ಮುಸ್ಲಿಂ ಮತಾಂಧರಿಂದ ಕಲ್ಲು ತೂರಾಟ: ಸಿ.ಟಿ. ರವಿ

KannadaprabhaNewsNetwork |  
Published : Sep 09, 2025, 01:00 AM IST
ಸಿ.ಟಿ. ರವಿ | Kannada Prabha

ಸಾರಾಂಶ

ಚಿಕ್ಕಮಗಳೂರು, ಮಂಡ್ಯ ಜಿಲ್ಲೆ, ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ಮುಸ್ಲಿಂ ಮತಾಂಧರು ಕಲ್ಲು ತೂರಾಟ ನಡೆಸಿದ್ದಾರೆ. ಆದರೆ, ಇಲ್ಲಿ ಕಿಡಿಗೇಡಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಶಾಂತಿಯಿಂದ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಂಡ್ಯ ಜಿಲ್ಲೆ, ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ಮುಸ್ಲಿಂ ಮತಾಂಧರು ಕಲ್ಲು ತೂರಾಟ ನಡೆಸಿದ್ದಾರೆ. ಆದರೆ, ಇಲ್ಲಿ ಕಿಡಿಗೇಡಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಶಾಂತಿಯಿಂದ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹಾಕಿದ್ದರು. ಜೊತೆಗೆ 30ಕ್ಕೂ ಹೆಚ್ಚು ಅಂಗಡಿಗಳನ್ನು ಟಾರ್ಗೆಟ್ ಮಾಡಿದ್ದರು. ಈ ಬಾರಿ ಮದ್ದೂರಿನಲ್ಲಿ ದಾಂಧಲೆ ನಡೆಸಿದ್ದಾರೆ. ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಸರ್ಕಾರ ಮುಂಜಾಗ್ರತೆ ವಹಿಸಬೇಕಿತ್ತು. ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡ ಬೇಕಿತ್ತು. ಆದರೆ, ಇದ್ಯಾವುದನ್ನೂ ಮಾಡಿಲ್ಲ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಈದ್ ಮಿಲಾದ್ ಭಾಷಣದಲ್ಲಿ ಇಸ್ಲಾಂ ಎಂದರೆ ಶಾಂತಿ. ಮಹಮ್ಮದ್ ಪೈಗಂಬರ್ ಎಂದರೆ ಶಾಂತಿದೂತ ಎಂದು ಹೇಳಿದ್ದರು. ಸಿಎಂ ದೃಷ್ಟಿಯಲ್ಲಿ ದಲಿತ ಶಾಸಕನ ಮನೆ ಸುಟ್ಟು ಹಾಕಿದ್ದು, ಪೊಲೀಸ್ ಠಾಣೆಗೆ ಬೆಂಕಿ ಇಟ್ಟಿದ್ದು ಶಾಂತಿದೂತರು ಮಾಡುವ ಕೆಲಸ ಎಂದು ಭಾವಿಸಿದಂತಿದೆ ಎಂದು ಕಿಡಿಕಾರಿದರು.

ಸಾಗರದಲ್ಲಿ ಗಣೇಶ ಮೆರವಣಿಗೆ ವೇಳೆ ಚಿಕ್ಕ ಮಕ್ಕಳು ಉಗುಳಿದರು. ಮಕ್ಕಳನ್ನು ನಾವು ದೇವರ ಸಮಾನ ಎಂದು ಭಾವಿಸುತ್ತೇವೆ. ಮಕ್ಕಳ ಹೃದಯದಲ್ಲಿ ವಿಷಬೀಜ ಬಿತ್ತಿದವರು ಯಾರು ? ವಿಷ ಬೀಜ ಬಿತ್ತಿದವರು ಅವರ ಪಾಲಕರ ಅಥವಾ ಮದರಸದಲ್ಲಿ ಇದೆಲ್ಲವೂ ನಡೆಯುತ್ತಿದೆಯಾ ಎಂದು ಪ್ರಶ್ನಿಸಿದರು.

ಜಾಗತಿಕ ಭಯೋತ್ಪಾದನೆಗೆ ಶೇ. 90 ರಷ್ಟು ಕೊಡುಗೆ ಕೊಡುತ್ತಿರುವವರು ಸಿಎಂ ದೃಷ್ಟಿಯಲ್ಲಿ ಶಾಂತಿದೂತರು. ಇದನ್ನೇ ನೀವು ಶಾಂತಿ ಎನ್ನುವುದಾದರೆ ಅದು ಸ್ಮಶಾನದ ಶಾಂತಿ ಆಗುತ್ತದೆ. ಇದೇ ಶಾಂತಿದೂತರು ನಗು ನಗುತ ಇದ್ದ ಬುದ್ಧನ ವಿಗ್ರಹವನ್ನು ಪಿರಂಗಿ ಇಟ್ಟು ಉಡಾಯಿಸಿದರು. ಸಿಎಂ ಸಿದ್ದರಾಮಯ್ಯ ಅವರಿಗೆ ಸತ್ಯ ಹೇಳಲು ಧೈರ್ಯ ಇಲ್ಲವೇ ? ಅಥವಾ ಓಟಿನ ಆಸೆಗಾಗಿ ಎಲ್ಲವನ್ನು ಒಪ್ಪಿಕೊಂಡು ಕಲ್ಲು ತೂರಾಟ ನಡೆಸಿದವರನ್ನು ಪ್ರಶಂಸಿಸುತ್ತಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರಿಗೆ ಶಾಂತಿ ಪಟ್ಟ ಕಟ್ಟಿದರೆ ನಿಮಗೂ ಸತ್ಯಕ್ಕೂ ಸಂಬಂಧವೇ ಇಲ್ಲದಂತಾಗುತ್ತದೆ. ರಾಜ್ಯ ಸರ್ಕಾರ ಹಿಂದುಗಳ ಕಣ್ಣಿಗೆ ಸುಣ್ಣ ಹಾಗೂ ಮುಸಲ್ಮಾನರ ಕಣ್ಣಿಗೆ ಬೆಣ್ಣೆ ಹಚ್ಚುವ ತಂತ್ರ ನಡೆಸುತ್ತಿದೆ. ಹಿಂದುಗಳು ಮೈಕ್ ಹಾಕಿ ದರೆ ಕಂಡಿಷನ್‌ ಹಾಕುತ್ತಾರೆ. ಡ್ಯಾನ್ಸ್ ಮಾಡಿದರೆ ಕೇಸು ದಾಖಲಿಸುತ್ತಾರೆ. ಇಂತಹ ಕೆಟ್ಟ ಪರಂಪರೆ ಮುಂದುವರಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲ್ಲು ತೂರಾಟ ನಡೆಸಿದವರ ಹಿಂದೆ ಯಾರಿದ್ದಾರೆ ? ಅವರು ಎಲ್ಲಿ ತರಬೇತಿ ಪಡೆದಿದ್ದಾರೆ ಎನ್ನುವುದು ಗೊತ್ತಾಗಬೇಕು. ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ರಚನೆ ಮಾಡಿದ್ದೀರಲ್ಲವೇ ? ಅದೇ ರೀತಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಪ್ರಕರಣ ಗಳ ಬಗ್ಗೆ ತನಿಕೆಗಾಗಿ ಎಸ್ಐಟಿ ರಚನೆ ಮಾಡಿ ಸತ್ಯವನ್ನು ಅನಾವರಣಗೊಳಿಸಿ. ಆಗ ಶಾಂತಿದೂತರು ಯಾರು, ಮತಾಂದರು ಯಾರು ? ಜಗತ್ತಿನಲ್ಲಿ ಹಿಂಸೆ ಹರಡುತ್ತಿರುವವರು ಯಾರು ? ಎನ್ನುವುದು ಗೊತ್ತಾಗುತ್ತದೆ ಎಂದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು