವು ಈಗ ಎಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ ಎಂಬುದು ಬಹಳ ಮುಖ್ಯ. ಬಿಜೆಪಿ ಅಧಿಕಾರದಲ್ಲೂ ಸಾಕಷ್ಟು ಕೊಲೆ, ಕಳ್ಳತನ ನಡೆದಿವೆ. ಆದರೆ, ನಾವು ಬಂದ ಮೇಲೆ ಎಲ್ಲವನ್ನು ನಿಯಂತ್ರಿಸಿದ್ದೇವೆ. ಪೊಲೀಸರ ಜತೆ ಸಭೆ ಮಾಡಿ ಡ್ರಗ್ಸ್ ದಂಧೆ ನಿಲ್ಲಿಸುವಂತೆ ಘೋಷಣೆ ಮಾಡಿದ್ದೇನೆ. ಎಲ್ಲೆಡೆ ದೊಡ್ಡ ಆಂದೋಲನ ನಡೆಸಲಾಯಿತು. ಸಾವಿರಾರು ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಹಚ್ಚಿ ಸುಟ್ಟು ಹಾಕಿದ್ದೇವೆ. ಕೆಲವು ಡ್ರಗ್ಸ್ ದಂಧೆಕೋರರ ಕಾಲಿಗೆ ಗುಂಡು ಹಾಕಿ ಬಂಧಿಸಿರುವ ಪ್ರಯತ್ನ ಆಗಿದೆ ಎಂದು ಹೇಳಿದರು.
ತಮ್ಮ ತಟ್ಟೆ ನೋಡಿಕೊಳ್ಳಲಿ:
ವಾಲ್ಮೀಕಿ ಹಗರಣದ ಆರೋಪ ಕೇಳಿ ಬಂದ ನಂತರ. ಕೂಡಲೇ ಎಸ್‌ಐಟಿ ರಚನೆ ಮಾಡಿದ್ದೇವೆ. ಚಂದ್ರಶೇಖರ ಆತ್ಮಹತ್ಯೆಯಾದ ಬಳಿಕ ಡೆತ್‌ನೋಟ್ ಸಿಕ್ಕ ನಂತರ ಸಿಬಿಐ, ಇಡಿ ತನಿಖೆ ಮಾಡುತ್ತಿದ್ದಾರೆ. ಆಪಾದನೆ ಬಂದ ಬಳಿಕ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯಲಾಗಿದೆ. ಇನ್ನೂ ತನಿಖಾ ವರದಿ ಬರಬೇಕಿದ್ದು, ಬಿಜೆಪಿ ಸುಮ್ಮನೆ ಆಪಾದನೆ ಮಾಡುತ್ತಿದೆ ಎಂದು ಪರಮೇಶ್ವರ ಹೇಳಿದರು.
ಮುಡಾ ಹಗರಣದ ಆರೋಪದ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ಅವರಿಗೆ ಯಾರು ಸೈಟ್ ಕೊಟ್ಟಿದ್ದಾರೆ? ಕಮೀಟಿಯಲ್ಲಿ ಜಿ.ಟಿ. ದೇವೆಗೌಡ, ರಾಮದಾಸ್, ತನ್ವೀರ್ ಶೇಠ್ ಸೇರಿದಂತೆ ಅನೇಕರಿದ್ದರು. ಆದರೆ, ಅವರೆಲ್ಲರೂ ಕಾಂಗ್ರೆಸ್ ನವರಲ್ಲ. ವರದಿ ಬರಲಿ, ಅಕಸ್ಮಾತ್ ಮುಖ್ಯಮಂತ್ರಿಗಳು ತಪ್ಪಿತಸ್ಥರಿದ್ದರೆ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ ಎಂದರು.
ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ನಾವು ಸಹ ಆ ಮಾಂಸವನ್ನು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಿದ್ದೇವೆ. ಅದು ನಾಯಿ ಮಾಂಸವಲ್ಲ ಎಂದು ಗೊತ್ತಾಗಿದೆ. ವಿನಾಕಾರಣ ಕೆಲವರು ಅಲ್ಲಿ ಹೋಗಿ ಗಲಾಟೆ ಮಾಡಿದ್ದಾರೆ. ಪುನೀತ ಕೆರೆಹಳ್ಳಿ ಶಾಂತಿ ಭಂಗ ಮಾಡಿದ ಕಾರಣಕ್ಕೆ ಅವರ ಮೇಲೆ ಕ್ರಮಕೈಗೊಳ್ಳಲಾಗಿದೆ. ಈ ಹಿಂದೆಯೂ ಅವರ ಮೇಲೆ ಕೆಲ ಪ್ರಕರಣಗಳು ದಾಖಲಾಗಿದ್ದರು ಎಂದರು.
ಸೈಬರ್ ಕ್ರೈಂಗಳು ಹೆಚ್ಚಾದ ಪರಿಣಾಮ ಸೈಬರ್ ಕ್ರೈಂ ಪೊಲೀಸ್ ಠಾಣೆಗಳನ್ನು ಹೆಚ್ಚಿಸಲಾಗಿದೆ. ವಂಚನೆಗೊಳಗಾದ ಸಾವಿರಾರು ಜನರಿಗೆ ನಾವು ಹಣವನ್ನು ಮರಳಿ ಕೊಡಿಸಿದ್ದೇವೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದ ಪರಿಣಾಮ ಗಣೇಶ, ರಂಜಾನ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸದ್ಯ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದರು.ನಾವೇನು ರಾಜಕೀಯ ಸನ್ಯಾಸಿಯಲ್ಲ.