ಕನ್ನಡಪ್ರಭ ವಾರ್ತೆ ಪುತ್ತೂರು
ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನ್ಯಾಯಾಲಯದಲ್ಲಿ ತಡೆಗಳಿಲ್ಲ. ದೇವಾಲಯದ ಜಾಗದಲ್ಲಿ ಸ್ವಾಧೀನ ಇದ್ದರೆ, ಆದೇಶವಿಲ್ಲದೆ ಎಬ್ಬಿಸುವ ಹಾಗಿಲ್ಲ ಎಂದು ಹೇಳಲಾಗಿದೆ. ಈ ಆದೇಶದಿಂದ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಲೀ, ದೇವಸ್ಥಾನದ ಜಾಗಕ್ಕಾಗಲೀ ಯಾವುದೇ ತೊಂದರೆಗಳಿಲ್ಲ. ಈಗ ನೀಡಿದ ಆದೇಶ ಪ್ರಶ್ನೆ ಮಾಡುವ ಜತೆಗೆ ದೇವಸ್ಥಾನದ ಎಲ್ಲಾ ಜಾಗ ಹಿಂಪಡೆಯಲಾಗುವುದು. ನ್ಯಾಯ ಕಟ್ಟಲೆಗೆ ಹೋಗುವವರು ಮಹಾಲಿಂಗೇಶ್ವರನ ಮೇಲೆ ಹೋಗುತ್ತಿರುವುದೆಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಹೋರಾಟ ಮಾಡುತ್ತಿರುವುದು, ವಾದ ಮಾಡುತ್ತಿರುವುದು ಯಾರ ವಿರುದ್ಧ ಎಂಬುದನ್ನು ಜನ ಅರ್ಥಮಾಡಬೇಕಾಗಿದೆ ಎಂದು ಶಾಸಕರು ತಿಳಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕೆನರಾ ಬ್ಯಾಂಕ್ ರೀಜನಲ್ ಹೆಡ್ ರಂಜನ್ ಕುಮಾರ್, ಕರ್ಣಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ಶ್ರೀಹರಿ, ಅಸಿಸ್ಟೆಂಟ್ ಮ್ಯಾನೇಜರ್ ಅಶೋಕ್ ಮೂಲ್ಯ, ರಾಜ್ಯ ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ಪುತ್ತೂರು ತಾಲೂಕು ನೋಡೆಲ್ ಅಧಿಕಾರಿಯಾದ ಎಚ್.ಕೆ.ಕೃಷ್ಣಮೂರ್ತಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ. ಈಶ್ವರ ಬೇಡೇಕರ್, ಕೃಷ್ಣವೇಣಿ, ನಳಿನಿ ಪಿ. ಶೆಟ್ಟಿ, ದಿನೇಶ್ ಕುಲಾಲ್ ಪಿ. ವಿ., ಮಹಾಬಲ ರೈ ಒಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಕುಮಾರ್ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಕೆ. ವಿ. ಶ್ರೀನಿವಾಸ ಮತ್ತಿತರರು ಇದ್ದರು.