ಬಿಎಸ್‌ಎಸ್‌ಕೆ ಹರಾಜು ಪ್ರಕ್ರಿಯೆಗೆ ತಡೆ; ಸರ್ಕಾರದ ಕೋರಿಕೆ

KannadaprabhaNewsNetwork |  
Published : Aug 28, 2026, 04:00 AM IST
ರಕ್ಷಾಬಂಧನದ ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ಜಿಲ್ಲೆಯ ಹುಮನಾಬಾದ್‌ ತಾಲೂಕಿನ ಹಳ್ಳಿಖೇಡ್‌ನಲ್ಲಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ಆಸ್ತಿಗಳನ್ನು ಬಹಿರಂಗ ಹರಾಜು ಮಾಡಲು ಹೊರಡಿಸಲಾಗಿದ್ದ ಹರಾಜು ಪ್ರಕ್ರಿಯೆಗೆ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ತಡೆ ನೀಡುವಂತೆ ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (DCCB) ಗೆ ಕೋರಲಾಗಿದೆ.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯ ಹುಮನಾಬಾದ್‌ ತಾಲೂಕಿನ ಹಳ್ಳಿಖೇಡ್‌ನಲ್ಲಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ಆಸ್ತಿಗಳನ್ನು ಬಹಿರಂಗ ಹರಾಜು ಮಾಡಲು ಹೊರಡಿಸಲಾಗಿದ್ದ ಹರಾಜು ಪ್ರಕ್ರಿಯೆಗೆ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ತಡೆ ನೀಡುವಂತೆ ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (DCCB) ಗೆ ಕೋರಲಾಗಿದೆ.

ಈ ಕಾರ್ಖಾನೆಯು ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಪಾವತಿಸಬೇಕಾದ ಸಾಲದ ಸುಸ್ತಿದಾರನಾಗಿದ್ದು, ಸಾಲ ವಸೂಲಾತಿಗಾಗಿ ಬ್ಯಾಂಕ್‌ ಸರಫೇಸಿ ಕಾಯ್ದೆ (SARFAESI Act, 2002) ಅಡಿಯಲ್ಲಿ ಕಾರ್ಖಾನೆಯ ಆಸ್ತಿಗಳನ್ನು 2026ರ ಸೆಪ್ಟೆಂಬರ್‌ 2ರಂದು ಬಹಿರಂಗ ಹರಾಜು ಮಾಡಲು ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ, ಈ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ, ಪುನಶ್ಚೇತನ, ನಿರ್ವಹಣೆ ಮತ್ತು ಹಸ್ತಾಂತರ ***(LROT) ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಮರು ಟೆಂಡರ್‌ ಕರೆಯುವ ಪ್ರಸ್ತಾವನೆಯು ಸರ್ಕಾರದ ಅಂತಿಮ ಪರಿಶೀಲನೆಯಲ್ಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈ ಪ್ರಸ್ತಾವನೆಯು ಅಂತಿಮ ಹಂತದಲ್ಲಿರುವ ಹಿನ್ನೆಲೆಯಲ್ಲಿ, ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಹೊರಡಿಸಿರುವ ಸೆಪ್ಟೆಂಬರ್‌ 2ರ ಬಹಿರಂಗ ಹರಾಜು ಪ್ರಕ್ರಿಯೆಗೆ ಕೂಡಲೇ ತಡೆ ನೀಡುವಂತೆ ಕೋರಿ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ***(MSME ಮತ್ತು ಗಣಿ) ಉಪ ಕಾರ್ಯದರ್ಶಿ ಎಂ.ಎಲ್‌ ಲೀಲಾವತಿ ಅವರು ಬೀದರ್ ಡಿಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಈ ಕುರಿತು ತುರ್ತು ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

ಡಿಸಿಸಿ ಬ್ಯಾಂಕ್‌ಗೆ ಸರ್ಕಾರದ ಕೋರಿಕೆ ಮಾತ್ರ, ಹರಾಜು ತಡೆಗೆ ಆದೇಶ ಮಾಡಿಲ್ಲ: ಹೀಗಾಗಿ ಕಾರ್ಖಾನೆಯ ಹರಾಜು ಪ್ರಕ್ರಿಯೆ ಸ್ಥಗಿತಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆಯಾದರೆ ಸರ್ಕಾರ ನೀಡಿದ್ದು ಆದೇಶವಲ್ಲ, ಅದು ಕೋರಿಕೆ ಮಾತ್ರ. ಹೀಗಾಗಿ ಬ್ಯಾಂಕ್‌ ತನ್ನ ಆರ್ಥಿಕ ಸಂಕಷ್ಟದಿಂದ ಹೊರಬರಲು ಸರ್ಕಾರಕ್ಕೆ ಗ್ಯಾರಂಟಿ ಕೇಳಬಹುದು, ಅಥವಾ ಯಾವುದೇ ರೀತಿಯ ಪ್ರಯತ್ನ ನಡೆಸಿದರೂ ಅಚ್ಚರಿಯಿಲ್ಲ. ಅಷ್ಟಕ್ಕೂ ಗುತ್ತಿಗೆ ಆಧಾರದಲ್ಲಿ ಕಾರ್ಖಾನೆ ಪುನರಾರಂಭಗೊಳ್ಳುವುದಕ್ಕೆ ಸರ್ಕಾರದ ಗುತ್ತಿಗೆ ನೀಡುವ ಪ್ರಕ್ರಿಯೆಗಳು ಚುರುಕುಗೊಳ್ಳಬಹುದು ಎಂಬ ನಿರೀಕ್ಷೆ ಹೊಂದಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯ 4 ತಾಲೂಕುಗಳಿಗೆ ಮಾತ್ರ ತೀವ್ರ ಬರ ಮುದ್ರೆ
ಎಸ್‌ಐಆರ್‌ ಮುಂದಿನ ಪ್ರಕ್ರಿಯೆಗೂ ಸಹಕರಿಸಿ: ವಿಶ್ವನಾಥ್‌