ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಅರಕಲಗೂಡು ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ವತಿಯಿಂದ ಬಸವಾಪಟ್ಟಣದ ಕೆ.ಪಿ.ಎಸ್ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಆವರಣದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಟ್ಟು ಮಾತನಾಡುತ್ತ, ಪರಿಸರ ಎಲ್ಲೆಡೆ ಕಲುಷಿತವಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಬೇಕು. ಪ್ರತಿದಿನ ಲಕ್ಷಾಂತರ ಕೆ.ಜಿಯಷ್ಟು ಪ್ಲಾಸ್ಟಿಕ್ ಬಾಟೆಲ್, ಬ್ಯಾಗ್‌ಗಳು ನದಿಮೂಲ, ಜಲಮೂಲ ಅಲ್ಲದೆ ಭೂಮಿಯಲ್ಲಿ ಸೇರಿ ಒಟ್ಟಾರೆ ಪರಿಸರ ಮಾಲಿನ್ಯವಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಪ್ಲಾಸ್ಟಿಕ್‌ಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಮರಗಿಡಗಳನ್ನು ಪೋಷಿಸಬೇಕು. ಹೀಗೆ ಪರಿಸರ ಉತ್ತಮಗೊಳಿಸಿ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ನೀಡುವುದು ಸ್ವಸ್ಥ ಸಮಾಜ ಸಮಿತಿಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ತಾಲೂಕು ಪಂಚಾಯ್ತಿ ಮಾಜಿ ಸದಸ್ಯರಾದ ವಿರೇಶ್ ಬಿ.ಸಿ, ಮುಗಳೂರು ಪಾಂಡುರಂಗ, ಸೋಮಣ್ಣ, ರೂಪೇಶ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಲತಾ, ಉಪನ್ಯಾಸಕರಾದ ಹರೀಶ್ ಗ್ರಾಮಸ್ಥರಾದ ಮೃತ್ಯುಂಜಯ ರಾಮಚಂದ್ರ, ರಾಜು, ವಿರುಪಾಕ್ಷ, ಮೂಲೆಹೊಸಹಳ್ಳಿ ಶಿವು, ಯಶ್ವಂತ್, ಸುಮುಖ್, ಅಮಯ್, ಕಾಲೇಜು ಉಪನ್ಯಾಸಕವರ್ಗ, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.