ದೇಗುಲ, ಮಸೀದಿ, ವಾಣಿಜ್ಯ ಕಟ್ಟಡ ಭೂಸ್ವಾಧೀನದಿಂದ ಕೈಬಿಡಿ

KannadaprabhaNewsNetwork |  
Published : Apr 07, 2026, 01:15 AM IST
6ಕೆಆರ್ ಎಂಎನ್ 4.ಜೆಪಿಜಿರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ಪೀರನ್ ಷಾ ವಲಿ ದರ್ಗಾ ಕಮಿಟಿ ಹಾಗೂ ರಾಘವೇಂದ್ರ ಕಾಲೋನಿ ನಿವಾಸಿಗಳು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಮನಗರ: ನಗರದ ಮಧ್ಯದಲ್ಲಿ ಹರಿಯುತ್ತಿರುವ ಅರ್ಕಾವತಿ ನದಿ ದಂಡೆಗೆ ಹೊಸ ಸ್ಪರ್ಶ ನೀಡುವ ಮಹತ್ವಕಾಂಕ್ಷಿ ಅರ್ಕಾವತಿ ನದಿ ದಂಡೆ ಅಭಿವೃದ್ಧಿ (ಅರ್ಕಾವತಿ ರಿವರ್ ಫ್ರಂಟ್ ಡೆವಲಲ್ಮೆಂಟ್) ಯೋಜನೆಗೆ ಧಾರ್ಮಿಕ ಕೇಂದ್ರಗಳಾದ ಅರ್ಕೇಶ್ವರ ದೇವಾಲಯ, ಪಿರಾನ್ ಷಾ ವಲಿ ದರ್ಗಾ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳು ಹಾಗೂ ವಸತಿ ಪ್ರದೇಶ ಭೂ ಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ

ರಾಮನಗರ: ನಗರದ ಮಧ್ಯದಲ್ಲಿ ಹರಿಯುತ್ತಿರುವ ಅರ್ಕಾವತಿ ನದಿ ದಂಡೆಗೆ ಹೊಸ ಸ್ಪರ್ಶ ನೀಡುವ ಮಹತ್ವಕಾಂಕ್ಷಿ ಅರ್ಕಾವತಿ ನದಿ ದಂಡೆ ಅಭಿವೃದ್ಧಿ (ಅರ್ಕಾವತಿ ರಿವರ್ ಫ್ರಂಟ್ ಡೆವಲಲ್ಮೆಂಟ್) ಯೋಜನೆಗೆ ಧಾರ್ಮಿಕ ಕೇಂದ್ರಗಳಾದ ಅರ್ಕೇಶ್ವರ ದೇವಾಲಯ, ಪಿರಾನ್ ಷಾ ವಲಿ ದರ್ಗಾ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳು ಹಾಗೂ ವಸತಿ ಪ್ರದೇಶ ಭೂ ಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಅರ್ಕಾವತಿ ನದಿಯ ಎರಡೂ ದಂಡೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಸೌಂದರ್ಯೀಕರಣ ಮಾಡುವ ಉದ್ದೇಶದ ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಜನವರಿ 20ರಂದೇ ಅಧಿಸೂಚನೆ ಹೊರಡಿಸಿದ್ದಾರೆ. ಅಧಿಸೂಚನೆಗೆ ಭೂಮಿ ಕಳೆದುಕೊಳ್ಳುವವರು 60 ದಿನದೊಳಗೆ ತಮ್ಮ ಆಕ್ಷೇಪಣೆ ಸಲ್ಲಿಸಬೇಕಿದೆ.

ಅದರಂತೆ ಭೂ ಸ್ವಾಧೀನ ವಿರೋಧಿಸಿ ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಮನವಿ ಸಲ್ಲಿಸಿರುವ ಅರ್ಕೇಶ್ವರ ದೇವಾಲಯ ಆಡಳಿತ ಮಂಡಳಿ, ಪಿರಾನ್ ಷಾ ವಲಿ ದರ್ಗಾ ಕಮಿಟಿ ಹಾಗೂ ರಾಘವೇಂದ್ರ ಕಾಲೋನಿ ನಿವಾಸಿಗಳು, ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೂ ಅಹವಾಲು ಸಲ್ಲಿಸಿದರು.

ಆಡಳಿತರೂಢ ಪಕ್ಷದಿಂದಲೇ ವಿರೋಧ ಸಾಧ್ಯತೆ:

ಈ ಹಿನ್ನೆಲೆಯಲ್ಲಿ ಏಪ್ರಿಲ್ 9ರಂದು ನಗರಸಭೆ ಸಾಮಾನ್ಯ ಸಭೆ ಕರೆಯಲಾಗಿದ್ದು, ಅಲ್ಲಿ ಭೂ ಸ್ವಾಧೀನ ಕುರಿತು ಚರ್ಚೆ ನಡೆಯಲಿದೆ. ಸಭೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ವಿರೋಧ ಪಕ್ಷ ಮಾತ್ರವಲ್ಲದೆ ಆಡಳಿತರೂಢ ಪಕ್ಷವೂ ತೀವ್ರವಾಗಿ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿವೆ.

ಅಲ್ಲದೆ, ಪುರಾತನವಾದ ಅರ್ಕೇಶ್ವರ ದೇವಾಲಯ, ಐತಿಹಾಸಿಕ ಪೀರನ್ ಷಾ ವಲಿ ದರ್ಗಾ ಹಾಗೂ ವಸತಿ ಬಡಾವಣೆಗಳನ್ನು ಹೊರತು ಪಡಿಸಿ ಉಳಿದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಯೋಜನೆ ಅನುಷ್ಠಾನಗೊಳಿಸುವಂತೆ ನಗರಸಭೆ ಸಾಮಾನ್ಯಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಉದ್ದೇಶಿಸಲಾಗಿದೆ ಎನ್ನಲಾಗಿದೆ.

ಬಾಕ್ಸ್‌.............

ಹಿಂದೂ-ಮುಸ್ಲಿಂ ಭಾವೈಕ್ಯತೆಗೂ ಹಾನಿ

ರಾಮನಗರ:

ಪೀರನ್ ಷಾ ವಲಿ ದರ್ಗಾ ಇತಿಹಾಸ ಪ್ರಸಿದ್ಧವಾಗಿದ್ದು, ಸುಮಾರು 200-300 ವರ್ಷಗಳ ಹಿನ್ನೆಲೆಯನ್ನು ಹೊಂದಿದೆ.

ಕರ್ನಾಟಕದಲ್ಲಿಯೇ ಪ್ರಸಿದ್ಧಿಯಾಗಿರುವ ಈ ದರ್ಗಾ ಲಕ್ಷಾಂತರ ಭಕ್ತಾದಿಗಳನ್ನು ಹೊಂದಿದ್ದು, ಪ್ರತಿನಿತ್ಯ ಮುಸ್ಲಿಂ ಧರ್ಮೀಯರು ಪ್ರಾರ್ಥನೆ ಮಾಡುವುದಲ್ಲದೇ ಹಿಂದೂ ಧರ್ಮೀಯರು ಸಹ ದರ್ಗಾಕ್ಕೆ ಬಂದು ತಾಯತ, ವಗೈರೆ ಕಟ್ಟಿಸಿಕೊಂಡು ಹೋಗುತ್ತಾರೆ. ಈ ದರ್ಗಾ ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ.

ಈಗ ದರ್ಗಾಕ್ಕೆ ಹೊಂದಿಕೊಂಡಿರುವ ಮಸೀದಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಅಧಿಸೂಚನೆ ಹೊರ ಬಿದ್ದಿದೆ. ಒಂದು ವೇಳೆ ದರ್ಗಾ, ಅದಕ್ಕೆ ಲಗತ್ತಾದ ಮಸೀದಿ, ಮತ್ತು ವಾಣಿಜ್ಯ ಕಟ್ಟಡಗಳನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಮುಂದಾದರೆ ತೊಂದರೆ ಅನುಭವಿಸುತ್ತಾರೆ. ಅವರುಗಳು ಮಾನಸಿಕ ಮತ್ತು ದೈಹಿಕವಾಗಿ ಬಳಲುತ್ತಾರೆ. ಇಷ್ಟೇ ಅಲ್ಲದೇ ಈ ದರ್ಗಾದ ಇತಿಹಾಸ ನಶಿಸಿ ಹೋಗುತ್ತದೆ.

ದರ್ಗಾದ ಮೇಲೆ ಧಾರ್ಮಿಕ ನಂಬಿಕೆ ಇಟ್ಟಿರುವ ಲಕ್ಷಾಂತರ ಜನರು ಮಾನಸಿಕವಾಗಿ ಬಳಲುವಂತಾಗುತ್ತದೆ. ಆದ್ದರಿಂದ ದರ್ಗಾ ಮತ್ತು ಅದಕ್ಕೆ ಸೇರಿದ ಮಸೀದಿ, ವಾಣಿಜ್ಯ ಕಟ್ಟಡಗಳನ್ನು ಭೂಸ್ವಾಧೀನದಿಂದ ಕೈಬಿಡುವಂತೆ ದರ್ಗಾ ಹಜ್ರತ್ ಪೀರನ್ ಶಾ ವಕಲಿ ಮಜ್ಜೂಬ್ ಕಮಿಟಿ ಒತ್ತಾಯಿಸಿದೆ.

ಬಾಕ್ಸ್ ................

ಭಾವನಾತ್ಮಕ ಸಂಬಂಧಗಳಿಗೆ ಧಕ್ಕೆಯಾಗದಿರಲಿ

ರಾಮನಗರ: ಅರ್ಕಾವತಿ ರಿವರ್ ಫ್ರಂಟ್ ಡೆವಲಪ್‌ಮೆಂಟ್ ಯೋಜನೆಗೆ ಧಾರ್ಮಿಕ ಕೇಂದ್ರಗಳು ಮಾತ್ರವಲ್ಲದೆ ವಸತಿ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಳ್ಳಬಾರದು ಎಂದು ರಾಘವೇಂದ್ರ ಕಾಲೋನಿ ನಿವಾಸಿಗಳು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗಳು ಹಾಗೂ ಭೂ ಸ್ವಾಧೀನ ಅಧಿಕಾರಿಗಳಿಗೆ ಭೂ ಸ್ವಾಧೀನ ಕ್ರಮಕ್ಕೆ ಪ್ರತಿಯೊಬ್ಬರು ಪ್ರತ್ಯೇಕವಾಗಿ ತಮ್ಮಗಳ ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಕಾನೂನು ಹೋರಾಟಕ್ಕೂ ಸಜ್ಜಾಗುತ್ತಿದ್ದಾರೆ.

ಈ ಕಾಲೋನಿಯಲ್ಲಿ ನಮ್ಮಗಳ ಉಳಿತಾಯದಿಂದ ಶ್ರಮಪಟ್ಟು ನೆಮ್ಮದಿಯಿಂದ ಬಾಳಲು ಮನೆಗಳನ್ನು ಕಟ್ಟಿಸಿಕೊಂಡಿದ್ದೇವೆ. ಇಲ್ಲಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನಗರಸಭೆ ಒದಗಿಸಿದೆ.

ಬಡಾವಣೆಯ ಮಕ್ಕಳಿಗೆ ಶಾಲೆ, ಅರ್ಕೇಶ್ವರ ದೇವಸ್ಥಾನ, ಶನಿಮಹಾತ್ಮ, ಅಯ್ಯಪ್ಪ ಮಂದಿರ, ಶ್ರೀ ಸಾಯಿಬಾಬಾ ಮಂದಿರ, ಪೀರೇನ ವಾಲಿ ದರ್ಗಾ ದೇವಾಲಯಗಳು ಹಾಗೂ ವ್ಯಾಪಾರ ಮಳಿಗೆಗಳು ಇವೆ. ನಗರದ ಮಧ್ಯೆ ಭಾಗದಲ್ಲಿರುವ ಈ ಸೂಕ್ತ ಸ್ಥಳವನ್ನು ತೊರೆದು ಇಳಿಯ ವಯಸ್ಸಿನಲ್ಲಿ ಹಾಗೂ ಬಡವರು ಉಳಿಸಿಕೊಂಡಿರುವ ಜಾಗವನ್ನು ಬಿಟ್ಟು ಹೋಗುವುದು ಎಲ್ಲಿಗೆ ಎಂದು ನಿವಾಸಿಗಳ ಪ್ರಶ್ನೆಯಾಗಿದೆ.

ನಮ್ಮಗಳ ಸ್ಥಿತಿ, ಮನೆಗಳ ಮೌಲ್ಯ ಹಾಗೂ ಭಾವನಾತ್ಮಕವಾಗಿ ಬೆಳೆದು ಬಂದಿರುವ ಅನುಬಂಧವನ್ನು ಪರಿಗಣಿಸಿ ಸರ್ಕಾರದ ಗಮನಕ್ಕೆ, ನಮ್ಮಗಳ ಆಕ್ಷೇಪಣೆಯನ್ನು ತೋರ್ಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಯೋಜನೆಯನ್ನು ವಸತಿ ಪ್ರದೇಶ ಬಿಟ್ಟು ಬೇರೆಡೆಗೆ ವರ್ಗಾಯಿಸಲು ಕ್ರಮ ವಹಿಸಬೇಕು.

ರಾಘವೇಂದ್ರ ಕಾಲೋನಿಯಲ್ಲಿ ಎಲ್ಲ ಸಮುದಾಯದವರು ಒಗಟ್ಟಿನಿಂದ ಬಾಳ್ವೆ ನಡೆಸುತ್ತಿದ್ದೇವೆ. ಈ ಬಾಂಧವ್ಯಕ್ಕೆ ಧಕ್ಕೆ ಬರದಂತೆ, ನಮ್ಮ ಕನಸುಗಳನ್ನು ನುಚ್ಚು ನೂರು ಮಾಡಬಾರದು. ದೇವಾಲಯ, ಆಸ್ಪತ್ರೆ, ಮನೆಗಳು, ಶಾಲೆ ಸೇರಿದಂತೆ ಎಲ್ಲವನ್ನು ಉಳಿಸಿಕೊಡಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.

6ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ಪೀರನ್ ಷಾ ವಲಿ ದರ್ಗಾ ಕಮಿಟಿ ಹಾಗೂ ರಾಘವೇಂದ್ರ ಕಾಲೋನಿ ನಿವಾಸಿಗಳು ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರ ಕಡಿದು ಮಹಿಳಾ ಕಾಲೇಜು ಕಟ್ಟಲು ಅವಕಾಶ ಕೊಡಲ್ಲ
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವುದಕ್ಕೆ ಹೆಮ್ಮೆಪಡಿ