ಹಿರೇಕೆರೂರು: ಮಹಾತ್ಮ ಗಾಂಧೀಜಿ ಅವರ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸೇವಾ ಯೋಜನೆ ಇಂದು ಇಡೀ ದೇಶದಲ್ಲಿ ಒಂದು ಉತ್ತಮ ಜಾಗೃತಿ ಕಾರ್ಯವನ್ನು ಮಾಡುವ ಮೂಲಕ ಯುವಕರಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಮೂಲಕ ಭವಿಷ್ಯದ ನಾಯಕರನ್ನಾಗಿ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಬಿ.ಆರ್.ತಂಬಾಕದ ಪ್ರಥಮ ದರ್ಜೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ವತಿಯಿಂದ ತಾಲೂಕಿನ ನೂಲಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತ ಇಂದು ಅಭಿವೃದ್ಧಿಯ ಮುಂಚೂಣಿಯಲ್ಲಿರುವ ದೇಶವಾಗಿರುವುದರಿಂದ ಯುವಕರು ಡಿಜಿಟಲ್ ಸಾಕ್ಷರತೆಯನ್ನು ಹೊಂದುವ ಮೂಲಕ ತಮ್ಮ ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಬೇಕು. ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಕಾರ್ಯವನ್ನು ಮಾಡಬೇಕು. ಇಂತಹ ಶಿಬಿರಗಳು ವಿದ್ಯಾಥಿಗಳಲ್ಲಿ ಇವರು ಪ್ರತಿಭೆಯನ್ನು ಗುರುತಿಸಿ ಅವರಿಗೆ ವೇದಿಕೆಯನ್ನು ಒದಗಿಸಬೇಕು. ಕೇವಲ ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಇದ್ದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಎಸ್.ವೀರಭದ್ರಯ್ಯ, ವಿದ್ಯಾಥಿಗಳಲ್ಲಿ ಸೇವಾ ಮನೋಭಾವ ಕಡಿಮೆಯಾಗುತ್ತಿದ್ದು, ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳಲ್ಲಿ ಏಳು ದಿನಗಳ ಕಾಲ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಸೇವಾ ಮನೋಭಾವನ್ನು ವೃದ್ದಿಸಿಕೊಳ್ಳಬೇಕಿದೆ. ಭವಿಷ್ಯದ ಭಾರತಕ್ಕಾಗಿ ಯುವಕರು ಒಂದಾಗಬೇಕಿದೆ. ನಮ್ಮ ಈ ಬೃಹತ್ ಭಾರತವನ್ನು ಒಬ್ಬಿಬ್ಬರಿಂದ ಬದಲಾವಣೆ ಮಾಡಲು ಸಾಧ್ಯ, ಎಲ್ಲರೂ ಕೈ ಜೊಡಿಸಿದರೆ ಮಾತ್ರ ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಶಿಬಿರಾಧ್ಯಕ್ಷ, ಪ್ರಾಚಾರ್ಯ ಡಾ. ನಾನಾಸಾಹೇಬ ಎಸ್. ಹಚ್ಚಡದ, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಸಿಇಎಸ್ ಸಂಸ್ಥೆಯ ನಿರ್ದೇಶಕ ಸಿದ್ದನಗೌಡ ನರೇಗೌಡರ, ವಿ.ಎಸ್. ಪುರದ, ಬಸವರಾಜ ಕೆ., ಹನುಮಂತಪ್ಪ ಹರಿಜನ, ಗಣೇಶಪ್ಪ ಬ. ಕೋರಿ, ಉಜ್ಜಪ್ಪ ನಾ. ನಿಂಗಾಪೂರ, ವಿನಯ್ ದಳವಾಯಿ, ರಾಜಶೇಖರ ಬ. ಕೋರಿ, ಭರತ ಐ.ಎಸ್., ಚಂದ್ರಪ್ಪ ಲಮಾಣಿ, ವೀರೇಶ ಬ.ಕೋರಿ, ಪ್ರೊ.ಸಿ.ಆರ್. ದೂದೀಹಳ್ಳಿ, ಪಿ.ಎಂ. ವಿಜಯಕುಮಾರ, ಸರಸ್ವತಿ ಕಂಬಾಳಿಮಠ, ಪೂಜಾ ಅಡಗಂಟಿ, ಆರ್ಯ ವಿ.ಎಂ., ಶಿಬಿರದ ಅಧಿಕಾರಿಗಳಾದ ಪ್ರವೀಣ ಅಂಗಡಿ, ಶಶಿಕುಮಾರ ಕಡೂರ ಇತರಿದ್ದರು.