ಕನ್ನಡಪ್ರಭ ವಾರ್ತೆ ಬೀಳಗಿ
ಬಾಡಗಂಡಿ ಎಸ್.ಆರ್. ಪಾಟೀಲ ವೈದೈಕೀಯ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ವಿವಿಧ ವೈದ್ಯಕೀಯ ಕಾಲೇಜುಗಳ ವಿಧಿವಿಜ್ಞಾನ ವೈದ್ಯಕೀಯ ಮತ್ತು ವಿಷಶಾಸ್ತ್ರ ವಿಭಾಗಳಗಳಿಂದ ಕರ್ನಾಟಕ ಮೆಡಿಕೊ ಲೀಗಲ್ ಸೊಸೈಟಿಯ (KAMLS CON 2025) 33ನೇ ರಾಜ್ಯಮಟ್ಟದ ಮೆಡಿಕೊ ಲೀಗಲ್ ಸಮ್ಮೇಳನ ನ.7 ಮತ್ತು 8ರಂದು ಎರಡು ದಿನನಡೆಯಲಿದೆ ಎಂದು ಮಾಜಿ ಸಚಿವರು ಹಾಗೂ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷ ಎಸ್.ಆರ್. ಪಾಟೀಲ ತಿಳಿಸಿದರು.ಬಾಡಗಂಡಿಯ ಎಸ್.ಆರ್.ಪಾಟೀಲ ಮೆಡಿಕಲ್ ಕಾಲೇಜಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಮ್ಮೇಳನವನ್ನು ರಾಜ್ಯ ಹೈಕೋರ್ಟ್ ನ್ಯಾಯಾಧೀಶರಾದ ರವಿ ವಿ. ಹೊಸಮನಿ ಉದ್ಘಾಟಿಸುವರು. ಬೆಳಗಾವಿ ಪೊಲೀಸ್ ಐಜಿಪಿ ಚೇತನಸಿಂಗ್ ರಾಥೋರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎಸ್ ಆರ್. ಪಾಟೀಲ ವೈದ್ಯಕೀಯ ಮಹಾ ವಿದ್ಯಾಲಯದ ಅಧ್ಯಕ್ಷರು, ಮಾಜಿ ಸಚಿವರಾದ ಎಸ್.ಆರ್. ಪಾಟೀಲ ಅಧ್ಯಕ್ಷತೆ ವಹಿಸುವರು. ನ.8ರಂದು ಈ ಭಾಗದ ರೋಗಿಗಳ ಅನುಕೂಲಕ್ಕೆ ಎಂ.ಆರ್.ಐ ಸ್ಕ್ಯಾನರ್ ಉದ್ಘಾಟನೆಗೊಳ್ಳಲಿದೆ. ವೈದ್ಯಕೀಯ ವೃತ್ತಿ, ಖಾಸಗಿ ಕ್ರಿಮಿನಲ್ ಕಾನೂನು ವಕೀಲರು, ಪೊಲೀಸ್, ನ್ಯಾಯಾಧೀಶರು, ವಿಜ್ಞಾನಿಗಳು, ಪ್ರಾಸಿಕ್ಯೂಷನ್ ಕ್ಷೇತ್ರಗಳ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಮೆಡಿಕೊ-ಲೀಗಲ್ ಸೊಸೈಟಿ ಅಧ್ಯಕ್ಷ ಹಾಗೂ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜಿನ ಡೀನ್ ಡಾ, ಧರ್ಮರಾಯ ಇಂಗಳೆ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರ, ಮಹಾರಾಷ್ಟ, ತಮಿಳನಾಡು ರಾಜ್ಯದಿಂದ ವೈದ್ಯರು ಭಾಗವಹಿಸುವರು.. ಇದೇ ವೇಳೆ ವೈದೈಕೀಯ ವಿಭಾಗದಲ್ಲಿ ಎಲ್ಲವು ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕಗಳಿವೆ. ಇಂಗ್ಲಿಷ್ ಇದ್ದ ಪುಸ್ತಕವನ್ನು ಕನ್ನಡ ಭಾಷೆಯಲ್ಲಿ ವಿಧಿ ವೈದ್ಯಕೀಯ ಶಾಸ್ತ್ರ ಮತ್ತು ವಿಷಶಾಸ್ತ್ರ ಪುಸ್ತಕ ಎಂದು ನಾನೇ ಬರೆದಿದ್ದು, ಇದರಿಂದ ಪೋಲಿಸ್ ಇಲಾಖೆ, ನ್ಯಾಯಾಲಯಕ್ಕೆ, ವೈದ್ಯರಿಗೆ ಮತ್ತು ಇತರಿಗೆ ಇದರಲ್ಲಿರುವ ಮಾಹಿತಿ ಬಹಳ ಮುಖ್ಯವಾಗುವುದು. ಇದನ್ನೂ ಸಹ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.ಸುದ್ದಿಗೊಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್. ಪಾಟೀಲ, ಸಂಸ್ಥೆಯ ಉಪಾಧ್ಯಕ್ಷ ಅನುಷಾ ನಾಡಗೌಡ , ಆಡಳಿತಾಧಿಕಾರಿ ಡಾ.ರಾಘವೇಂದ್ರ ಪಾಟೀಲ, ಡೀನ್ ಡಾ, ಧರ್ಮರಾಯ ಇಂಗಳೆ, ವೈದ್ಯಕೀಯ ಅಧೀಕ್ಷಕರು ಡಾ, ವಿಜಯಾನಂದ ಹಳ್ಳಿ, ಮುಖ್ಯ ಹಣಕಾಸು ಅಧಿಕಾರಿ ಅಶೋಕ ದಾದಮಿ, ಬಿ.ಎ.ಎಂಎಸ್ ಪ್ರಾಂಶುಪಾಲ ಡಾ.ರಾಜೇಶ್ವರಿ ಬಿರಾದಾರ, ಕೆ.ಎ.ಎಂ.ಎಲ್ ಡಾ. ಸೋಮಶೇಖರ ಪೂಜಾರಿ ಇದ್ದರು.
ಕ್ರೈ೦ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಹೊರತು ಒಬ್ಬ ಮುಗ್ಧ ನಿರಪರಾಧಿಗೆ ಶಿಕ್ಷೆಯಾಗಬಾರದು. ಈ ದಿಸೆಯಲ್ಲಿ ಇಂತಹ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಅಪರಾದದ ಪ್ರಕರಣಗಳು ಕಡಿಮೆಯಾಗಲು ಸಾಧ್ಯವಾಗಲಿದೆ.ಎಸ್.ಆರ್. ಪಾಟೀಲ ಮಾಜಿ ಸಚಿವರು