ಕಲಘಟಗಿ:
ಈ ವೇಳೆ ಮಾತನಾಡಿದ ರೈತ ಸಂಘಟನೆಯ ಪದಾಧಿಕಾರಿ ಉಳಿವೆಪ್ಪ ಬಳಿಗೇರ, ಹಗಲು-ರಾತ್ರಿ ಕಷ್ಟಪಟ್ಟು ಬೆವರು ಸುರಿಸಿ ದುಡಿಯುವ ರೈತನ ಸಂಕಷ್ಟವನ್ನು ಕೇಂದ್ರ ಸರ್ಕಾರ ಅರಿಯುತ್ತಿಲ್ಲ. ಕಬ್ಬಿಗೆ ಎಂಎಸ್ಪಿ ದರ ನಿಗದಿಪಡಿಸುವಂತೆ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ವಿವಿಧೆಡೆ ವಿದ್ಯುತ್ ಅವಘಡದಿಂದ ಸಾಕಷ್ಟು ರೈತರು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದರೂ ಕ್ಷೇತ್ರದ ಸಚಿವರು ಕೂಡಾ ರೈತರ ಸಂಕಷ್ಟ ಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮಗೆ ನ್ಯಾಯ ಸಿಗುವ ವರೆಗೂ ರೈತರು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆ ಹಿಂಪಡೆಯುವ ವಿಷಯವಾಗಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದವೂ ನಡೆಯಿತು. ಈ ಚಕಮಕಿ ವೇಳೆ ಕಿಡಿಗೇಡಿಗಳು ಒಂದೆರಡು ಕಲ್ಲು ತೂರಿದರು. ಇದರಿಂದ ಸಮೀಪದಲ್ಲಿದ್ದ ನಿಂತಿದ್ದ ಟಾಟಾ ಏಸ್ ಗಾಜು ಪುಡಿ ಪುಡಿಯಾಯಿತು.