ಕನ್ನಡಪ್ರಭ ವಾರ್ತೆ ಹಳೇಬೀಡು
ಹಳೇಬೀಡಿನ ಕಲ್ಪತರು ವಿದ್ಯಾಸಂಸ್ಥೆಯ ಆವರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ನಡೆಸಿದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಜನತೆಯನ್ನು ಸುರಕ್ಷಿತವಾಗಿ ಕಾಪಾಡಬೇಕೆಂಬ ಉದ್ದೇಶದಿಂದ ಜೆಡಿಎಸ್ ಮತ್ತು ಬಿಜೆಪಿ ಪಕ್ಷವನ್ನು ರಾಜ್ಯಾದ್ಯಂತ ಗೆಲ್ಲಿಸುವ ಗುರಿ ನಮ್ಮದಾಗಿದೆ. ಪ್ರಪಂಚದ ಶ್ರೇಷ್ಠ ನಾಯಕ ಎಂದರೆ ಅದು ನರೇಂದ್ರ ಮೋದಿ. ಈ ದೇಶ ಸದೃಢವಾಗಿ ಬೆಳೆಯಬೇಕಾದರೆ ರಾಜ್ಯಾದ್ಯಂತ ಯುವಕರು ಮತದಾನದಲ್ಲಿ ಭಾಗವಹಿಸಬೇಕು, ಇಡೀ ದೇಶವನ್ನು ಸುರಕ್ಷಿತವಾಗಿ ಕಾಪಾಡಲು ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡಬೇಕು ಎಂದು ಎಲ್ಲರಲ್ಲೂ ಮನವಿ ಮಾಡಿಕೊಂಡರು.
ಯಡಿಯೂರಪ್ಪ ಹಾಗೂ ನಾವು ರಾಜ್ಯಾದ್ಯಂತ ಹಲವು ವೇದಿಕೆಗಳನ್ನು ಹಂಚಿಕೊಂಡಿದ್ದೇವೆ, ನಮ್ಮ ಶ್ರಮದ ಮೇಲೆ ನರೇಂದ್ರ ಮೋದಿಯವರು ತುಂಬಾ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ, ಆ ವಿಶ್ವಾಸವನ್ನು ನಾವು ಉಳಿಸಬೇಕು, ಇಡೀ ರಾಜ್ಯದ ಎಲ್ಲಾ ಮತದಾರು ಹಾಗೂ ಎರಡು ಪಕ್ಷದ ಕಾರ್ಯಕರ್ತರು ಬಿಜೆಪಿಯ ಹೋರಾಟಕ್ಕೆ ಕಂಕಣ ಕಟ್ಟಿ, ದೇಶವನ್ನು ಉಳಿಸಬೇಕೆಂದು ತಿಳಿಸಿದರು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಶಾಂತಿಗಾಗಿ ಬಿಜೆಪಿ ಸರ್ಕಾರ ಬರಬೇಕು. ಈ ರಾಜ್ಯ ಸಕಾರ್ರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಎಲ್ಲಾ ಕಡೆ ಕೋಮು ಗಲಭೆಗಳು ಎದ್ದು ಕಾಣುತ್ತಿವೆ. ಹಾಗಾಗಿ ದೇಶದಲ್ಲಿ ಸುಭದ್ರ ಸರ್ಕಾರ ರಚನೆಯಾಗಬೇಕೆಂದರೆ ಬಿಜೆಪಿ ಸರ್ಕಾರವನ್ನು ಗೆಲ್ಲಿಸಬೇಕೆಂದರು.
ಬೇಲೂರು ಕ್ಷೇತ್ರ ಶಾಸಕ ಸುರೇಶ್ ಮಾತನಾಡಿ, ನಮ್ಮೆಲ್ಲರ ನಾಯಕರಾದ ದೇವೇಗೌಡರು ಮತ್ತು ಯಡಿಯೂರಪ್ಪನವರನ್ನು ಒಂದೇ ವೇದಿಕೆ ಮೇಲೆ ಕಂಡು ಸಂತೋಷವಾಗಿದೆ, ಪ್ರಜ್ವಲ್ ರೇವಣ್ಣನವರನ್ನು ೩ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲೇಬೇಕು ಎಂಬುದು ನಮ್ಮ ಗುರಿಯಾಗಿದೆ, ಇದಕ್ಕೆ ಎಲ್ಲಾ ಕಾರ್ಯಕರ್ತರು ಕಂಕಣಬದ್ಧರಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು. ಬೇಲೂರು ಮಾಜಿ ಶಾಸಕ ಹಾಗೂ ಜಿಲ್ಲಾಧ್ಯಕ್ಷ ಲಿಂಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್, ಬೇಲೂರು ಮಂಡಲದ ಅಧ್ಯಕ್ಷ ಆನಂದ್, ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ.ಅನಂತ ಸುಬ್ಬರಾವ್ ಹಾಗೂ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಕಾಂಗ್ರೆಸ್ ನಿಂದ ರೈತವಿರೋಧಿ ಧೋರಣೆ: ಬಿಎಸ್ ವೈ:ಕೇಂದ್ರ ಸರ್ಕಾರದಿಂದ ೬ ಸಾವಿರ ರು.ಗಳ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ೪ ಸಾವಿರ ರು. ಗಳ ನೆರವು ಸೇರಿಸಿ ವಾರ್ಷಿಕ ೧೦ ಸಾವಿರ ರು. ರೈತರ ನೆರವು ಯೋಜನೆಯನ್ನು ಕಾಂಗ್ರೆಸ್ ರದ್ದುಗೊಳಿಸಿದೆ. ಇದು ರೈತರ ವಿರೋಧಿ ಸರ್ಕಾರದ ಧೋರಣೆಯಾಗಿದೆ, ಇಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ರಾಜ್ಯದ ಅಭಿವೃದ್ಧಿ ನಿರ್ಲಕ್ಷಿಸಿದ ಈ ಸರ್ಕಾರಕ್ಕೆ ಛೀಮಾರಿ ಹಾಕಬೇಕು. ಎಲ್ಲಿ ನೋಡಿದರೂ ರಸ್ತೆಗಳು ಗುಂಡಿಮಯವಾಗಿವೆ, ರಸ್ತೆಗುಂಡಿಗಳನ್ನು ಮುಚ್ಚುವ ಯೋಗ್ಯತೆ ಈ ಸರಕಾರಕ್ಕೆ ಇಲ್ಲ, ಇಂಥ ಸರ್ಕಾರವು ಇದ್ದರೂ ಒಂದೇ ಇಲ್ಲದ್ದಿರೂ ಒಂದೇ, ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಚಿತ್ರಣ ಬದಲಾವಣೆಯಾಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಪ್ರಧಾನಮಂತ್ರಿ ಯಾರು ಎಂಬುದೇ ತಿಳಿದಿಲ್ಲ, ಅವರಲ್ಲಿ ಗೊಂದಲ ಪ್ರಾರಂಭವಾಗಿದೆ ಎಂದರು.