ಕನ್ನಡಪ್ರಭವಾರ್ತೆ ಪುತ್ತೂರು
ಸಂಸ್ಥೆಯೊಂದರ ವಠಾರದಲ್ಲಿ ಬೋರ್‌ವೆಲ್ ಶುದ್ಧೀಕರಣ ನಡೆಸುತ್ತಿರುವ ವೇಳೆಯಲ್ಲಿ ಸ್ಥಳೀಯರಾದ ಸಮದ್, ಸಲೀಂ ಮತ್ತಿತರರು ಸೇರಿಕೊಂಡು ಅಕ್ರಮವಾಗಿ ಪ್ರವೇಶ ಮಾಡಿ ಕೆಲಸ ನಿರತರಾಗಿರುವ ಬೋರ್‌ವೆಲ್ ವಾಹನದ ಮೇಲೆ ಹಾಗೂ ಕಾರ್ಮಿಕರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಿಂದ ಬೋರ್‌ವೆಲ್ ವಾಹನ ಹಾಗೂ ಕಾರ್ಮಿಕರಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಸ್ಥೆಯ ಮೆನೇಜರ್ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಲ್ಲೆಸೆಯುವ ವಿಡಿಯೋ ವೈರಲ್: ಸಂಸ್ಥೆ ಮುಂಭಾಗದಲ್ಲಿ ಕೆಲ ಮಂದಿ ಕಲ್ಲೆಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕರು ಬೈಯುತ್ತಾ ಕಲ್ಲೆಸೆಯುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ.