ದುಶ್ಚಟಗಳಿಂದ ದೂರವಿರಿ: ಕರುಣೇಶ್ವರ ಶ್ರೀ

KannadaprabhaNewsNetwork |  
Published : Jan 10, 2024, 01:45 AM IST
ವಡಗೇರಾ ತಾಲೂಕಿನ ಸುಕ್ಷೇತ್ರ ಕೃಷ್ಣವೇಣಿ ಭೀಮಾ ಸಂಗಮದಲ್ಲಿ ಸಂಗಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಸಂಗಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕರುಣೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ದುಶ್ಚಟಗಳಿಂದ ದೂರವಿರಬೇಕೆಂದು ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಂದ ಮನುಷ್ಯನ ಆರೋಗ್ಯ ಹದಗೇಡುತ್ತಿದೆ. ಪ್ರತಿಯೊಬ್ಬರು ದುಶ್ಚಟಗಳಿಂದ ದೂರವಿರಬೇಕೆಂದು ಕರುಣೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ವಡಗೇರಾ ತಾಲೂಕಿನ ಸುಕ್ಷೇತ್ರ ಕೃಷ್ಣವೇಣಿ ಭೀಮಾ ಸಂಗಮದಲ್ಲಿ ಸಂಗಮೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ರೋಟರಿ ಕ್ಲಬ್ ಶಕ್ತಿನಗರ ಹಾಗೂ ಸಂಗಮೇಶ್ವರ ಜಾತ್ರಾ ಮಹೋತ್ಸವ ಸಮಿತಿ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಸಂಪತ್ತು ಇದ್ದಂತೆ. ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಸಿರಿಧಾನ್ಯದ ಆಹಾರಗಳು ಹಣ್ಣು-ಹಂಪಲು, ತರಕಾರಿ ಹೆಚ್ಚಾಗಿ ಸೇವಿಸಬೇಕು. ರೋಟರಿ ಕ್ಲಬ್ ಕಾರ್ಯ ನಿಜವಾಗಲೂ ಶ್ಲಾಘನೀಯ ಎಂದರು.

ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ್ ಸೊನ್ನದ, ಕ್ಲಬ್ ಬಡ ಜನರಿಗಾಗಿ ಗ್ರಾಮೀಣ ಭಾಗದಲ್ಲಿ ಹಲವಾರು ಉಚಿತ ಶಿಬಿರ ಮಾಡಿ, ಬಡವರಿಗಾಗಿ ಹಗಲಿರಲು ಶ್ರಮಿಸುತ್ತಿದೆ. ಇಂತಹ ಉಚಿತ ಶಿಬಿರಗಳ ಸದುಪಯೋಗ ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಹೇಳಿದರು.

ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನಯ್ಯ ಸಗರ ಮಾತನಾಡಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಒಂದು ವೇಳೆ ಆರೋಗ್ಯದ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು. ಪ್ರಕಾಶ್ ಸ್ವಾಮಿ ದೇವಸಗೂರು, ಡಾ. ಆಂಜನೇಯ ಕಟ್ಟಿಮನಿ, ಆದೇಶ ಗುಮ್ಮಡ, ಸುನಿಲ್ ವೈಷ್ಣವ್, ಸಂಜೀವ ಪಡೀಸ್, ಸುಬ್ರಹ್ಮಣ್ಯ, ಡಾ. ಗುರುರಾಜ್, ಮಹೇಶ್ ಪಾಟೀಲ್, ನರಸಪ್ಪ, ಶಶಿಕಾಂತ್ ಪಡಶೆಟ್ಟಿ, ಬಸವರಾಜ್ ದೊಡ್ಡಿ, ಶರಣಪ್ಪ ಕೊಟ್ರಪ್ಪನೂರ, ಶರಣಬಸವ, ಈಶಪ್ಪಗೌಡ ಅಗ್ನಿಹಾಳ, ಸೈದಪ್ಪ ರಾಮದುರ್ಗ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''