ಹೊಸಪೇಟೆ: ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ ಜೋಡೋ ನ್ಯಾಯ ಯಾತ್ರೆಗೆ ಆಸ್ಸಾಂ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ತಡೆ ಖಂಡಿಸಿ, ವಿಜಯನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ನಗರದ ಜೈ ಭೀಮ್ ವೃತ್ತದಿಂದ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಕೈ ಕಾರ್ಯಕರ್ತರು, ಬಿಜೆಪಿ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಆಸ್ಸಾಂ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು, ರಾಹುಲ್ ಗಾಂಧಿ ಅವರ ಬಸ್ ಅಡ್ಡಗಟ್ಟಿ ದಾಳಿ ಮಾಡಲು ಯತ್ನಿಸಿದ್ದಾರೆ. ದೇವಸ್ಥಾನಕ್ಕೆ ತೆರಳಿದ ರಾಹುಲ್ ಗಾಂಧಿ ಅವರಿಗೆ ಪೂಜೆಗೆ ಅವಕಾಶ ನೀಡದೇ ಪೊಲೀಸರು ದೌರ್ಜನ್ಯ ಎಸಗಿದ್ದಾರೆ.
ಜೈರಾಮ ರಮೇಶ್ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮುಖಂಡರಾದ ಕೆ.ಎಂ. ಹಾಲಪ್ಪ, ಎಚ್.ಎನ್.ಎಫ್. ಮೊಹಮ್ಮದ್ ಇಮಾಮ್ ನಿಯಾಜಿ, ರವಿಕುಮಾರ್, ಕೊಟಗಿನಾಳ ಮಲ್ಲಿಕಾರ್ಜುನ, ಬ್ಲಾಕ್ ವಿನಾಯಕ ಶೆಟ್ಟರ್, ಸಿ.
ಖಾಜಾ ಹುಸೇನ್, ಅಟವಾಳಗಿ ಕೊಟ್ರೇಶ್, ಕ್ವಾಲ್ವಿ ಹನುಮಂತಪ್ಪ, ಕುಮಾರ್ ಗೌಡ, ಪ್ರೇಮ ಕುಮಾರ್, ಬೇಲೂರು ಅಂಜಿನಪ್ಪ, ಜಿ. ತಮ್ಮನ್ನಳೆಪ್ಪ, ಡಿ. ವೆಂಕಟರಮಣ, ಬಿ. ಮಾರೆಣ್ಣ, ಸೋಮಶೇಖರ್ ಬಣ್ಣದ ಮನೆ, ಏಕಂಬರೇಶ ನಾಯ್ಕ.
ಬಿ. ಮಂಜುನಾಥ ಯಾದವ್, ಪಿ. ವೀರಾಂಜನೇಯ ಗಂಗಾಧರ ಗೌಡ, ಅನಂತ ಪದ್ಮನಾಭ ಸ್ವಾಮಿ, ಸಿದ್ದೇಶ್, ನಗರಸಭೆ ಸದಸ್ಯ ಅಸ್ಲಾಂ ಮಾಳಗಿ, ಕೆ. ಮಹೇಶ್, ಮೊಹಮ್ಮದ್ ಗೌಸ್, ಅಂಕ್ಲೇಶ್ ನಾಯಕ, ಎಸ್.ಬಿ. ಶ್ರೀನಿವಾಸ, ಶೇಕ್ ತಾಜುದ್ದೀನ್, ದೇವರ ಮನೆ ಕನ್ನಶ್ವರ, ಚಾಂದ್, ಪ್ರಮೋದ್ ಪುಣ್ಯ ಮೂರ್ತಿ, ಬಾಣದ ಗಣೇಶ, ವೀರಭದ್ರ ನಾಯಕ್ ಇತರರಿದ್ದರು.