ಗದುಗಿನ ಖಾನತೋಟ ಓಣಿಯಲ್ಲಿ ಮಸೀದಿ ನಿರ್ಮಾಣಕ್ಕೆ ತೀವ್ರ ವಿರೋಧ

KannadaprabhaNewsNetwork | Published : Apr 22, 2025 1:47 AM

ಸಾರಾಂಶ

ಗದಗ ನಗರದ ಖಾನತೋಟ ಓಣಿಯಲ್ಲಿ ಖಾನಸಾವಲಿ ದರ್ಗಾ ಪಕ್ಕದಲ್ಲಿ ಆ ಭಾಗದ ಮುಸ್ಲಿಂ ಕಮಿಟಿ ಮಸೀದಿ ಕಟ್ಟುತ್ತಿರುವುದು ಖಂಡನಿಯ ವಿಷಯವಾಗಿದೆ. ತಕ್ಷಣ ಈ ಮಸೀದಿ ಕಾಮಗಾರಿ ನಿಲ್ಲಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಮಸೀದಿ ಪ್ರಾರಂಭಿಸಲು ಅವಕಾಶ ಕೊಡಬಾರದು ಎಂದು ಕ್ರಾಂತಿ ಸೇನಾ ಜಿಲ್ಲಾ ಘಟಕದಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಗದಗ: ನಗರದ ಖಾನತೋಟ ಓಣಿಯಲ್ಲಿ ಖಾನಸಾವಲಿ ದರ್ಗಾ ಪಕ್ಕದಲ್ಲಿ ಆ ಭಾಗದ ಮುಸ್ಲಿಂ ಕಮಿಟಿ ಮಸೀದಿ ಕಟ್ಟುತ್ತಿರುವುದು ಖಂಡನಿಯ ವಿಷಯವಾಗಿದೆ. ತಕ್ಷಣ ಈ ಮಸೀದಿ ಕಾಮಗಾರಿ ನಿಲ್ಲಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಮಸೀದಿ ಪ್ರಾರಂಭಿಸಲು ಅವಕಾಶ ಕೊಡಬಾರದು ಎಂದು ಕ್ರಾಂತಿ ಸೇನಾ ಜಿಲ್ಲಾ ಘಟಕದಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಕ್ರಾಂತಿ ಸೇನಾ ಜಿಲ್ಲಾಧ್ಯಕ್ಷ ಬಾಬು ಬಾಕಳೆ ಮಾತನಾಡಿ, ದರ್ಗಾ ಪಕ್ಕದಲ್ಲಿ ಮಸೀದಿ ಕಟ್ಟುತ್ತಿರುವುದು ಖಂಡನೀಯ. ಕಾರಣ ಈ ದರ್ಗಾದಲ್ಲಿ ಹಲವು ವರ್ಷಗಳಿಂದ ಓಣಿಯ ಹಿರಿಯರು ಹಾಗೂ ಮಹಿಳೆಯರು ಹಿಂದು-ಮುಸ್ಲಿಂ ಸೇರಿಕೊಂಡು ಭಾವ್ಯಕತೆಯಿಂದ ಪೂಜೆ-ಪುನಸ್ಕಾರ ಮಾಡಿಕೊಂಡು ಬಂದಿರುತ್ತಾರೆ. ಖಾನಸಾವಲಿ ದರ್ಗಾಕ್ಕೆ ಅದರದೇ ಆದಂತ ಹಿನ್ನೆಲೆ ಇದೆ, ಕೋಮು ಸೌಹಾರ್ದತೆಯಿಂದ ಎಲ್ಲರೂ ಸೇರಿಕೊಂಡು ಪೂಜೆ ಮಾಡುತ್ತಾ ಬಂದಿರುತ್ತಾರೆ. ಆದರೆ ಈಗ ಪಕ್ಕದಲ್ಲಿ ಮಸೀದಿ ಕಟ್ಟುವುದರಿಂದ ಸಾರ್ವಜನಿಕರಿಗೆ ಪೂಜೆ-ಪುನಸ್ಕಾರ ಮಾಡಲು ತೊಂದರೆ ಆಗುತ್ತದೆ ಹಾಗೂ ಕೋಮುಗಲಭೆ ಸೃಷ್ಟಿಗೆ ಕಾರಣವಾಗಬಹುದು. ಆದ ಕಾರಣ ಜಿಲ್ಲಾಧಿಕಾರಿಗಳು, ಸರ್ಕಾರ, ಪೊಲೀಸ್ ಇಲಾಖೆ, ನಗರಸಭೆ ತಕ್ಷಣವೇ ಈ ಮಸೀದಿ ಕಾಮಗಾರಿ ನಿಲ್ಲಿಸಬೇಕು, ಯಾವುದೇ ಕಾರಣಕ್ಕೂ ಮಸೀದಿ ಪ್ರಾರಂಭಿಸುವುದಕ್ಕೆ ಅವಕಾಶ ಕೊಡಬಾರದು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಮಸೀದಿ ಪ್ರಾರಂಭವಾದರೆ ಖಾನತೋಟ ಓಣಿಯ ಸಾರ್ವಜನಿಕ ಹಿಂದುಗಳೆಲ್ಲ ಸೇರಿಕೊಂಡು ಪಕ್ಕದಲ್ಲಿ ಮಂದಿರವನ್ನು ನಿರ್ಮಾಣ ಮಾಡಿ ಪೂಜೆ-ಪುನಸ್ಕಾರ, ಹೋಮ-ಹವನಗಳನ್ನು ಮಾಡುತ್ತೇವೆ, ದಿನನಿತ್ಯ ರಾಮ ನಾಮ ಜಪ ಪ್ರಾರಂಭ ಮಾಡುತ್ತೇವೆ. ಮುಂದೆ ಏನಾದರೂ ತೊಂದರೆ ಆದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.ಈ ವೇಳೆ ಪ್ರವೀಣ್ ಹಬೀಬ್, ಕಿರಣ್ ಕಲಾಲ್, ನವೀನ್ ಕೋಟೆಕಲ್, ಬುಡ್ಡ ಕಲಬುರ್ಗಿ, ಸುರೇಶ್ ಚಿತ್ರಗಿ, ನಾರಾಯಣ ನಿರಂಜನ್, ಜಗನ್ನಾಥಸಾ ರಾಣಿ ಚಂದವರಿ, ರೇಣುಕಾ ಕಬಾಡಿ ಹಾಗೂ ಖಾನತೋಟ ಓಣಿಯ ಹಿರಿಯರು, ಯುವಕರು, ಮಹಿಳೆಯರು ಇದ್ದರು.

Share this article