ಗ್ರಾಮಗಳಲ್ಲೂ ‘ನಂದಿನಿ’ ಮಾರಾಟಕ್ಕೆ ಕ್ರಮ

KannadaprabhaNewsNetwork |  
Published : Sep 19, 2025, 01:00 AM IST
೧೭ಕೆಎಲ್‌ಆರ್-೧೬ಕೋಲಾರ ತಾಲ್ಲೂಕಿನ ರಾಮಸಂದ್ರ ಗೇಟ್ ಬಳಿ ನೂತನ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿದರು. ಕೋಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ, ವ್ಯವಸ್ಥಾಪಕ ಗೋಪಾಲಮೂರ್ತಿ ಇದ್ದರು. | Kannada Prabha

ಸಾರಾಂಶ

ಹಾಲಿನ ಉತ್ಪಾದನೆ ಹೆಚ್ಚಿದ ಬಳಿಕ ಮಾರುಕಟ್ಟೆ ಹೊರ ರಾಜ್ಯಕ್ಕೆ ಮತ್ತು ವಿದೇಶಗಳಿಗೂ ವಿಸ್ತರಿಸಲಾಗಿದೆ. ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳಲ್ಲಿಯೂ ನಂದಿನಿ ಉತ್ಪನ್ನಗಳು ಲಭ್ಯವಾಗುವಂತೆ ಮಾರುಕಟ್ಟೆ ವಿಸ್ತಾರವಾಗುವುದು. ಮಾರುಕಟ್ಟೆ ವಿಸ್ತೀರ್ಣದಲ್ಲಿ ಸರ್ಕಾರಿ ಕಚೇರಿಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ನಂದಿನಿ ಮಳಿಗೆ ತೆರೆಯುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರಅಮೆರಿಕಾ ಸೇರಿದಂತೆ ರಾಜ್ಯಾದ್ಯಂತ ಕೆಎಂಎಫ್‌ನಿಂದ ೫೦೦ ನಂದಿನಿ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಲಾಗಿದ್ದು, ಕೋಲಾರ ಜಿಲ್ಲೆಯಲ್ಲಿ ೩೦ ಮಳಿಗೆಗಳನ್ನು ತೆರೆದಿರುವುದಾಗಿ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ.ಸಿಎಂ ಸಿದ್ದರಾಮಯ್ಯ ಬುಧವಾರ ಕಲಬುರಗಿಯಲ್ಲಿ ವರ್ಚುವಲ್ ಮೂಲಕ ೫೦೦ ನಂದಿನಿ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ್ದಾರೆ. ಅದರ ಅಂಗವಾಗಿ ಕೋಲಾರ-ಬೆಂಗಳೂರು ರಸ್ತೆಯ ರಾಮಸಂದ್ರ ಗೇಟ್ ಬಳಿ ನೂತನ ನಂದಿನಿ ಮಾರಾಟ ಮಳಿಗೆಯನ್ನು ಶಾಸಕರು ಉದ್ಘಾಟಿಸಿ ಮಾತನಾಡಿದರು.

ಅಮೆರಿಕದಲ್ಲಿ ನಂದಿನಿ ಮಳಿಗೆ

ಅಮೆರಿಕ ದೇಶದಲ್ಲಿಯೂ ನಂದಿನಿ ಮಳಿಗೆಯನ್ನು ಪ್ರಾರಂಭಿಸಲಾಗಿದೆ. ಕರ್ನಾಟಕದಲ್ಲಿ ಹಾಲು ಉತ್ಪಾದನೆ ಹೆಚ್ಚಿರುವುದು ೨೦೧೩ರಲ್ಲಿ ಸಿದ್ಧರಾಮಯ್ಯ ಸಿಎಂಯಾಗಿದ್ದ ವೇಳೆ ಹಾಲು ಉತ್ಪಾದಕರಿಗೆ ನೀಡಿದ ಪ್ರೋತ್ಸಾಹ ಹಾಗೂ ಹಾಲು ಒಕ್ಕೂಟಗಳ ಅಭಿವೃದ್ಧಿಗೆ ತೆಗೆದುಕೊಂಡ ಕ್ರಮಗಳ ಫಲ. ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದು ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಹಾಲಿಗೆ ಮಾರುಕಟ್ಟೆ ಕಲ್ಪಿಸಲಾಯಿತು ಎಂದರು.

ಹಾಲಿನ ಉತ್ಪಾದನೆ ಹೆಚ್ಚಿದ ಬಳಿಕ ಮಾರುಕಟ್ಟೆ ಹೊರ ರಾಜ್ಯಕ್ಕೆ ಮತ್ತು ವಿದೇಶಗಳಿಗೂ ವಿಸ್ತರಿಸಲಾಗಿದೆ. ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳಲ್ಲಿಯೂ ನಂದಿನಿ ಉತ್ಪನ್ನಗಳು ಲಭ್ಯವಾಗುವಂತೆ ಮಾರುಕಟ್ಟೆ ವಿಸ್ತಾರವಾಗುವುದು. ಮಾರುಕಟ್ಟೆ ವಿಸ್ತೀರ್ಣದಲ್ಲಿ ಸರ್ಕಾರಿ ಕಚೇರಿಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ನಂದಿನಿ ಮಳಿಗೆ ತೆರೆಯುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಸರ್ಕಾರ ಮಳಿಗೆಗಳ ಸಂಖ್ಯೆ ಹೆಚ್ಚಿಸಿದೆ ಎಂದು ಹೇಳಿದರು. ಪ್ರತಿ ಗ್ರಾಮಕ್ಕೊಂದು ಡೇರಿ

ಕೋಚಿಮುಲ್ ವಿಭಜನೆಯ ನಂತರ ಹಾಲು ಉತ್ಪಾದನೆ ಹೆಚ್ಚಿಸಲು ಪ್ರತಿ ಗ್ರಾಮದಲ್ಲೂ ಹಾಲಿನ ಡೇರಿಗಳನ್ನು ಸ್ಥಾಪನೆ ಮಾಡುವುದು, ಕಾಮನ್ ಸಾಫ್ಟ್‌ವೇರ್ ಪ್ರಾರಂಭಿಸುವುದು, ಜಿಲ್ಲಾಮಟ್ಟದಲ್ಲಿ ಹಾಲಿನ ಉತ್ಪನ್ನಗಳ ಮಳಿಗೆಗಳನ್ನು ಹೆಚ್ಚಿಸುವುದು ಹಾಗೂ ತಾಲ್ಲೂಕು, ಹೋಬಳಿ, ಪಂಚಾಯಿತಿ ಮಟ್ಟಕ್ಕೆ ವಿಸ್ತರಿಸುವುದು. ದೊಡ್ಡ ಹಳ್ಳಿಗಳಲ್ಲಿ ಪಾರ್ಲರ್‌ಗಳನ್ನು ತೆರೆಯಲು ಸರ್ವೇ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಕೋಮುಲ್ ನಿರ್ದೇಶಕರಾದ ಎನ್.ಹನುಮೇಶ್, ಚಲುವನಹಳ್ಳಿ ನಾಗರಾಜ್, ಕಾಂತಮ್ಮ, ಕೋಮುಲ್ ವ್ಯವಸ್ಥಾಪಕ ಗೋಪಾಲಮೂರ್ತಿ ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ