ಹಳಿಯಾಳದಲ್ಲಿ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗೆ ತೆರೆ

KannadaprabhaNewsNetwork |  
Published : Oct 08, 2026, 02:15 AM IST
7ಎಚ್.ಎಲ್.ವೈ-3(ಎ): ಮಹಿಳಾ ವಿಭಾಗದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ ಜಿ ಎ ಟಿ ಕಾಲೇಜು ಬೆಂಗಳೂರು ತಂಡ.  | Kannada Prabha

ಸಾರಾಂಶ

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಅವರು, ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿದ ಎಲ್ಲ ಕ್ರೀಡಾಪಟುಗಳಿಗೆ ಅಭಿನಂದಿಸಿ, ಸ್ಪರ್ಧಾ ವಿಜೇತರನ್ನು ಪುರಸ್ಕರಿಸಿ ಶುಭ ಹಾರೈಸಿದರು.

ಹಳಿಯಾಳ: ಪಟ್ಟಣದ ಕೆಎಲ್ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಎರಡೂ ದಿನಗಳ ಬೆಳಗಾವಿ ವಿಟಿಯು ವ್ಯಾಪ್ತಿಯ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಮಂಗಳೂರಿನ ಸೇಂಟ್ ಜೋಸೆಫ್ ಕಾಲೇಜು, ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಜಿಎಟಿ ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದವು.

ಮಂಗಳವಾರ ಸಂಜೆ ನಡೆದ ಪಂದ್ಯಾವಳಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಅವರು, ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿದ ಎಲ್ಲ ಕ್ರೀಡಾಪಟುಗಳಿಗೆ ಅಭಿನಂದಿಸಿ, ಸ್ಪರ್ಧಾ ವಿಜೇತರನ್ನು ಪುರಸ್ಕರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಡೀನ್ ಅಕಾಡೆಮಿಕ್ ಡಾ. ಗುರುರಾಜ್ ಹತ್ತಿ, ಡೀನ್ ಅಡ್ಮಿನ್ ಡಾ. ಶಂಕರ್ ಬಡಿಗೇರ್ ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗದಿಗೆಪ್ಪ ಯಲ್ಲೂರ್ ಕಾರ್ಯಕ್ರಮ ಸಂಯೋಜಿಸಿದ್ದರು. ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ 52 ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನ 230ಕ್ಕೂ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕುಸ್ತಿ ಪಟ್ಟುಗಳ ಕೌಶಲ್ಯವನ್ನು ಪ್ರದರ್ಶಿಸಿ ಗಮನಸೆಳೆದರು.

ಸ್ಪರ್ಧಾ ವಿಜೇತರು: ಮಹಿಳಾ ವಿಭಾಗ, 50ಕೆಜಿ: ಚಂದನಾ, ಬಿಐಟಿ ದಾವಣಗೆರೆ(ಪ್ರಥಮ) 53ಕೆಜಿ: ಪ್ರಾಪ್ತಿ ಶೆಟ್ಟಿ, ಸೆಂಟ್ ಜೋಸೆಫ್ ಕಾಲೇಜು ಮಂಗಳೂರು(ಪ್ರಥಮ),

55ಕೆಜಿ: ಶೌರ್ಯ ಶೆಟ್ಟಿ, ಸೆಂಟ್ ಜೋಸೆಫ್ ಕಾಲೇಜು ಮಂಗಳೂರು(ಪ್ರಥಮ), 57ಕೆಜಿ: ಸಿಂಚನಾ ಕೆ., ಜಿಎಟಿ ಬೆಂಗಳೂರು(ಪ್ರಥಮ),

59 ಕೆಜಿ: ಸಿಂಚನಾ ವಿ., ಜಿಎಟಿ ಬೆಂಗಳೂರು(ಪ್ರಥಮ), 65 ಕೆಜಿ: ಪೂಜಾ, ಜಿಎಟಿ ಬೆಂಗಳೂರು(ಪ್ರಥಮ), 68 ಕೆಜಿ: ವಿದ್ಯಾಶ್ರೀ, ಜಿಎಟಿ ಬೆಂಗಳೂರು(ಪ್ರಥಮ), 72ಕೆಜಿ: ಚಿನ್ಮಯಿ, ಡಿಬಿಐಟಿ ಮಂಗಳೂರು(ಪ್ರಥಮ), 76 ಕೆಜಿ: ಸಿಂಚನಾ, ಎಸ್‌ಜೆಬಿಐಟಿ ಬೆಂಗಳೂರು(ಪ್ರಥಮ)

ಪುರುಷರ ವಿಭಾಗ: 57 ಕೆಜಿ: ಪ್ರಜ್ವಲ್, ಎಐಟಿಎಂ ಬೆಳಗಾವಿ(ಪ್ರಥಮ), 61 ಕೆಜಿ: ಚೇತನ್, ಬಿಎಂಎಸ್‌ಸಿಇ ಬೆಂಗಳೂರು(ಪ್ರಥಮ), 65 ಕೆಜಿ: ರಾಕೇಶ್ ವಿಟಿಯು ಬೆಳಗಾವಿ(ಪ್ರಥಮ) 70 ಕೆಜಿ: ಅಶ್ವಿನ್, ಸೆಂಟ್ ಜೋಸೆಫ್ ಕಾಲೇಜು ಮಂಗಳೂರು(ಪ್ರಥಮ) 74 ಕೆಜಿ: ಭುವನ್, ಎಂಐಟಿ ಮೈಸೂರು (ಪ್ರಥಮ) 79 ಕೆಜಿ: ಅಬ್ದುಲ್, ಬಿಐಟಿ ದಾವಣಗೆರೆ(ಪ್ರಥಮ) 86 ಕೆಜಿ: ವೇದಾಂತ, ಎಸ್‌ಎಂವಿಐಟಿಎಂ, ಸಂಕೇಶ್ವರ್ (ಪ್ರಥಮ) 92 ಕೆಜಿ: ಸಂಕೇತ್, ಸೆಂಟ್ ಜೋಸೆಫ್ ಕಾಲೇಜು ಮಂಗಳೂರು(ಪ್ರಥಮ) 97 ಕೆಜಿ: ಮೊಹಮ್ಮದ್ ಉಮೇದ್, ನ್ಯೂ ಹೋರಿಜೋನ್ ಬೆಂಗಳೂರು(ಪ್ರಥಮ) 97ರಿಂದ 125ಕೆಜಿ: ಹರ್ಷಿತ್, ಎಜೆಐಇಟಿ ಮಂಗಳೂರು(ಪ್ರಥಮ) ವೀರಾಗ್ರಣಿ ಪ್ರಶಸ್ತಿ: ಪುರುಷರ ವಿಭಾಗದ ಸಮಗ್ರ ವೀರಾಗ್ರಣಿ ಪ್ರಶಸ್ತಿ ಸೇಂಟ್ ಜೋಸೆಫ್ ಕಾಲೇಜು, ಮಂಗಳೂರು ಪಡೆದರೆ, ಮಹಿಳಾ ವಿಭಾಗದಲ್ಲಿ ಜಿಎಟಿ ಬೆಂಗಳೂರು ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನವಾಯಿತು. ಪ್ರಥಮ ಸ್ಥಾನ ಪಡೆದ ಎಲ್ಲಾ ಸ್ಪರ್ಧಿಗಳು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವರ್ಣವಲ್ಲೀ ಮಠದ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ
ಕ್ರೀಡಾಕೂಟದಲ್ಲಿ ಹಳಿಯಾಳ, ಮುಂಡಗೋಡಕ್ಕೆ ಸಮಗ್ರ ಪ್ರಶಸ್ತಿ