ಗೋಹತ್ಯೆ, ಮಾಂಸ ಸಾಗಾಟ ತಡೆಗೆ ಕಟ್ಟುನಿಟ್ಟಿನ ಕ್ರಮವಾಗಲಿ

KannadaprabhaNewsNetwork |  
Published : May 18, 2026, 03:45 AM IST
ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಗೋಹತ್ಯೆ ತಡೆಗೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ತಹಸೀಲ್ದಾರ್‌ ಎಸ್. ರೇಣುಕಾ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಗೋಹತ್ಯೆ ಹಾಗೂ ಗೋಮಾಂಸ ಸಾಗಣೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಾವೇರಿ ಜಿಲ್ಲಾ ಹಿಂದೂ ಜಾಗರಣೆ ವೇದಿಕೆ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಹಾನಗಲ್ಲ: ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಗೋಹತ್ಯೆ ಹಾಗೂ ಗೋಮಾಂಸ ಸಾಗಣೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಾವೇರಿ ಜಿಲ್ಲಾ ಹಿಂದೂ ಜಾಗರಣೆ ವೇದಿಕೆ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಹರೀಶ ಹಾನಗಲ್ಲ ಈ ಸಂದರ್ಭದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾನೂನು ಜಾರಿಯಲ್ಲಿದ್ದರೂ ಗೋಹತ್ಯೆ ನಿರಾತಂಕವಾಗಿ ನಡೆಯುತ್ತಿದೆ. ಯಾವುದೇ ವಯಸ್ಸಿನ ದನ, ಹೋರಿ, ಕರುಗಳನ್ನು ವಧೆ ಮಾಡುವುದಕ್ಕೆ ಅವಕಾಶವಿಲ್ಲ. ಮೇ ಕೊನೆಯ ವಾರದಲ್ಲಿ ಬಕ್ರೀದ್ ಇರುವುದರಿಂದ ಬಹಳಷ್ಟು ಗೋವು ಸೇರಿದಂತೆ ವಿವಿಧ ಪ್ರಾಣಿ ವಧೆ ನಡೆಯುವ ಸಾಧ್ಯತೆ ಹೆಚ್ಚಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿ, ಗೋವು ಸೇರಿದಂತೆ ನಿಷೇಧಿತ ಪ್ರಾಣಿ ವಧೆ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ನಿಯಮಾವಳಿ ಅನುಸರಿಸಿ ಗೋಮಾಂಸ ಸಾಗಣೆ ತಡೆಯಲು ಆಯಕಟ್ಟಿನ ಜಾಗಗಳಲ್ಲಿ ನಾಕಾಬಂಧಿ ಹಾಕಬೇಕು. ಕಸಾಯಿಖಾನೆಗಳೆ ಮೇಲೆ ನಿಗಾ ಇಡಬೇಕು. ಆಕ್ರಮ ಕಸಾಯಿಖಾನೆ ಪ್ರಕರಣದಲ್ಲಿ ಇರುವವರ ಮೇಲೆ ನಿಗಾ ವಹಿಸಿ ಅಪರಾಧಿ ಕೃತ್ಯ ನಡೆಯದಂತೆ ಕ್ರಮ ಜರುಗಿಸಬೇಕು. ಈ ಆರೋಪದಲ್ಲಿ ಜಾಮೀನಿನ ಮೇಲೆ ಹೊರಗಿದ್ದವರಿಗೆ ಎಚ್ಚರಿಕೆ ನೀಡಬೇಕು. ಗೋವಧೆ ಬಲಿಗೆ ಏಳು ವರ್ಷಗಳ ಶಿಕ್ಷೆ ಹಾಗೂ ₹೫ ಲಕ್ಷ ದಂಡ, ಗೋವಧೆಗೆ ಬಳಸಿದ ಜಾಗ ಮುಟ್ಟುಗೋಲು ವಿಷಯಗಳ ಬಗೆಗೆ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ವಿಶೇಷ ತಂಡ ರಚಿಸಿ ಗೋರಕ್ಷಣೆಗೆ ಮುಂದಾಗುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಜಿಲ್ಲಾ ಸಹ ಸಂಯೋಜಕ ನಾಗರಾಜ ಹೆಬ್ಬಾರ, ತಾಲೂಕು ಸಂಯೋಜಕ ನಿಖತ ಹದಳಗಿ, ಸಹ ಸಂಯೋಜಕರಾದ ಗುರುರಾಜ ಆರೇರ, ಸಂತೋಷ ಅಜಗುಂಡಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಸಚಿನ್ ರಾಮಣ್ಣನವರ, ಎಬಿವಿಪಿ ತಾಲೂಕು ಸಂಚಾಲಕ ರವಿ ನೆಗಳೂರ, ಪದಾಧಿಕಾರಿಗಳಾದ ಬಸವರಾಜ ಹಾದಿಮನಿ, ಮಂಜುನಾಥ ಕೊಂಚಿಗೇರಿ, ರಾಘು ಬಂಗಾರಿ, ಶಿವು ಮೇದಾರ, ಚೇತನ್ ಹುಲ್ಲಕ್ಕನವರ, ವೀರೇಶ ಸೋಮಗಳಯ್ಯಮಠ, ಚೇತನ್ ಜವಳಿ, ಶಶಾಂಕ ಬೋಂಗಾಳೆ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಾಲು ಶ್ರೀ ಅನಂತಪದ್ಮನಾಭ ದೇವಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ
ಕಾರ್ಕಳ: ಋಣಾನುಬಂಧ ವಧುವರರ ಸಮಾವೇಶ