ಕನ್ನಡಪ್ರಭ ವಾರ್ತೆ ಸಿರಿಗೆರೆ
ಸಿರಿಗೆರೆಯಲ್ಲಿ ಬಿಎಲ್‌ಆರ್ ಮತ್ತು ಎಂಬಿಆರ್ ಕಾಲೇಜಿನ ಎನ್‌ಸಿಸಿ ಘಟಕ ಹಾಗೂ ಕಲಾ ಮತ್ತು ವಾಣಿಜ್ಯ ವಿಭಾಗಗಳು ಹಾಗೂ ಭರಮಸಾಗರ ಪೊಲೀಸ್ ಠಾಣೆಯ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.
ಮಾದಕ ದ್ರವ್ಯಗಳ ಸೇವನೆ, ಸಾಗಣೆಯ ವಿಚಾರವಾಗಿ ಪೊಲೀಸ್ ಇಲಾಖೆ ಸರ್ವಶಕ್ತವಾಗಿ ಹೋರಾಟ ನಡೆಸುತ್ತಿದೆ. ಇವುಗಳನ್ನು ಹೊಂದುವುದು, ಬಳಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ನಮ್ಮ ಯುವಕರು ಇದರಿಂದ ದೂರ ಇರುವ ಜೊತೆಗೆ ತಮ್ಮ ಹತ್ತಿರದವರಿಗೆ ಇದರ ಅಪಾಯಗಳ ಕುರಿತು ಮಾಹಿತಿ ನೀಡಬೇಕು ಎಂದರು.ಮತ್ತೋರ್ವ ಅತಿಥಿಯಾಗಿದ್ದ ಠಾಣೆಯ ಎಂ.ಬಿ.ಜ್ಯೋತಿ ಮಾತನಾಡಿ, ಮಾದಕ ದ್ಯವ್ಯ ಸೇವನೆಯ ಅಪಾಯದಿಂದ ಯುವಕರನ್ನು ಅದರಲ್ಲೂ ಮುಖ್ಯವಾಗಿ ಕಾಲೇಜು ಮೆಟ್ಟಿಲು ತುಳಿದಿರುವ ವಿದ್ಯಾರ್ಥಿಗಳನ್ನು ಹಿಂದೆ ಸರಿಸಲು ಶಿಕ್ಷಕರು ಮತ್ತು ಪೋಷಕರ ಪಾತ್ರ ದೊಡ್ಡದಿದೆ. ಪರಿಣಾಮಕಾರಿ ಈ ಕೆಲಸವನ್ನು ಎಲ್ಲರೂ ಸಾಮೂಹಿಕವಾಗಿ ನಿರ್ವಹಿಸಿದರೆ ಈ ಅಂಟುಜಾಡ್ಯದಿಂದ ಯುವಕರು ಹೊರಗೆ ಬರಬಹುದು ಎಂದರು.
ಪ್ರಾಸ್ತಾವಿಕ ಮಾತನಾಡಿದ ಮೇಜರ್ ರಾಜಶೇಖರ್ ಮಾದಕ ವಸ್ತುಗಳ ಸೇವನೆ ಕುಟುಂಬ ಹಾಗೂ ಸಮಾಜದ ಮೇಲೆ ಬೀಳುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ದುಷ್ಪರಿಣಾಮಗಳು ಅಗಾಧವಾಗಿವೆ ಎಂದು ಹೇಳಿದರು.
ಪ್ರಾಚಾರ್ಯ ಶಿವನಗೌಡ ಸುರಕೋಡ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಎನ್‌ಸಿಸಿ ಅಧಿಕಾರಿ ನವೀನ್ ಕುಮಾರ್, ಭರಮಸಾಗರ ಠಾಣೆಯ ಪೊಲೀಸ್ ಸಿಬ್ಬಂದಿ ಸಿರಿಗೆರೆಯ ಪೊಲೀಸ್ ಠಾಣೆಯ ಮುಖ್ಯ ಪೇದೆ ಯತೀಶ್ ಉಪಸ್ಥಿತರಿದ್ದರು.