ಜಿಲ್ಲಾಮಟ್ಟದ ಬೀದಿನಾಟಕೋತ್ಸವ, ಜಿಲ್ಲಾಮಟ್ಟದ ಬೀದಿರಂಗ ಪುರಸ್ಕಾರ-೨೦೨೫ಕನ್ನಡಪ್ರಭ ವಾರ್ತೆ ಹಳಿಯಾಳ
ಗುರುವಾರ ತಾಲೂಕಾಡಳಿತ ಸೌಧದಲ್ಲಿ ಆಯೋಜಿಸಿದ ಜಿಲ್ಲಾಮಟ್ಟದ ಬೀದಿರಂಗ-ಪುರಸ್ಕಾರ-೨೦೨೫ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಸಮಸ್ಯೆ, ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಬೀದಿನಾಟಕಗಳು ಪ್ರಬಲ ಮಾಧ್ಯಮವಾಗಿವೆ ಎಂದರು.ಯಾವ ನಗರ, ಗ್ರಾಮದಲ್ಲಿ ಸಾಹಿತ್ಯ, ಕಲೆ ಸಂಸ್ಕೃತಿ, ಸಾಹಿತ್ಯದ ಕಾರ್ಯಕ್ರಮಗಳು ನಡೆಯುವುದಿಲ್ಲವೋ ಅಂತಹ ನಗರ ಹಾಗೂ ಗ್ರಾಮವನ್ನು ಸತ್ತ ನಗರ ಹಾಗೂ ಗ್ರಾಮವೆಂದು ಪರಿಗಣಿಸಬೇಕು ಎಂದರು. ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೇಕಾಗುವ ಸಹಕಾರ ಪ್ರೋತ್ಸಾಹ ನೀಡಲು ತಾಲೂಕಾಡಳಿತ ಸದಾ ಸಿದ್ಧವಿದೆ ಎಂದರು.
ರಾಜ್ಯ ಬೀದಿನಾಟಕ ಕಲಾತಂಡಗಳ ಒಕ್ಕೂಟದ ಪ್ರಮೂಖರಾಗಿರುವ ಪುರುಷೋತ್ತಮ ಗೌಡಾ ಪ್ರಸ್ತಾವಿಕವಾಗಿ ಮಾತನಾಡಿ, ಬೀದಿನಾಟಕ ಹಾಗೂ ಬೀದಿನಾಟಕಗಳ ಕಲಾವಿದರಿಗೆ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ಪ್ರೋತ್ಸಾಹ ದೊರೆಯುತ್ತಿಲ್ಲ. ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸುವ ಕಲಾವಿದರು ಬೀದಿಪಾಲಾಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ನಾವುಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬೀದಿನಾಟಕದ ಪ್ರತ್ಯೇಕ ವಿಭಾಗವನ್ನು ಕಟ್ಟಲು ಸಾಧ್ಯವಾಯಿತು. ನಾವುಗಳು ಈಗ ನಮ್ಮ ಬೀದಿನಾಟಕ ಕಲಾವಿದರನ್ನು ಹಾಗೂ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.ತಾಪಂ ಇಒ ವಿಲಾಸರಾಜ್ ಹಾಗೂ ಹಳಿಯಾಳದ ಹವ್ಯಾಸಿ ನಾಟಕ ಕಲಾವಿದ ರಾಮಕೃಷ್ಣ ಗುನಗಾ ಮಾತನಾಡಿದರು.
ಕಲಾವಿದರು/ಸಾಧಕರಿಗೆ ಸನ್ಮಾನ:ಬೀದಿನಾಟಕದ ಶ್ರೇಯಸ್ಸಿಗಾಗಿ ಶ್ರಮಿಸಿದ ಜಿಲ್ಲೆಯ ವಿವಿಧ ತಾಲೂಕಿನ ಬೀದಿನಾಟಕ ಕಲಾವಿದರನ್ನು ಸನ್ಮಾನಿಸಲಾಯಿತು. ಕಾರವಾರ ಅಮದಳ್ಳಿ ದೇವಮಾತಾ ಮಲ್ಟಿಪರ್ಪಸ್ ಸೊಸೈಟಿಯ ನಾಗರಾಜ ಬಸವಂತ ಓಣಿಕೇರೊ, ಶ್ರೀ ಬಂಟದೇವ ಯುವಕ ಸಂಘ ಅಮದಳ್ಳಿಯ ಉಮಾಕಾಂತಾ ಬೇಡು ಗೌಡಾ, ಹಳಿಯಾಳ ತಾಲೂಕಿನ ಗಾಡಗೇರಾ ಗ್ರಾಮದ ಅಮ್ಚೆ ಮೂಳ ಸಿದ್ಧಿ ಸಾಂಸ್ಕೃತಿಕ ಕಲಾತಂಡದ ಮಾಗ್ಧಲೀನ್ ಪ್ರಾನ್ಸಿಸ್‌ಸಿದ್ಧಿ, ಸಿದ್ದಾಪುರ ತಾಲೂಕಿನ ಕಡಕೇರಿಯ ಈಶ್ವರ ಕಲಾ ಸಂದ ಹೋಲಿಯಪ್ಪ ಮಡಿವಾಳ, ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಕಲಾಸಂಘ ಅವರ್ಸಾ ಅಂಕೋಲಾದ ಆನಂದ ರಾಜು ನಾಯರ್, ಅಂಕೋಲಾ ಸಂಗಾತಿ ರಂಗಭೂಮಿಯ ಜಯಾ ಗೌಡಾ, ಜೋಯಿಡಾ ತಾಲೂಕಿನ ಸಪ್ತಸ್ವರ ಸೇವಾ ಸಂಸ್ಥೆ ಗುಂದ ಗೋಪಾಲ ಕಾನಳ್ಳಿಯವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕಿಂತ ಮೊದಲು ವಿವಿದ ಕಲಾವಿದರಿಂದ ಪಟ್ಟಣದೆಲ್ಲೆಡೆ ಬೀದಿನಾಟಕಗಳ ಪ್ರದರ್ಶನಗಳಾದವು.
ವೇದಿಕೆಯಲ್ಲಿ ರಾಜ್ಯ ಜನಪದ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹಿರಿಯ ಕಲಾವಿದೆ ಸೋಬಿನ್‌ಕಾಂಬ್ರೇಕರ, ಹಿರಿಯ ಸಮಾಜ ಸೇವಕ ಲೂವಿಸ್ ಪಿರೇರಾ, ಕೆಸರೊಳ್ಳಿ ಗ್ರಾಪಂ ಸದಸ್ಯ ಸಂಜು ಪಾಟೀಲ, ನಾಟಕ ಬರಹಗಾರ ಶಂಕರ ತೊರ್ಲೆಕರ, ಗಾಯಕ ಹಾಗೂ ಕಲಾವಿದ ಅರುಣ ಗೊಂದಳಿ ಹಾಗೂ ಇತರರು ಇದ್ದರು.ಬೀದಿನಾಟಕ ಕಲಾತಂಡಗಳ ಒಕ್ಕೂಟದ ಜಿಲ್ಲಾ ಘಟಕಗಳ ಪ್ರಮುಖರಾದ ಮಂಜುನಾಥ ಮುದ್ಗೇಕರ, ಗಂಗಾಧರ ಮಡಿವಾಳ, ಕೆ.ರಮೇಶ, ಜ್ಯೂಲಿಯಾನಾ ಫರ್ನಾ೦ಡೀಸ್, ಅನ೦ತ ಹುಲಸ್ವಾರ, ವಿನುತಾ ರಾತ ಹಾಗೂ ಇತರರು ಇದ್ದರು.
ರಾಜ್ಯ ಬೀದಿನಾಟಕಗಳ ಒಕ್ಕೂಟ ಹಾಗೂ ಜಿಲ್ಲಾ ಘಟಕ ಮತ್ತು ಹಳಿಯಾಳ ತಾಲೂಕಿನ ಗಾಡಗೇರಾದ ಅಮ್ಚೆಮೂಳ ಸಿದ್ಧಿ ಸಾಂಸ್ಕೃತಿಕ ಕಲಾ ತಂಡದವರು ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದರು.ಕೆ.ರಮೇಶ ಕಾರ್ಯಕ್ರಮ ನಿರ್ವಹಿಸಿದರು.