ಪ್ರತಿ ವಾರ್ಡ್ ನಲ್ಲಿ ಗಿಡ ನೆಟ್ಟು ರಕ್ಷಿಸಲು ಕ್ರಮ: ವಸಂತಕುಮಾರ್

KannadaprabhaNewsNetwork |  
Published : Jun 07, 2025, 12:27 AM ISTUpdated : Jun 07, 2025, 12:28 AM IST
ತರೀಕೆರೆಯಲ್ಲಿ ಪುರಸಭೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಪಟ್ಟಣದ ಪ್ರತಿ ವಾರ್ಡ್ ನಲ್ಲೂ ಗಿಡಗಳನ್ನು ನೆಟ್ಟು ಟ್ರೀಗಾರ್ಡ್ ಹಾಕಲಾಗುವುದು ಎಂದು ಪುರಸಭೆ ಅಧ್ಯಕ್ಷ ವಸಂತಕುಮಾರ್ ಹೇಳಿದ್ದಾರೆ.

ತರೀಕೆರೆಯಲ್ಲಿ ಪುರಸಭೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಪಟ್ಟಣದ ಪ್ರತಿ ವಾರ್ಡ್ ನಲ್ಲೂ ಗಿಡಗಳನ್ನು ನೆಟ್ಟು ಟ್ರೀಗಾರ್ಡ್ ಹಾಕಲಾಗುವುದು ಎಂದು ಪುರಸಭೆ ಅಧ್ಯಕ್ಷ ವಸಂತಕುಮಾರ್ ಹೇಳಿದ್ದಾರೆ.

ಬುಧವಾರ ಪುರಸಭೆಯಿಂದ ಪಟ್ಟಣದ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿರುವುದು ತುಂಬ ಸಂತೋಷ ತಂದಿದೆ. ಮಕ್ಕಳು ವಿದ್ಯೆ ಕಲಿತು ವಿದ್ಯಾವಂತರಾಗಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ಟಿ.ದಾದಾಪೀರ್ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿ ಶಾಲಾ ಹಂತದಲ್ಲೇ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು.ಹಿಂದೆ ಪೂರ್ವಜರು ಮರ ಗಿಡಗಳನ್ನು ನೆಡುತ್ತಿದ್ದರು ಇಂದು ಪರಿಸರ ನಾಶಕ್ಕೆ ನಾವೇ ಕಾರಣರಾಗಿದ್ದೇವೆ. ಪ್ರಕೃತಿಯ ಒಂದು ಭಾಗವಾದ ನಾವು ಪ್ಲಾಸ್ಟಿಕ್ ಮುಕ್ತ ಜಗತ್ತನ್ನು ಕಟ್ಟಬೇಕು. ಪ್ರಜ್ಞಾವಂತರಾಗಬೇಕು ಎಂದು ಹೇಳಿದರು.

ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಲ್ಲಿ ನಮ್ಮ ದೇಶ ನಾಲ್ಕನೆ ಸ್ಥಾನದಲ್ಲಿದೆ. ನದಿ ಸಾಗರಗಳು ಪ್ಲಾಸ್ಟಿಕ್ ನಿಂದ ತುಂಬಿಕೊಂಡಿದೆ. ಸಾಗರವನ್ನು ರಕ್ಷಿಸಬೇಕು. ಭೂಮಿ ಕೊಟ್ಟಿರುವ ಕೊಡುಗೆ ಅನ್ನ, ಪರಿಸರ ರಕ್ಷಣೆ ಕಾರ್ಯಕ್ರಮ ಆಗಬೇಕು ಪರಿಸರ ಕುರಿತು ಮಕ್ಕಳೊಂದಿಗೆ ಪ್ರಶ್ಠೋತ್ತರ ನೆಡೆಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಷ ಮಾತನಾಡಿ ಭೂಮಿ, ಜಲ ನೀರು ಗಾಳಿ ಇವುಗಳು ಭಗವಂತನ ಸೃಷ್ಠಿಯಾಗಿದೆ, ನಾವುಗಳು ಅವುಗಳನ್ನು ರಕ್ಷಿಸಬೇಕು ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಪರಿಸರ ದಿನಾಚರಣೆ ಒಂದು ನೆಪ ಅಲ್ಲ ಅದು ಒಂದು ಜಪ ಆಗ ಬೇಕು, ಉತ್ತಮ ಪರಿಸರವನ್ನು ಹಿರಿಯರು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ನಾವು ಅದನ್ನು ಮುಂದಿನ ಪೀಳಿಗೆಗೆ ಶುದ್ಧ ರೂಪದಲ್ಲಿ ಹಸ್ತಾಂತರಿಸುವುದು ನಮ್ಮ ಜವಾಬ್ದಾರಿ, ಪ್ಲಾಸ್ಚಿಕ್ ಭೂಮಿಯಲ್ಲಿ ಕೊಳೆಯುವುದಿಲ್ಲ, ಪ್ಲಾಸ್ಟಿಕ್ ಗಳನ್ನು, ಪ್ಲಾಸ್ಟಿಕ್ ಬಾಟಲಿಗಳನ್ನು ಚರಂಡಿಗೆ ಹಾಕಬಾರದು, ಅದರಿಂದ ಕಸ ಕಟ್ಟಿ ನೀರು ಸರಾಗವಾಗಿ ಹರಿಯುವುದಿಲ್ಲ, ನಾವು ಉತ್ತಮ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ಪುರಸಭೆ ಪರಿಸರ ಅಭಿಯಂತರರಾದ ತಾಹಿರಾ ತಸ್ನೀಮ್ ಮಾತನಾಡಿ ಪರಿಸರದಲ್ಲಿರುವ ಮಣ್ಣು ಗಾಳಿ, ಗಿಡ ಜಲ ಇವುಗಳನ್ನು ನಾವು ಸಂರಕ್ಷಿಸಬೇಕು. ಪ್ಲಾಸ್ಟಿಕ್ ನ್ನು ಸರ್ಕಾರ ನಿಷೇಧಿಸಿದೆ. ಪ್ಸಾಸ್ಟಿಕ್ ಮಾರಾಟ ತಡೆಗಟ್ಟಬೇಕು. ಸ್ಟ್ರಾ ಮತ್ತು ಪ್ಸಾಸ್ಟಿಕ್ ಕ್ಯಾರಿ ಬ್ಯಾಗ್ ನ್ನು ಉಪಯೋಗಿಸಬಾರದು. ಬದಲಿಗೆ ಬಟ್ಟೆ ಬ್ಯಾಗ್ ಬಳಕೆ ಮಾಡಬೇಕು. ಪರಿಸರವನ್ನು ಸಂರಕ್ಷಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಉದ್ಯಾನವನದಲ್ಲಿ ಗಿಡಗಳನ್ನು ನೆಡಲಾಯತು. ಶಿಕ್ಷಕ ಜಯ್ಯಣ್ಣ ಮಾತನಾಡಿದರು. ಮುಖಂಡರಾದ ರಾಘವೇಂದ್ರ, ಪುರಸಭೆ ವ್ಯವಸ್ಥಾಪಕ ವಿಜಯಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.6ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಪುರಸಭೆಯಿಂದ ನಡೆದ ಕಾರ್ಯಕ್ರಮದಲ್ಲಿ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ಗಿಡಗಳನ್ನು ನೆಡಲಾಯಿತು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಪುರಸಭೆ ಸದಸ್ಯ ಟಿ.ದಾದಾಪೀರ್, ನಾಮಿನಿ ಸದಸ್ಯ ಅದಿಲ್ ಪಾಷ, ಮುಖ್ಯಾಧಿಕಾರಿ ಎಚ್. ಪ್ರಶಾಂತ್, ಪರಿಸರ ಅಭಿಯಂತರರಾದ ತಾಹಿರಾ ತಸ್ನೀಮ್ ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ಬಿಎಂಟಿಸಿ ನೌಕರರ ಅಪಘಾತ ವಿಮಾ ಮೊತ್ತ 1.25 ಕೋಟಿಗೆ ಏರಿಕೆ
ಪರಪ್ಪನ ಅಗ್ರಹಾರ ಜೈಲಲ್ಲಿರುವ ಪ್ರಜ್ವಲ್‌ಗೆ ಬಿಡುಗಡೆ ಭಾಗ್ಯ ಇಲ್ಲ