ಕನ್ನಡಪ್ರಭ ವಾರ್ತೆ ಮುಧೋಳ
ಘಟನೆಗೆ ಪೊಲೀಸ್ ಇಲಾಖೆ ವೈಫಲ್ಯ:
ಅಹಿಂದ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ ಮತ್ತು ಸುಸ್ಥಿರ ಕಾನೂನು ಸುವ್ಯಸ್ಥೆ ಕಾಪಾಡುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ, ಈ ಹಿಂದೆ ಸಮೀರವಾಡಿ ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದರೆ ಇಂದು ಇಂತಹ ಘಟನೆ ನಡೆಯುತ್ತಿರಲಿಲ್ಲ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಇಂತಹ ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜಕೀಯ ಲಾಭದ ಹಿಡನ್ ಅಜೆಂಡಾ
ಒಳಸಂಚಿನ ಬಗ್ಗೆ ತನಿಖೆಯಾಗಲಿ:ಅಹಿಂದ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಗಣೇಶ ಮೇತ್ರಿ ಮಾತನಾಡಿ, ಫೆ.19ರಂದು ರಾತ್ರಿ 10 ಗಂಟೆಯವರೆಗೆ ಮಸೀದಿಯ ಮುಂಭಾಗದಲ್ಲಿ ಡಿಜೆ ಬಳಸಿ ಸಂಭ್ರಮಿಸಲಾಗುತ್ತಿತ್ತು. ಪ್ರಾರ್ಥನೆ ಯಲ್ಲಿದ್ದ ಮುಸ್ಲಿಂ ಬಾಂಧವರ ಮಸೀದಿಯ ಒಳಗಿನಿಂದಲೇ ಓರ್ವ ಯುವಕನೊಬ್ಬ ಕಲ್ಲು ತೂರಿದ ಎಂಬ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ಸೌಹಾರ್ದತೆ ಕೆಡಿಸಿದವರಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ಯಲ್ಲಪ್ಪ ಹೆಗಡೆ, ಗಣೇಶ ಮೇತ್ರಿ, ಮಾರುತಿ ಮಾನೆ, ಬಿಲಾಲ ಬಾನದಾರ, ಮುತ್ತಪ್ಪ ಕೋಮಾರ, ಹನುಮಂತ ಶಿಂಧೆ, ಜಾವೇದ್ ಹವಾಲ್ದಾರ, ರಾಜು ಜಮಾದಾರ, ಗೋವಿಂದಪ್ಪ ಮೆಟಗುಡ್ಡ, ಬಸಪ್ಪ ಸಂಗನವರ, ವಿಠ್ಠಲ ಬಡಗೇರ, ಭೀಮಶಿ ಮೇತ್ರಿ, ಜಾವೇದ ಸಾಂಗ್ಲಿಕರ, ಇಸ್ಮಾಯಿಲ್ ವಾಲಿಕರ್, ಶಫಿಕ್ ಬೇಪಾರಿ, ನೂರಲಿ ಶೇಖ, ಐ.ಎಸ್. ಸುರಪುರ, ಮೈಬೂಬ್ ಬೆಪಾರಿ, ಅಬ್ದುಲ್ ಜಮಾದಾರ, ಬಿ.ಎಂ.ಮನಿಯಾರ, ಐ.ಎಂ.ಜಮಾದಾರ, ರಿಯಾಜ್ ಬಾಗವಾನ ಸೇರಿದಂತೆ ನೂರಾರು ಅಹಿಂದ ಹಾಗೂ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.