- ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾಲ್ಗೊಂಡಿದ್ದ ಮಾಲೀಕರು । 30ಕ್ಕೂ ಹೆಚ್ಚು ತಳಿ, 150ಕ್ಕೂ ಅಧಿಕ ಶ್ವಾನಗಳು ಭಾಗಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಹೈಸ್ಕೂಲ್ ಮೈದಾನದಲ್ಲಿ ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟದ 7ನೇ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ ನಡೆಯಿತು. ಮುದ್ದು ಮುದ್ದಾದ ತಳಿಗಳ ಜೊತೆಗೆ ಮತ್ತು ಅಷ್ಟೇ ಭಯ ಹುಟ್ಟಿಸುವಂತಹ ಭಯಾನಕ ತಳಿಗಳ ಶ್ವಾನಗಳು ಸಾರ್ವಜನಿಕರ ಗಮನ ಸೆಳೆದವು.ಪ್ರದರ್ಶನದಲ್ಲಿ ಜರ್ಮನ್ ಶೆಫರ್ಡ್, ಚೌಚೌ, ಸೆಂಟ್ ಬರ್ನಾಡ್, ಸೈಬೇರಿಯನ್ ಹಸ್ಕಿ, ರಾಟ್ ವಿಲ್ಲರ್, ಡಾಬರ್ ಮನ್, ಪಗ್, ಗ್ರೇಟ್ ಡೆನ್, ಪಿಟ್ ಬುಲ್, ಡ್ಯಾಶ್ ಹೌಂಡ್, ಸಿಡ್ಜು, ಲೆಬ್ರಡಾರ್, ಗೊಲ್ಡನ್ ರಿಟವಿಲ್ಲರ್, ಪೆಮೊರಿಯನ್, ಮುಧೋಳ ಹೌಂಡ್, ಬಾಕ್ಸರ್, ಬ್ರಿಟಿಷ್ ಬುಲ್ಡಾಗ್ ಹೀಗೆ ವಿಭಿನ್ನ ತಳಿಗಳ ಶ್ವಾನಗಳು ಎಲ್ಲರ ಗಮನ ಸೆಳೆದವು.
ಸುತ್ತಿನಿಂದ ಸುತ್ತಿಗೆ ಸ್ಪರ್ಧೆ ತೀವ್ರಗೊಂಡಂತೆ ನಾಯಿಗಳ ಪ್ರದರ್ಶನವೂ ಅತ್ಯಾಕರ್ಷಕವಾಗಿತ್ತು. ತಮ್ಮ ಮಾಲೀಕ, ತರಬೇತುದಾರರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದ ನಾಯಿಗಳ ಪ್ರರ್ದಶನ ಮಾಲೀಕರು, ತರಬೇತುದಾರರಿಗೆ ಮಾತ್ರವಲ್ಲದೇ, ನೋಡುಗರಿಗೂ ಉತ್ತೇಜನ, ಮುದ ನೀಡುವಂತಿತ್ತು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ರಾಘವೇಂದ್ರ ನಲ್ಲೂರು, ಶಿವಕುಮಾರ, ಸುನೀಲ್, ವಿನಾಯಕ, ಸಿದ್ದೇಶ, ರವಿವರ್ಮ, ವಿನಯ್ ಇತರರು ಇದ್ದರು.
-6ಕೆಡಿವಿಜಿ44, 45, 46, 47, 48, 49.ಜೆಪಿಜಿ: