ಡಾಂಬರ್‌ ರಸ್ತೆಯ ಕಳಪೆ ಕಾಮಗಾರಿ ನಿಲ್ಲಿಸಿ

KannadaprabhaNewsNetwork |  
Published : Feb 26, 2025, 01:05 AM IST
25ಎಚ್ಎಸ್ಎನ್‌15 : ಹಳೇಬೀಡಿನ ೧ನೇ ವಾರ್ಡಿನ ಜನತೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿ ಇಲಾಖೆಯ ಎ.ಇ.ಇ ದಯನಂದ ದೂರಿನ ಮನವಿ ನೀಡಿದರು . | Kannada Prabha

ಸಾರಾಂಶ

ಹಳೇಬೀಡು ನಗರದ ಒಂದನೇ ವಾರ್ಡಿನಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಚರಂಡಿ ಕಾಮಗಾರಿ ಮತ್ತು ಡಾಂಬರ್‌ ರಸ್ತೆಯ ಕಳಪೆ ಕಾಮಗಾರಿಯನ್ನು ನಿಲ್ಲಿಸಬೇಕೆಂದು ನಿವಾಸಿಗಳು ಆಗ್ರಹಿಸಿದರು. ಸ್ಥಳಕ್ಕೆ ಇಲಾಖೆಯ ಎಇಇ ದಯಾನಂದ, ಎ.ಇ. ದರ್ಶನ್ ಆಗಮಿಸಿ ಸ್ಥಳೀಯರಿಗೆ ಸಮಧಾನ ಹೇಳಿದರು. ಬೇಲೂರು ಶಾಸಕ ಎಚ್. ಕೆ. ಸುರೇಶ್ ಮತ್ತೆ ಚಾಲನೆ ನೀಡಿ ಒಂದು ಕೋಟಿ ಅನುದಾನದಲ್ಲಿ ಹಳೇಬೀಡಿನ ಒಂದನೇ ಬ್ಲಾಕ್‌ಗೆ ಒಳ್ಳೇಯ ಚರಂಡಿ ಹಾಗೂ ಅತ್ಯುತ್ತಮವಾದ ಡಾಂಬರೀಕರಣವನ್ನು ಮಾಡಬೇಕೆಂದು ಗುತ್ತಿಗೆದಾರರಲ್ಲಿ ತಿಳಿಸಿದ್ದರು ಎಂದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಇಲ್ಲಿನ ಒಂದನೇ ವಾರ್ಡಿನಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಚರಂಡಿ ಕಾಮಗಾರಿ ಮತ್ತು ಡಾಂಬರ್‌ ರಸ್ತೆಯ ಕಳಪೆ ಕಾಮಗಾರಿಯನ್ನು ನಿಲ್ಲಿಸಬೇಕೆಂದು ನಿವಾಸಿಗಳು ಆಗ್ರಹಿಸಿದರು. ಸ್ಥಳಕ್ಕೆ ಇಲಾಖೆಯ ಎಇಇ ದಯಾನಂದ, ಎ.ಇ. ದರ್ಶನ್ ಆಗಮಿಸಿ ಸ್ಥಳೀಯರಿಗೆ ಸಮಾಧಾನ ಹೇಳಿದರು.

ಈ ವಾರ್ಡ್ ಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ೧ ಕೋಟಿ ರು. ಅನುದಾನದಲ್ಲಿ ಶಂಕುಸ್ಥಾಪನೆಯಾಗಿತ್ತು. ಸರ್ಕಾರ ಬದಲಾವಣೆ ಆದ ನಂತರ ಕೆಲಸವು ಸ್ಥಗಿತಗೊಂಡಿತು. ಬೇಲೂರು ಶಾಸಕ ಎಚ್. ಕೆ. ಸುರೇಶ್ ಮತ್ತೆ ಚಾಲನೆ ನೀಡಿ ಒಂದು ಕೋಟಿ ಅನುದಾನದಲ್ಲಿ ಹಳೇಬೀಡಿನ ಒಂದನೇ ಬ್ಲಾಕ್‌ಗೆ ಒಳ್ಳೆಯ ಚರಂಡಿ ಹಾಗೂ ಅತ್ಯುತ್ತಮವಾದ ಡಾಂಬರೀಕರಣವನ್ನು ಮಾಡಬೇಕೆಂದು ಗುತ್ತಿಗೆದಾರರಲ್ಲಿ ತಿಳಿಸಿದ್ದರು.

೮ ತಿಂಗಳ ಹಿಂದೆ ಡಾಂಬರೀಕರಣ ಮುನ್ನ ವೆಡ್‌ಮಿಕ್ಸ್‌ನ್ನು (೪೦ಎಂ.ಎಂ.ಕಲ್ಲು, ಎಂ ಸ್ಯಾಂಡ್) ೬ ಇಂಚು ಹಾಕಬೇಕು ಅದರೆ ಕೆಲವು ಬಳಿ ೨ಇಂಚು,೩” ಹಾಕಿದ್ದಾರೆ. ಇದರ ಬಗ್ಗೆ ಸಹ ಆಕ್ರೋಶ ಇದೆ. ಎರಡು ದಿನಗಳಿಂದ ಡಾಂಬರೀಕರಣ ಕೆಲಸ ಪ್ರಾರಂಭವಾಗಿದ್ದು ಒಂದು ಲೇಯರ್ ಮಾತ್ರ ಹಾಕಿದ್ದಾರೆ. ಈ ಸ್ಥಳಕ್ಕೆ ಇಲಾಖೆಯ ಎ.ಇ.ಇ ದಯನಂದ, ಎ.ಇ. ದರ್ಶನ್ ಬಂದರೂ ಗುತ್ತಿಗೆದಾರ ರಂಜಿತ್ ಗೌಡ ಸ್ಥಳಕ್ಕೆ ಬಂದಿರಲಿಲ್ಲ. ಇದರ ಬಗ್ಗೆ ದೂರವಾಣಿ ಮೂಲಕ ತಿಳಿಸಿ ತಕ್ಷಣವೇ ಕಾಮಗಾರಿ ಸ್ಥಳಕ್ಕೆ ಬರಬೇಕೆಂದು ತಿಳಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ತಪ್ಪುಗಳು ಕಂಡು ಬಂದರೆ ತಕ್ಷಣವೇ ಕೆಲಸವನ್ನು ಸ್ಥಗಿತ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಚೇತನ್, ನಿವೃತ್ತ ದೈಹಿಕ ಶಿಕ್ಷಕರಾದ ವಿರು.ಪಾಕ್ಷಯ್ಯ, ರವಿಕುಮಾರ್, ಕುಮಾರ್ (ಪುತ್ರ) ,ರಂಜಿತ, ಸಂಜಯ್, ಶಿವಕುಮಾರ್, ಹಾಗೂ ಮಹಿಳಾ ಸದಸ್ಯರು ಈ ಸ್ಥಳದಲ್ಲಿ ಹಾಜರಿದ್ದು ಇಷ್ಟು ಗಲಾಟೆಯಾದರು. ಗುತ್ತಿಗೆದಾರ ರಂಜಿತ ಗೌಡ ಸ್ಥಳಕ್ಕೆ ಆಗಮಿಸದೆ ಇರುವ ಕಾರಣ ಜನತೆ ಆಕ್ರೋಶ ತೀವ್ರ ಹೆಚ್ಚಾಯಿತು. ಅಧಿಕಾರಿಗಳ ಮೇಲೆ ತೀವ್ರ ವಾಗ್ದಾಳಿ ನೆಡೆಸಿದರು. ಇದರಿಂದ ಅಧಿಕಾರಿಗಳು ಬೇಸತ್ತು ಗ್ರಾಹಕರಿಂದ ಮನವಿಯನ್ನು ಸ್ವೀಕರಿಸಿ ನೋಟಿಸ್‌ನ್ನು ಜಾರಿಗೆ ಮಾಡುತ್ತೆನೆ ಎಂದು ತಿಳಿಸಿದರು.

=========*ಹೇಳಿಕೆ2 ಇಲ್ಲಿಯವರೆಗೂ ನಮಗೆ ಯಾವುದೇ ಮಾಹಿತಿ ನೀಡಿದೆ ಕೆಲಸ ಮಾಡುತ್ತಿದ್ದಾರೆ. ಈ ಕೆಲಸದ ನೀಲಿನಕ್ಷೆ ನೀಡದೆ ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಶಾಸಕರು ಗಮನ ನೀಡಬೇಕು.

ಗೀತಾ ಅರುಣ್ ಗ್ರಾಪಂ ಸದಸ್ಯೆ

* ಹೇಳಿಕೆ2

೧ನೇ ಬ್ಲಾಕ್‌ನ ಗ್ರಾಮಸ್ಥರು ದೂರಿನ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದೆನೆ ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರನ್ನು ರಾವನೆ ಮಾಡುತ್ತೇನೆ.

ವಿರುಪಾಕ್ಷ ಪಿಡಿಓ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ