157 ಸರ್ಕಾರಿ ಶಾಲೆಗಳ 9609 ವಿದ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿ ವಿತರಣೆ

KannadaprabhaNewsNetwork |  
Published : Jun 30, 2026, 01:15 AM IST
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಗುಟ್ಟೆ ಗ್ರಾಮದ    ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯೆ ವಿದ್ಯಾರ್ಥಿಗಳಿಗೆ  ಚೈತನ್ಯ ಸಿಂಚನ ಸಂಸ್ಥೆಯಿಂದ ಲೇಖನ ಸಾಮಾಗ್ರಿ ವಿತರಿಸಲಾಯಿತು. | Kannada Prabha

ಸಾರಾಂಶ

ತಾಲೂಕಿನ 157 ಸಾರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಚೈತನ್ಯ ಸಿಂಚನ ಸಂಸ್ಥೆಯಿಂದ ಆಯಾ ತರಗತಿಗೆ ಅನುಗುಣವಾಗಿ ಉಚಿತವಾಗಿ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನ 157 ಸಾರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಚೈತನ್ಯ ಸಿಂಚನ ಸಂಸ್ಥೆಯಿಂದ ಆಯಾ ತರಗತಿಗೆ ಅನುಗುಣವಾಗಿ ಉಚಿತವಾಗಿ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಸಂಸ್ಥೆಯ ಪದಾಧಿಕಾರಿಗಳು ಸಿ.ವಿ.ಕುಮಾರ್ 2010ರಲ್ಲಿ ತಮ್ಮ ಗ್ರಾಮದ ಸರ್ಕಾರಿ ಶಾಲೆ ಜೊತೆಗೆ ಸುಮಾರ್ 7 ಶಾಲೆಗಳ 500 ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿದರು. ನಂತರದ ದಿನಗಳಲ್ಲಿ ಲೇಖನ ಸಾಮಾಗ್ರಿಗಳಿಗೆ ಇತರೆ ಸರ್ಕಾರಿ ಶಾಲೆಗಳಿಂದ ಬೇಡಿಕೆ ಬಂದಿದ್ದರಿಂದ ಎಲ್.ಐ.ಸಿ. ನೌಕರರು ಹಾಗೂ ಇತರೆ ಸಮಾನ ಮನಸ್ಕರರ ಸಹಕಾರದಿಂದ ಇತರೆ ಶಾಲೆಗಳಿಗೆ ವಿಸ್ತರಿಸುತ್ತ ಹೋದೆವು. ಎಲ್ಲರ ಸಹಕಾರದೊಂದಿಗೆ ಈ ವರ್ಷ 157 ಶಾಲೆಗಳ 9609 ವಿದ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿಗಳನ್ನುವಿತರಿಸಿರುವುದು ಖುಷಿ ನೀಡುತ್ತಿದೆ ಎನ್ನುತ್ತಾರೆ ಚೈತನ್ಯ ಸಿಂಚನ ಸಂಸ್ಥೆಯ ಪದಾಧಿಕಾರಿಗಳು ಟ್ರಸ್ಟಿ ಸಿ.ವಿ.ಕುಮಾರ್ ಮಾತನಾಡಿ ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳನ್ನು ಉಳಿಸುವುದರ ಜೊತೆಗೆ ಬಡ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ನಮ್ಮ ತಂಡ ಸತತ ಈಗ್ಗೆ 16 ವರ್ಷಗಳಿಂದ ಮಕ್ಕಳಿಗೆ ಬೇಕಾಗುವ ಕಲಿಕಾ ಸಾಮಗ್ರಿಗಳನ್ನು ಬೇಡಿಕೆಗೆ ಅನುಗುಣವಾಗಿ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ನೀಡುವುದಕ್ಕೆ ಮುಂಚೆ 2 ದಿನಗಳು ನಮ್ಮ ತಂಡ ಅವುಗಳೆಲ್ಲವನ್ನು ಕ್ರಮ ಬದ್ಧವಾಗಿ ಜೋಡಿಸುತ್ತಾರೆ ಎಂದರು.

ಚೈತನ್ಯ ಸಿಂಚನ ಸಂಸ್ಥೆ ಪದಾಧಿಕಾರಿಗಳಾದ ದ್ವಾರಕನಾಥ್, ಪ್ರಿಯಾಲಕ್ಷ್ಮೀ, ರಘುಪ್ರಸಾದ್, ಲಕ್ಷ್ಮಣ್,ರವಿ ಶಂಕರ್, ಶಿವಕುಮಾರಪ್ಪ, ಮಹಾಬಲೇಶ್ವರ ಶಿಕ್ಷಕರಾದ ನಂಜರೆಡ್ಡಿ, ಜ್ಯೋತಿ, ಶ್ರೀಕಾಂತ್, ನಾಗೇಂದ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಹ್ಯ ಯಶಸ್ಸಿನ ಆತುರದಲ್ಲಿ ಅಂತರ್ಯದ ಯಶಸ್ಸು ಮರೆಯದಿರಿ
ದಲಿತರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಕೃತ್ಯಕ್ಕೆ ಖಂಡನೆ