ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಯಶಸ್ಸಿಗೆ ಶ್ರಮಿಸಿ: ಶಿವಾನಂದ ತಗಡೂರು

KannadaprabhaNewsNetwork |  
Published : Jan 15, 2024, 01:50 AM ISTUpdated : Jan 15, 2024, 05:34 PM IST
14ಕೆಡಿವಿಜಿ9-ದಾವಣಗೆರೆಯಲ್ಲಿ ಭಾನುವಾರ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ................14ಕೆಡಿವಿಜಿ10-ದಾವಣಗೆರೆಯಲ್ಲಿ ಭಾನುವಾರ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿದರು. | Kannada Prabha

ಸಾರಾಂಶ

ಅತಿಥಿ ಸತ್ಕಾರಕ್ಕೆ ಹೆಸರಾದ ದಾವಣಗೆರೆಯಲ್ಲಿ ನಡೆಯುವ ಸಮ್ಮೇಳನ ಎಲ್ಲರ ಕುತೂಹಲ ಕೆರಳಿಸಿದ್ದು, ನಮಗೆ ಹಾಗೂ ನಿಮಗೂ ಈ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದೆ ಎಂದರು.ಪ್ರತಿ ಸಮ್ಮೇಳನವೂ ಒಂದೊಂದು ರೀತಿ ವೈಶಿಷ್ಟ್ಯತೆ ಪಡೆದಿದ್ದವು. ಮೈಸೂರಿನ ಸಮ್ಮೇಳನ ದಸರಾ ವೈಭವದಂತೆ ನಡೆಯಿತು. 

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಾಡಿನ ವಿವಿಧ ಜಿಲ್ಲೆಗಳಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ದಾವಣಗೆರೆಯಲ್ಲಿ ಫೆ.3 ಮತ್ತು 4ರಂದು ನಡೆಯುವ ಸಮ್ಮೇಳನವೂ ಅತ್ಯಂತ ಕುತೂಹಲ ಕೆರಳಿಸಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ನಗರದ ಪಾಲಿಕೆ ಆವರಣದಲ್ಲಿ ಸಂಘದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಅತಿಥಿ ಸತ್ಕಾರಕ್ಕೆ ಹೆಸರಾದ ದಾವಣಗೆರೆಯಲ್ಲಿ ನಡೆಯುವ ಸಮ್ಮೇಳನ ಎಲ್ಲರ ಕುತೂಹಲ ಕೆರಳಿಸಿದ್ದು, ನಮಗೆ ಹಾಗೂ ನಿಮಗೂ ಈ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದೆ ಎಂದರು.

ಪ್ರತಿ ಸಮ್ಮೇಳನವೂ ಒಂದೊಂದು ರೀತಿ ವೈಶಿಷ್ಟ್ಯತೆ ಪಡೆದಿದ್ದವು. ಮೈಸೂರಿನ ಸಮ್ಮೇಳನ ದಸರಾ ವೈಭವದಂತೆ ನಡೆಯಿತು. ಮಂಗಳೂರಿನಲ್ಲೂ ಸ್ಥಳೀಯ ಜನ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ದಾನಿಗಳ ಸಹಕಾರದಿಂದ ಯಶಸ್ವಿಯಾಯಿತು. 

ಇವೆಲ್ಲಕ್ಕಿಂತಲೂ ಭಿನ್ನವಾಗಿ ದಾವಣಗೆರೆ ಸಮ್ಮೇಳನ ಆಗಬೇಕೆಂಬುದು ನಮ್ಮೆಲ್ಲರ ಮಹದಾಸೆ. ಈ ನಿಟ್ಟಿನಲ್ಲಿ ವೃತ್ತಿ ಬಾಂಧವರಿಗೆ ವಾರ್ಷಿಕ ಪ್ರಶಸ್ತಿ, ಸ್ಥಳೀಯವಾಗಿ 60 ವರ್ಷ ಮೇಲ್ಪಟ್ಟ ಪತ್ರಕರ್ತರಿಗೆ ಸನ್ಮಾನಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಸಮ್ಮೇಳನಕ್ಕೆ ಇನ್ನು ಕೇವಲ 15 ದಿನ ಬಾಕಿ ಇದೆ. ಪ್ರತಿ ಸಮಿತಿಗಳು, ಸಮಿತಿ ಸದಸ್ಯರ ಮೇಲೂ ಮಹತ್ವದ ಜವಾಬ್ಧಾರಿ ಇದೆ. ಮುಖ್ಯವಾಗಿ ವಸತಿ, ಊಟೋಪಚಾರದಲ್ಲಿ ಯಾವುದೇ ತೊಂದರೆಯಾಗದಂತೆ ಸಮರ್ಥವಾಗಿ ನಿಭಾಯಿಸಬೇಕು. ಮಹಿಳಾ ಪತ್ರಕರ್ತರೂ ಬರಲಿದ್ದಾರೆ ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಮಾತನಾಡಿ, ನಾಡಿನ ಕೇಂದ್ರ ಬಿಂದುವಾದ ದಾವಣಗೆರೆಯಲ್ಲೇ ಸಮ್ಮೇಳನ ನಡೆಸಬೇಕೆಂದು ಹಠಕ್ಕೆ ಬಿದ್ದು, ಇಲ್ಲಿಗೆ ಸಮ್ಮೇಳನವನ್ನು ತೆಗೆದುಕೊಂಡು ಬಂದಿದ್ದೇವೆ. ನಮ್ಮೆಲ್ಲರ ಪ್ರಯತ್ನಕ್ಕೆ ಚ್ಯುತಿಯಾಗದಂತೆ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದರು.

ಸಮ್ಮೇಳನದ ಸಂಚಾಲಕ ಪೇಪರ್ ಕೆ.ಚಂದಣ್ಣ, ಹಿರಿಯ ಪತ್ರಕರ್ತರಾದ ಬಿ.ಎನ್.ಮಲ್ಲೇಶ, ಬಾ.ಮ.ಬಸವರಾಜಯ್ಯ, ಎಚ್.ಬಿ.ಮಂಜುನಾಥ, ನಾಗರಾಜ ಎಸ್.ಬಡದಾಳ್, ಸದಾನಂದ ಹೆಗಡೆ, ಮಲ್ಲಿಕಾರ್ಜುನ ಕಬ್ಬೂರು, ರಾ.ರವಿಬಾಬು, ಮಂಜುನಾಥ ಗೌರಕ್ಕಳವರ್, ಎಂ.ಬಿ.ನವೀನ, ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಏಕಬೋಟೆ, ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್‌, ಖಜಾಂಚಿ ಎನ್.ವಿ.ಬದರೀನಾಥ.

ವೀರೇಶ, ಒಡೆಯರ್, ವೇದಮೂರ್ತಿ, ರಂಗನಾಥ ರಾವ್‌, ತೇಜಸ್ವಿನಿ ಪ್ರಕಾಶ, ದೇವಿಕಾ ಸುನಿಲ್‌, ರುದ್ರಮ್ಮ, ಭಾರತಿ, ಕೀರ್ತಿ ಹರಿಹರ, ಚಿದಾನಂದ ಹೆಮ್ಮನಬೇತೂರು ಸೇರಿದಂತೆ ಅನೇಕರು ಇದ್ದರು. ಸಮ್ಮೇಳನದ ಹಣಕಾಸು, ವಸತಿ, ಆಹಾರ, ಆರೋಗ್ಯ, ಸಾರಿಗೆ ಸೇರಿದಂತೆ ವಿವಿಧ ಸಮಿತಿಗಳ ನಿರ್ವಹಣೆ ಬಗ್ಗೆ ಚರ್ಚಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ