ಜೀವ ಸಂಕುಲಕ್ಕೆ ಅಪಾಯ ಒಡ್ಡುವ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ: ಶಾಸಕ ಆರ್.ವಿ. ದೇಶಪಾಂಡೆ

KannadaprabhaNewsNetwork |  
Published : Jun 06, 2025, 12:22 AM IST
5ಎಚ್.ಎಲ್.ವೈ-1: ಪಟ್ಟಣದ ಹಿಂದೂ ಸ್ಮಶಾನದಲ್ಲಿ  ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ್ಯ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ ಅವರು ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಾನವ ಮತ್ತು ಜೀವ ಸಂಕುಲಕ್ಕೆ ಭವಿಷ್ಯದಲ್ಲಿ ಅಪಾಯ ಒಡ್ಡಲಿರುವ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಲು ಮುಂದಾಗೋಣ

ಹಳಿಯಾಳ: ಮಾನವ ಮತ್ತು ಜೀವ ಸಂಕುಲಕ್ಕೆ ಭವಿಷ್ಯದಲ್ಲಿ ಅಪಾಯ ಒಡ್ಡಲಿರುವ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಲು ಮುಂದಾಗೋಣ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಗುರುವಾರ ಪಟ್ಟಣದ ಹಿಂದೂ ಸ್ಮಶಾನದಲ್ಲಿ ಅರಣ್ಯ ಇಲಾಖೆ ಹಾಗೂ ತಾಲೂಕಾಡಳಿತದ ಸಹಯೋಗದಲ್ಲಿ ಆಯೋಜಿಸಿದ ವಿಶ್ವಪರಿಸರ ದಿನಾಚರಣೆಯಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಇದು ಸರ್ಕಾರದ ಕಾರ್ಯಕ್ರಮ ಜವಾಬ್ದಾರಿ ಎಂಬ ಕಲ್ಪನೆಯಿಂದ ನಾವು ಹೊರಬರಬೇಕಾಗಿದೆ, ಸರ್ಕಾರ ಪರಿಸರ ಸಂರಕ್ಷಣೆಗಾಗಿ ಮೊದಲ ಆದ್ಯತೆಯನ್ನು ನೀಡುವುದರ ಜೊತೆಯಲ್ಲಿ ಪ್ರತಿ ವರ್ಷವೂ ಪರಿಸರ ದಿನಕ್ಕೆ ಘೋಷ ವ್ಯಾಕ್ಯೆಯನ್ನು ಘೋಷಿಸಿ ಅದರಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರು ಸಹಭಾಗಿತ್ವ ವಹಿಸಲು ಪ್ರೇರೆಪಿಸುತ್ತಿದೆ ಎಂದರು.

ಹವಾಮಾನ ಬದಲಾವಣೆಯು ಜನರ ಜೀವನದ ಮೇಲೆ ಮತ್ತು ಆರೋಗ್ಯ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಸುರಕ್ಷಿತ ಕುಡಿಯುವ ನೀರು, ಶುದ್ಧ ಗಾಳಿ, ಪೌಷ್ಟಿಕ ಸಮೃದ್ಧ ಆಹಾರದ ಪೂರೈಕೆ ಮತ್ತು ವಾಸಿಸಲು ಸುರಕ್ಷಿತ ಸ್ಥಳವು ಅಪಾಯದಂಚಿನಲ್ಲಿರುವುದು ಇತ್ತೀಚಿನ ದಿನಗಳಲ್ಲಿ ನಡೆದ ಪ್ರಕೃತಿ ವಿಕೋಪಗಳಲ್ಲಿ ನಾವು ನೋಡಿದ್ದೆವೆ ಎಂದರು. ನಮ್ಮ ಬದುಕಿಗಾಗಿ ಭವಿಷ್ಯದ ಯೋಜನೆಯನ್ನು ರೂಪಿಸುವ ನಾವುಗಳು ಇದರಲ್ಲಿ ಪರಿಸರ ಸಂರಕ್ಷಣೆಗೂ ಮೊದಲ ಸ್ಥಾನ ನೀಡಲು ಮರೆಯಬೇಡಿ ಎಂದರು.

ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ ಕೆ.ಸಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾಜಿ ಭೀರಪ್ಪ, ವಲಯ ಅರಣ್ಯಾಧಿಕಾರಿ ಬಸನವರಾಜ್ ಎಂ., ತಾಪಂ ಇಒ ವಿಲಾಸ್ ರಾಜ್, ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ಸಿಪಿಐ ಜಯಪಾಲ ಪಾಟೀಲ, ಬಿಇಒ ಪ್ರಮೋದ ಮಹಾಲೆ, ತೋಟಗಾರಿಕಾ ಅಧಿಕಾರಿ ಎರಿಯಾಲ್, ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಅರಣ್ಯ ಇಲಾಖೆಯ ರೇಣುಕಾ ಮಡಿವಾಳ, ಕಾಂಗ್ರೆಸ್ ಮುಖಂಡರು ಇದ್ದರು.

ಅರಣ್ಯ ಇಲಾಖೆ ಸಹಯೋಗದಲ್ಲಿ ಪಟ್ಟಣದ ಬಾಲಕಯರ ಪ್ರೌಢಶಾಲೆಯಲ್ಲೂ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಸಕರು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಕರೆ ನೀಡಿದರು. ದೇಶಪಾಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ, ತಾಲೂಕಿನೆಲ್ಲೆಡೆ ಶಾಲಾ-ಕಾಲೇಜುಗಳಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.

PREV

Recommended Stories

ಕೂಡಲೇ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ ಮಾಡಿ : ತೇಜಸ್ವಿ ಆಗ್ರಹ
ಐದು ಸಾವಿರ ಕೋಟಿ ರು. ವೆಚ್ಚದ 5ನೇ ಹಂತದ ಕಾವೇರಿ ಯೋಜನೆಗೆ ಕೇವಲ 70 ಸಾವಿರ ಸಂಪರ್ಕ!