ವಿಘ್ನೇಶ್ ಎಂ. ಭೂತನಕಾಡು
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರವಾಸಿ ತಾಣ ಮಾಂದಲಪಟ್ಟಿ ರಸ್ತೆಯಲ್ಲಿ ದಿಢೀರ್ ದಾಳಿ ನಡೆಸಿದ್ದು, ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ವೈಟ್ ಬೋರ್ಡ್ ನಾಲ್ಕು ಖಾಸಗಿ ಜೀಪುಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಜೀಪು ಚಾಲಕರೊಬ್ಬರು ಪ್ರವಾಸಿಗರಿಂದ ಅಧಿಕ ಬಾಡಿಗೆ ಹಣ ಪಡೆದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮಾಂದಲಪಟ್ಟಿಯಲ್ಲಿ ಜೀಪುಗಳ ಸಂಚಾರ ಸ್ಥಗಿತಗೊಂಡಿದೆ. ಪ್ರವಾಸಿ ತಾಣ ಮಾಂದಲಪಟ್ಟಿಯನ್ನು ಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಇಲ್ಲಿಗೆ ವಾರಾಂತ್ಯದಲ್ಲಿ ಸಾಕಷ್ಟು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅಲ್ಲಿಗೆ ತೆರಳಲು ರಸ್ತೆಯ ಗುಣಮಟ್ಟ ಕಳಪೆಯಾಗಿರುವ ಪರಿಣಾಮ ಜೀಪುಗಳ ಮೂಲಕವೇ ತೆರಳಬೇಕಾದ ಪರಸ್ಥಿತಿ ಉಂಟಾಗಿದೆ. ಕಳೆದ ಹಲವು ವರ್ಷಗಳಿಂದ ಪ್ರವಾಸಿಗರನ್ನು ಜೀಪು ಚಾಲಕರು ಮಾದಲಪಟ್ಟಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಸುಮಾರು 200ಕ್ಕೂ ಅಧಿಕ ಖಾಸಗಿ ಜೀಪುಗಳು ಇಲ್ಲಿ ಸಂಚರಿಸುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವೊಂದು ಘಟನೆಗಳು ನಡೆದ ಹಿನ್ನೆಲೆಯಲ್ಲಿ ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಖಾಸಗಿ ಜೀಪುಗಳಿಗೆ ಹಳದಿ ಬೋರ್ಡ್ ಅಳವಡಿಸಬೇಕು ಎಂಬ ನಿಯಮ ರೂಪಿಸಲಾಗಿತ್ತು. ಇದಕ್ಕೆ ಸಾರಿಗೆ ಇಲಾಖೆ ಕೂಡ ಗಡುವು ನೀಡಿತ್ತು. ಆದರೂ ಬೆರಳೆಣಿಕೆ ಮಂದಿ ಮಾತ್ರ ಹಳದಿ ಬೋರ್ಡ್ ಮಾಡಿಸಿಕೊಂಡಿದ್ದರು. ಈ ನಡುವೆ ವೈಟ್ ಬೋರ್ಡ್ ಜೀಪುಗಳ ಮೂಲಕವೇ ಮತ್ತೆ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿತ್ತು.ವರ್ಷಾಂತ್ಯ ಹಿನ್ನೆಲೆಯಲ್ಲಿ ಮಾಂದಲಪಟ್ಟಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಈ ಸಂದರ್ಭ ಜೀಪು ಚಾಲಕರೊಬ್ಬರು ಪ್ರವಾಸಿಗರೊಬ್ಬರಿಂದ ದುಪಟ್ಟು ಬಾಡಿಗೆ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿ ನಾಲ್ಕು ವೈಟ್ ಬೋರ್ಡ್ ಖಾಸಗಿ ಜೀಪುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಿಂದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಖಾಸಗಿ ಜೀಪುಗಳು ಸಂಚಾರ ಸ್ಥಗಿತಗೊಳಿಸಿವೆ.
ಬಾಕ್ಸ್...ದುಪ್ಪಟ್ಟು ಬಾಡಿಗೆ ಪಡೆದ ಆರೋಪ!
ಕೂಡಲೇ ರಸ್ತೆ ಅಭಿವೃದ್ಧಿಯಾಬೇಕು!
ನಿಯಮ ಬಾಯಿರವಾಗಿ ಸಂಚರಿಸುತ್ತಿದ್ದ ವೈಟ್ ಬೋರ್ಡ್ ಹೊಂದಿದ್ದ ನಾಲ್ಕು ಜೀಪುಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರವಾಸಿಗರೊಬ್ಬರಿಂದ ಅಧಿಕ ಹಣ ಬಾಡಿಗೆ ಪಡೆದಿದ್ದಾರೆಂಬ ಆರೋಪ ಕೇಳಿಬಂದಿತ್ತು. ಆದರೆ ಈ ಬಗ್ಗೆ ನಿಖರ ಮಾಹಿತಿ ಇಲ್ಲ. ಜೀಪು ಚಾಲಕರು ಸರಿಯಾದ ದಾಖಲೆಗಳನ್ನು ಇಟ್ಟು ಜೀಪು ಚಾಲನೆ ಮಾಡಬೇಕು. ಅಲ್ಲದೆ ಕಡ್ಡಾಯವಾಗಿ ಹಳದಿ ಬೋರ್ಡ್‌ಗೆ ಪರಿವರ್ತಿಸಿ ವಾಹನ ಚಾಲನೆ ಮಾಡಬೇಕು.
-ಶರಣು ಪಾಂಡಿರ, ಕಾರ್ಯದರ್ಶಿ ನಂದಿಮೊಟ್ಟೆ ಜೀಪು ಚಾಲಕರ ಸಂಘನಮ್ಮ ಸಂಘದ ಯಾವುದೇ ವಾಹನ ಚಾಲಕರು ಪ್ರವಾಸಿಗರಿಂದ ದುಪ್ಪಟ್ಟು ಬಾಡಿಗೆ ಪಡೆದುಕೊಂಡಿಲ್ಲ. ವೈಟ್ ಬೋರ್ಡ್ ಹೊಂದಿರುವ ಹಿನ್ನೆಲೆಯಲ್ಲಿ ನಮ್ಮ ಕೆಲವು ಜೀಪು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಅವರು ಯಾವುದೇ ತಪ್ಪು ಮಾಡಿಲ್ಲ. ನಾವು ಕಾನೂನಿಗೆ ಬೆಲೆ ನೀಡುತ್ತೇವೆ. ನಮ್ಮಲ್ಲಿ ಹಳದಿ ಬೋರ್ಡ್ ಮಾಡಿಸಲು ಎಲ್ಲ ಜೀಪು ಚಾಲಕರು ಒಪ್ಪಿದ್ದಾರೆ.