ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಸಂಪನ್ನ

KannadaprabhaNewsNetwork |  
Published : Nov 08, 2025, 02:45 AM IST
ಅವಂದೂರು ಗೋಪಾಲಕೃಷ್ಣ ಯುವ ಸಂಘ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ರಾಜ್ಯ ಮಟ್ಟದ ತೆಂಗಿನಕಾಯಿ ಗುಂಡಿ ಹೊಡೆಯುವ ಸ್ಪರ್ಧೆಯಲ್ಲಿ ಉಪಸ್ಥಿತರಿದ್ದ ಗಣ್ಯರು. | Kannada Prabha

ಸಾರಾಂಶ

ಅವಂದೂರು ಗ್ರಾಮದ ಊರಂಬಲ ಬಳಿಯ ಮದೆ ಪಂಚಾಯಿತಿ ಆಟದ ಮೈದಾನದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರು ಕೆದಂಬಾಡಿ ಎಸ್. ಪುಟ್ಟಯ್ಯ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಅವಂದೂರು ಗೋಪಾಲಕೃಷ್ಣ ಯುವ ಸಂಘ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಎರಡನೇ ವರ್ಷದ ರಾಜ್ಯಮಟ್ಟದ ತೆಂಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು.ಅವಂದೂರು ಗ್ರಾಮದ ಊರಂಬಲ ಬಳಿಯ ಮದೆ ಪಂಚಾಯಿತಿ ಆಟದ ಮೈದಾನದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರು ಕೆದಂಬಾಡಿ ಎಸ್. ಪುಟ್ಟಯ್ಯ ಉದ್ಘಾಟಿಸಿದರು.ಗೋಪಾಲಕೃಷ್ಣ ಯುವ ಸಂಘ ಅಧ್ಯಕ್ಷ ದೇವಾಯಿರ ಕೀರ್ತನ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಅತಿಥಿಗಳಾಗಿ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಭಾಗವಹಿಸಿ, ಅವಂದೂರು ಎಂಬ ಸಣ್ಣ ಗ್ರಾಮದಲ್ಲಿ ರಾಜ್ಯಮಟ್ಟದ ತೆಂಗಿನಕಾಯಿ ಗುಂಡು ಹೊಡೆಯುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ. ಎಲ್ಲ ಗ್ರಾಮದಲ್ಲೂ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಧ್ಯಕ್ಷರು ಧರ್ಮಜ ಉತ್ತಪ್ಪ ಭಾಗವಹಿಸಿ ಮಾತನಾಡಿ, ಕೋವಿ ಎಂಬುದು ಕೊಡಗಿನ ಜನರ ಅವಿಭಾಜ್ಯ ಅಂಗವಾಗಿದ್ದು ಹುಟ್ಟು ಮತ್ತು ಸಾವು ಎರಡರಲ್ಲೂ ನಾವು ಕೋವಿಯನ್ನು ಉಪಯೋಗಿಸುತ್ತಿದ್ದೇವೆ. ಕೋವಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.ವೇದಿಕೆಯಲ್ಲಿ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಳ್ಯದ ಗಿರೀಶ್, ಅವಂದೂರು ಗ್ರಾಮ ಪಂಚಾಯಿತಿ ಸದಸ್ಯರಾದ ಊರೋಲನ ತೇಜಕುಮಾರ್, ದೇವಾಯಿರ ಮೋಹಿನಿ ರಾಘವಯ್ಯ ಹಾಗೂ ದಾನಿಗಳು ಇದ್ದರು.ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧರನ್ನು ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

22 ರೈಫಲ್ ಶೂಟಿಂಗ್, 12 ಬೋರ್ ತೋಟದ ಕೋವಿ, ಏರ್ ಗನ್‌ನಲ್ಲಿ ಮೊಟ್ಟೆಗೆ ಹೊಡೆಯುವುದು ಈ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ವಿಜೇತರು:22 ರೈಫಲ್:ಪ್ರಥಮ ಪ್ರವೀಣ್ ಮಿತ್ತೂರು, ದ್ವಿತೀಯ ಬೋಪಣ್ಣ ಮನವಟ್ಟಿರ, ತೃತೀಯ ನಾಸಿರ್ ಪೊನ್ನಪೇಟೆ.12th ಬೋರ್ ತೋಟದ ಕೋವಿ:

ಪ್ರಥಮ ನಂಜಪ್ಪ ಮಂಡಿರ, ದ್ವಿತೀಯ ಕರಣ್ ವಿ.ಎಸ್., ತೃತೀಯ ವಿಹಾನ್ ದೇವಯ್ಯ ಮಂದಪಂಡ.

ಏರ್ ಗನ್‌ನಲ್ಲಿ ಮೊಟ್ಟೆಗೆ ಹೊಡೆಯುವುದು: ಪ್ರಥಮ ಚಿರಂತ್ ಡಿ., ದ್ವಿತೀಯ ಶರತ್ ಕಬ್ಬಚ್ಚೀರ, ತೃತೀಯ ಶ್ಯಾಮ್ ಕನ್ನಿಕಂಡ.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!