ಪಟ್ಟಣದ ಎಸ್ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) 19 ವರ್ಷದೊಳಗಿನ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯದಲ್ಲಿ ಅತಿಥೇಯ ಹಾವೇರಿ ಜಿಲ್ಲಾ ತಂಡವು ಗದಗ ತಂಡವನ್ನು ಮಣಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶ ಪಡೆಯಿತು.
ಬ್ಯಾಡಗಿ: ಪಟ್ಟಣದ ಎಸ್ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) 19 ವರ್ಷದೊಳಗಿನ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯದಲ್ಲಿ ಅತಿಥೇಯ ಹಾವೇರಿ ಜಿಲ್ಲಾ ತಂಡವು ಗದಗ ತಂಡವನ್ನು ಮಣಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶ ಪಡೆಯಿತು.
ಅಂಕಣ 4ರಲ್ಲಿ ನಡೆದ ಹಾವೇರಿ ವಿರುದ್ಧ ಗದಗ ಬಹುತೇಕ ಏಕಪಕ್ಷೀಯವಾಗಿ ಕಂಡು ಬಂದ ಪಂದ್ಯದ ಆರಂಭದಿಂದಲೇ ಗದಗ ವಿರುದ್ಧ ಹಿಡಿತ ಸಾಧಿಸಿದ ಹಾವೇರಿ ರಾಷ್ಟ್ರೀಯ ಆಟಗಾರ್ತಿ ರುಕ್ಸಾರ್ ಬಾನು, ಸಾನಿಕಾ ಹಾಗೂ ನೀಲಮ್ಮ ಆಲರೌಂಡ್ ಪ್ರದರ್ಶನದಿಂದ ಪಂದ್ಯದ ಮೊದಲಾರ್ಧದಲ್ಲಿ 27 ಅಂಕಗಳ ಮುನ್ನಡೆ (31-04) ಸಾಧಿಸುವ ಮೂಲಕ ಎದುರಾಳಿ ಪಡೆಗೆ ಕೇವಲ 04 ಅಂಕಗಳನ್ನು ಬಿಟ್ಟುಕೊಟ್ಟಿತು. ಲೆಫ್ಟ್ ಕಾರ್ನರ್ ಸೌಭ್ಯಾಗ್ಯ, ಆಲರೌಂಡರ್ ಸೃಷ್ಟಿ ಹಾಗೂ ಲೆಫ್ಟ ಥರ್ಡ ಸಂಜನಾ ಕ್ಯಾಚಿಂಗನಲ್ಲಿ ಉತ್ತಮ ಪ್ರದರ್ಶನ ತೋರಿದರು. ದ್ವಿತೀಯಾರ್ಧದಲ್ಲಿ ಸ್ವಲ್ಪಮಟ್ಟಿನ ಪ್ರತಿರೋಧ ತೋರಿದ ಗದಗ 12 ಅಂಕಗಳನ್ನು ಕಲೆ ಹಾಕಿತು. ಆದರೆ ಸಾಂಘಿಕ ಹೋರಾಟ ತೋರುವ ಮೂಲಕ 18 ಅಂಕ ಗಳಿಸಿದ ಹಾವೇರಿ ಅಂತಿಮವಾಗಿ 38 ಅಂಕಗಳ ಮುನ್ನಡೆಯೊಂದಿಗೆ (49-11) ಎರಡನೇ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಶಿವಮೊಗ್ಗ ಎರಡನೇ ಸುತ್ತಿಗೆ: ಅಂಕಣ 1ರಲ್ಲಿ ಏಕಪಕ್ಷೀಯವಾಗಿ ಕಂಡು ಬಂದ ಶಿವಮೊಗ್ಗ ಜಿಲ್ಲಾ ವಿರುದ್ಧ ಚಿತ್ರದುರ್ಗ ಪಂದ್ಯದಲ್ಲಿ 65 ಅಂಕಗಳ ಮುನ್ನಡೆಯೊಂದಿಗೆ (75-14) ಚಿತ್ರದುರ್ಗ ತಂಡವನ್ನು ಸುಲಭವಾಗಿ ಮಣಿಸಿದ ಶಿವಮೊಗ್ಗ ಎರಡನೇ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಪಂದ್ಯದ ಮೊದಲಾರ್ಧದಲ್ಲಿ 33 ಅಂಕಗಳ (38-05) ಮುನ್ನಡೆ ಪಡೆದ ಶಿವಮೊಗ್ಗ ದ್ವಿತೀಯಾರ್ಧದಲ್ಲಿ 28 ಅಂಕಗಳನ್ನು (37-09) ಮುನ್ನಡೆ ಸಾಧಿಸಿತು. ಪಂದ್ಯಾವಳಿಯಲ್ಲಿ ಒಟ್ಟು 33 ತಂಡಗಳು ಪಾಲ್ಗೊಂಡಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.