ಅಮೀನಗಡದಲ್ಲಿ ಕುಡಿಯುವ ನೀರಿಗಾಗಿ ಪರದಾಟ

KannadaprabhaNewsNetwork |  
Published : Nov 06, 2026, 01:30 AM IST
04ಕೆಪಿಕೆವಿಟಿ02:  | Kannada Prabha

ಸಾರಾಂಶ

ಸಮೀಪದ ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ ಕಳೆದ 16 ದಿನದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ನಿತ್ಯ ಕೆಲಸ ಬಿಟ್ಟು ನೀರಿಗಾಗಿ ಅಲೆಯುವಂತಾಗಿದೆ ಎಂದು ಆರೋಪಿಸಿ ಮಹಿಳೆಯರು ಆಕ್ರೋಶ ಹೊರಹಾಕಿದರು

ಕನ್ನಡಪ್ರಭ ವಾರ್ತೆ ಕವಿತಾಳ

ಸಮೀಪದ ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ ಕಳೆದ 16 ದಿನದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ನಿತ್ಯ ಕೆಲಸ ಬಿಟ್ಟು ನೀರಿಗಾಗಿ ಅಲೆಯುವಂತಾಗಿದೆ ಎಂದು ಆರೋಪಿಸಿ ಮಹಿಳೆಯರು ಆಕ್ರೋಶ ಹೊರಹಾಕಿದರು

ಮುಂಗಾರು ಮತ್ತು ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಮೂರು ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಕುಸಿದಿ ರುವ ಪರಿಣಾಮ ಕುಡಿಯಲು, ಬಳಕೆಗೆ ಹಾಗೂ ದನಕರುಗಳಿಗೆ ನೀರಿಲ್ಲದೆ ಪರದಾಡುವಂತಾಗಿದೆ ಎಂದು ಪಾರ್ವತಮ್ಮ, ಅನುಸೂಯ, ಅಮರಮ್ಮ, ಲಕ್ಷ್ಮಿ ದೇವಿ, ಕಾವೇರಿ, ಶಾಂತಮ್ಮ, ಲಕ್ಷ್ಮಿ, ಬಸಮ್ಮ, ಹುಲಿಗೆಮ್ಮ, ರತ್ನಮ್ಮ, ಅಮೃತಮ್ಮ ಆಕ್ರೋಶ ಹೊರಹಾಕಿದ್ದಾರೆ.

ನೀರಿನ ಪೈಪ್ ಹೊಡೆದು ಒಳಗಡೆ ಗಲೀಜು ಕುಂತಿರುವುದರಿಂದ ನೀರು ಸರಿಯಾಗಿ ಬರುತ್ತಿಲ್ಲವೆಂದು ಸ್ಥಳೀಯರು ಅಧಿಕಾರಿ ಗಳಿಗೆ ನೀರಿನ ಸಮಸ್ಯೆ ಕುರಿತು ಹೇಳಿದರೆ ನೋಡೋಣ, ವ್ಯವಸ್ಥೆ ಮಾಡೋಣ ಎಂದು ಬೇಕಾಬಿಟ್ಟಿ ಉತ್ತರ ನೀಡುತ್ತಿದ್ದಾರೆ. ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾದರೆ. ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಸದಾಶಿವಪ್ಪ, ಶಿವಪ್ಪ ಮೇಟಿ, ನೀಲಕಂಠ, ಬಸವರಾಜ, ಹನುಮಂತಪ್ಪ ಶಿವನಗೌಡ ದಳಪತಿ, ಹುಚ್ಚರಡ್ಡಿ ಹರ್ವಾಪುರ ಒತ್ತಾಯಿಸಿದರು.

ಒಂದು ಪಂಚಾಯಿತಿ ಕೊಳವೆಬಾವಿ ಮತ್ತು ಮೂರು ಖಾಸಗಿ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ ಲಭ್ಯ ವಿರುವಷ್ಟು ನೀರನ್ನು ಬಿಡಲಾಗುತ್ತಿದೆ ನಲ್ಲಿಗೆ ಮೋಟಾರ್‌ಗಳನ್ನು ಹಚ್ಚುವುದರಿಂದ ಬೇರೆಯವರಿಗೆ ನೀರು ತಲುಪುತ್ತಿಲ್ಲ. ನೀರಿನ ಸಮಸ್ಯೆ ಕುರಿತು ಮತ್ತು ಇರಕಲ್ ಕೆರೆ ನೀರು ಪೂರೈಸುವ ಕುರಿತು ಶಾಸಕರ ಗಮನಕ್ಕೆ ತರಲಾಗಿದೆ ಎಂದು ಗ್ರಾಮ ಪಂಚಾ ಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌: ನ್ಯಾಯಾಲಯಕ್ಕೆ ಹಲವು ದಾಖಲೆ ಸಲ್ಲಿಸಿದ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ
ಮದುವೆ ಆಗುವಂತೆ ಉದ್ಯಮಿಗೆ ಹನಿಟ್ರ್ಯಾಪ್: ₹2 ಕೋಟಿ ಬೇಡಿಕೆ