ಶಾಯಿರಿ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸಿ

KannadaprabhaNewsNetwork |  
Published : Jan 12, 2026, 02:30 AM IST
11ಕೆಪಿಎಲ್27 ಕೊಪ್ಪಳದ ತಾ.ಪಂ.ಸಭಾಂಗಣದಲ್ಲಿ  ಪುಸ್ತಕಗಳ  ಲೋಕಾರ್ಪಣೆ ಹಾಗೂ ಕವಿಗೋಷ್ಠಿ  ಕಾಯ೯ಕ್ರಮ | Kannada Prabha

ಸಾರಾಂಶ

ಲೇಖಕರು ಕಾವ್ಯವನ್ನು ಒತ್ತಾಯ ಪೂರ್ವಕವಾಗಿ ಬರೆಯದೇ ನಿತ್ಯ ಕಲಿಯುವ ವಿದ್ಯಾರ್ಥಿ ರೀತಿಯಾಗಿ ಬರೆಯುವ ಆಸಕ್ತಿ ಹೊಂದಬೇಕು

ಕೊಪ್ಪಳ: ಜಿಲ್ಲೆಯಲ್ಲಿ ಶಾಯಿರಿ ಬರೆಯುವರ ಸಂಖ್ಯೆ ಅದ್ಭುತವಾಗಿದೆ, ಮುಂದಿನ ದಿನಗಳಲ್ಲಿ ಈ ಪರಂಪರೆ ಉಜ್ವಲವಾಗಿ ಸಾಗುತ್ತಾ ಸಾಮಾಜಿಕ ಬದಲಾವಣೆಗೆ ಪೂರಕ ವಾಗುವ ರೀತಿಯಲ್ಲಿ ಸಾಹಿತ್ಯ ರಚಿಸಬೇಕೆಂದು ಸಾಹಿತಿ ಡಾ. ಪವನ ಕುಮಾರ್ ಗುಂಡೂರು ಅಭಿಪ್ರಾಯಪಟ್ಟರು.

ಭಾನುವಾರ ಕೊಪ್ಪಳದ ತಾಪಂ ಸಭಾಂಗಣದಲ್ಲಿ ಶಿವಶಕ್ತಿ ಪ್ರಕಾಶನ, ಮಂಜುಳಾ ಪ್ರಕಾಶನ, ಬೈರಾಪುರ ಹಾಗೂ ಕೊಪ್ಪಳ ಜಿಲ್ಲಾ,ತಾಲೂಕು ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಶಿವಪ್ರಸಾದ ಹಾದಿಮನಿಯವರ ನೂರೊಂದು ಶಾಯಿರಿಗಳು ಮತ್ತು ಯಲ್ಲಪ್ಪಮಲ್ಲಪ್ಪ ಹರ್ನಾಳಗಿಯವರ ಮಧು ಬನದ ಶಾಯಿರಿಗಳು ಪುಸ್ತಕ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಲೇಖಕರು ಕಾವ್ಯವನ್ನು ಒತ್ತಾಯ ಪೂರ್ವಕವಾಗಿ ಬರೆಯದೇ ನಿತ್ಯ ಕಲಿಯುವ ವಿದ್ಯಾರ್ಥಿ ರೀತಿಯಾಗಿ ಬರೆಯುವ ಆಸಕ್ತಿ ಹೊಂದಬೇಕು. ಗದ್ಯ ಬರೆಯುವುದು ಸುಲಭ ಪದ್ಯ ಬರೆಯುವುದು ಕಠಿಣ ಎಂದು ತಿಳಿಸಿದರು.

ಸಾಹಿತಿ ಶರಣಪ್ಪ ಎನ್.ಮೆಟ್ರಿ ಅಧ್ಯಕ್ಷತೆ ವಹಿಸಿದ್ದರು. ಶಿ.ಕಾ.ಬಡಿಗೇರ ಕೃತಿಗಳನ್ನು ಲೋಕಾಪ೯ಣೆಗೈದರು. ನೂರೊಂದು ಶಾಯಿರಿಗಳ ಕುರಿತು ವೀರಪ್ಪ ನಿಂಗೋಜಿ ಮಾತನಾಡಿದರು. ಲೇಖಕ ಶಿವಪ್ರಸಾದ ಹಾದಿಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಜಿಲ್ಲಾ ಚುಸಾಪ ಅಧ್ಯಕ್ಷ ರುದ್ರಪ್ಪ ಭಂಡಾರಿ,ಸಾಹಿತಿ ಶರಣಬಸಪ್ಪ ಬಿಳಿಯಲಿ, ಕೊಟ್ರೇಶ ಜವಳಿ, ಕರಿಸಿದ್ಧನಗೌಡ ಮಾಲಿಪಾಟೀಲ, ಈರಪ್ಪ ಬಿಜಲಿ , ಮರುಳಸಿದ್ದಪ್ಪ ದೊಡ್ಡಮನಿ, ಎ.ಪಿ.ಅಂಗಡಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಮಹಾಂತೇಶ ನೆಲಾಗಣಿ ನಿರೂಪಿಸಿದರು.

ನಂತರ ಸಾಹಿತಿ ಸಾವಿತ್ರಿ ಮುಜುಮದಾರ್ ಚಲನಚಿತ್ರ ಅಕಾಡೆಮಿ ಸದಸ್ಯರು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು. ಕವಿಗಳಾದ ವಿಜಯಲಕ್ಷ್ಮೀ, ಕೊಟಗಿ. ಸೋಮಶೇಖರ ಕಂಚಿ, ರವಿ.ಎಸ್. ಹಿರೇಮನಿ,ಅಕ್ಕಮಹಾದೇವಿ ಅಂಗಡಿ, ಎಸ್.ಎಂ. ಕಂಬಾಳಿ ಮಠ, ಬಸವರಾಜ ಉಪ್ಪಿನ, ಡಾ.ನಾಗರಾಜ್ ದಂಡೋತಿ, ಮುಮ್ತಾಜ್ ಬೇಗಂ ಕನಕಗಿರಿ, ವಸಂತ ಗುಡಿ, ಡಾ.ಸಂಗಮೇಶ್ವರ ಪಾಟೀಲ್ (ಸಂಪಾ), ಶಿವಮ್ಮ ಗುರು ಸ್ಥಲಮಠ, ಅಮೀನ್ಸಾಬ್ ಮುಲ್ಲಾ ಸೇರಿದಂತೆ 17 ಜನ ಕವಿತೆ ವಾಚನ ಮಾಡಿದರು. ಯಲ್ಲಪ್ಪ ಎಂ. ಹರನಾಳಗಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ