ಸ್ಟಿಂಗ್ ಆಪರೇಷನ್ ಕರ್ನಾಟಕಕ್ಕೆಂಟಿದ ದರಿದ್ರ ಶಾಪ

KannadaprabhaNewsNetwork |  
Published : Nov 05, 2026, 01:15 AM IST
ಸಿಕೆಬಿ-7 ಸುದ್ದಿಗಾರರೊಂದಿಗೆ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು  | Kannada Prabha

ಸಾರಾಂಶ

ಸ್ಟಿಂಗ್ ಆಪರೇಷನ್ ಅನ್ನೋದು ಕರ್ನಾಟಕಕ್ಕೆ ಅಂಟಿದ ದರಿದ್ರ ಶಾಪ. ಇದರಿಂದ ಏನಾದರೂ ರಾಜ್ಯ ಆಭಿವೃದ್ಧಿಗೆ ಪ್ರಯೋಜನಾ ಇದೆಯಾ? ಬೆಡ್ ರೂಂ ವಿಚಾರ ಇಡೀ ರಾಜ್ಯದ ಸುದ್ದಿ ಆಗಬೇಕಾ?

ಪ್ರಿಯಾಂಕ್ ಖರ್ಗೆಗೆ ಅಧಿಕಾರದ ಮದ ನೆತ್ತಿಗೇರಿದೆ, ಒಂದು ವರ್ಷದಲ್ಲೆ ಉತ್ತರ ಸಿಗುತ್ತೆ: ಸಂಸದ ಡಾ.ಕೆ.ಸುಧಾಕರ್

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕುಮಾರಸ್ವಾಮಿಯವರನ್ನೇ ಹಳ್ಳಿ ಗುಗ್ಗು ಅಂತ ಗೃಹಸಚಿವ ಪ್ರಿಯಾಂಕ್ ಖರ್ಗೆ ಕರೀತಾರೆ ಅಂದರೆ, ಆತನಿಗೆ ಅಧಿಕಾರದ ಮದ ಅನ್ನೋದು ನೆತ್ತಿಗೆ ಹತ್ತಿದೆ. ಒಂದೇ ವರ್ಷದಲ್ಲಿ ಅದೆಲ್ಲಾ ಇಳಿದು ಹೋಗುತ್ತೆ. ಸ್ಟಿಂಗ್ ಸ್ಟಿಂಗ್ ಅಂತ ಮಾತಾಡಿಕೊಂಡು ರಾಜ್ಯದ ಅಭಿವೃದ್ಧಿ ಕೆಲಸಗಳೆಲ್ಲಾ ಹಳ್ಳಾ ಹಿಡೊದು ಹೋಗಿವೆ ಎಂದು ಸಂಸದ ಡಾ.ಕೆ. ಸುಧಾಕರ್ ಬೇಸರ ಹೊರಹಾಕಿದರು.ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬುಧವಾರ ಒಕ್ಕಲಿಗರ ಸಂಘದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟಿಂಗ್ ಆಪರೇಷನ್ ಅನ್ನೋದು ಕರ್ನಾಟಕಕ್ಕೆ ಅಂಟಿದ ದರಿದ್ರ ಶಾಪ. ಇದರಿಂದ ಏನಾದರೂ ರಾಜ್ಯ ಆಭಿವೃದ್ಧಿಗೆ ಪ್ರಯೋಜನಾ ಇದೆಯಾ? ಬೆಡ್ ರೂಂ ವಿಚಾರ ಇಡೀ ರಾಜ್ಯದ ಸುದ್ದಿ ಆಗಬೇಕಾ? ಆ ಪೊಲೀಸ್ ಕಮೀಷನರ್‌ನ ಮೊದಲು ರಾಜೀನಾಮೆ ಕೊಡಿಸಬೇಕು ಎಂದರು.

ಇದೊಂದು ಕರ್ನಾಟಕಕ್ಕೆ ಅಂಟಿದ ಶಾಪ ಎಷ್ಟೊ ಜನ ಮುಖ್ಯಮಂತ್ರಿಗಳು ರಾಜ್ಯವನ್ನು ಆಳಿ ಹೋಗಿದ್ದಾರೆ. ಯಾರಾದರೂ ಈ ರೀತಿಯ ಸ್ಟಿಂಗ್ ಮಾಡಿದ್ದಾರಾ, ಡಿಕೆ ಶಿವಕುಮಾರ್‌ಗೆ ಇದು ಬೇಕಿತ್ತಾ? ಇದರಿಂದ ರಾಜ್ಯದ ಬಡವರ ಹೊಟ್ಟೆಗೆ ಎನಾದರೂ ಅನ್ನ ಕೊಡತ್ತೀರಾ? ಬರಗಾಲದ ಸಮಸ್ಯೆ ಏನಾದ್ರೂ ತೀರುತ್ತಾ?, ಇಡೀ ದೇಶವೇ ರಾಜ್ಯವನ್ನ ಚೀ.. ತೂ... ಅನ್ನುವಂತಾಗಿದೆ.

ಕೇಂದ್ರ ಮಂತ್ರಿ ಕುಮಾರಣ್ಣನವರನ್ನ ಹಳ್ಳಿ ಗುಗ್ಗು ಎಂದು ಗೃಹಮಂತ್ರಿ ಪ್ರಿಯಾಂಕ್ ಖರ್ಗೆ ಜರೀತಾರೆ ಅಂದ್ರೆ ಎನರ್ಥ? ಹೌದು ನಾವೆಲ್ಲಾ ಹಳ್ಳಿಯಿಂದ ರೈತರ ಮಕ್ಕಳಾಗೆ ಬಂದಿರೋದು. ನಿನ್ ತರ ಹಾರ್ಬರ್ ಸಿಟಿಯಿಂದ ಬಂದಿಲ್ಲ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿ ಕಾರಿದರು.

ಸೀಮಂತ್ ಕುಮಾರ್ ಸಿಂಗ್ ಓಬ್ಬ ಪೊಲಿಸ್ ಕಮಿಷನರ್ ಆಗಿ ಪ್ರಕರಣ ತನಿಖೆ ಹಂತದಲ್ಲಿದ್ದಾಗ ವಿಷಯ ಗೌಪ್ಯ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ. ಆ ಮೂಲಕ ಅವರು ಕರ್ತವ್ಯಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಿದ್ದಾರೆ. ಸರ್ಕಾರ ಮೊದಲು ಅತನಿಂದ ರಾಜೀನಾಮೆ ಪಡಿಬೇಕು ಎಂದು ಗುಡುಗಿದರು.

ಇನ್ನು ರಾಜ್ಯದಲ್ಲಿ ಹಾಲು ಮೊಸರು ಬೆಲೆ ಏರಿಕೆ ಮಾಡಿದ್ದಾದ್ದರೂ ಹೇಗೆ? ನಿಮ್ಮ ಖಾಜಾನೆ ಸಮೃದ್ಧಿಯಾಗಿದ್ದರೆ ಎಂಟಲ್ಲ ಹತ್ತು ರುಪಾಯಿ ಬೆಂಬಲ ಬೆಲೆ ಕೊಡಿ ಸಂತೋಷ. ಆದರೆ ಬಡವರ ಹೊಟ್ಟೆ ಮೇಲೆ ಹೊಡೆದು ಅದನ್ನ ರೈತರಿಗೆ ಕೊಡ್ತೀನಿ ಅಂತಿರಲ್ಲ. ನಿಮ್ಮ ಬಳಿ ದಿಡ್ಡಿಲ್ಲ ಹಾಗಾದರೆ ಬರ್ಬಾದ್ ಬಂದಿದೆ ಎಂದರ್ಥ. ಎಲ್ಲದಕ್ಕೂ ಹತ್ತಿರದಲ್ಲೆ ಉತ್ತರ ಸಿಗುತ್ತೆ ಎಂದು ರಾಜ್ಯ ಸರ್ಕಾರವನ್ನ ತರಾಟೆಗೆ ತಗೆದುಕೊಂಡರು.

ಸಿಕೆಬಿ-7 ಸುದ್ದಿಗಾರರೊಂದಿಗೆ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ