ಮಹಾರಾಜ್ ಹೇಳಿಕೆ । ಬೆಂಗಳೂರಿನಿಂದ ಹಾಸನಕ್ಕೆ ಬಂದ ಶ್ರೀರಾಮ ಪಾಗ್ ಯಾತ್ರೆಗೆ ಸ್ವಾಗತಕನ್ನಡಪ್ರಭ ವಾರ್ತೆ ಹಾಸನ
ನಗರದ ಪಾರ್ಕ್ ರಸ್ತೆ ಬಳಿ ಇರುವ ಶ್ರೀಸೀತಾರಾಮಾಂಜನೇಯ ದೇವಸ್ಥಾನದ ಅವರಣದಲ್ಲಿ ೧೦ ರಾಜ್ಯಗಳು ಮತ್ತು ಎರಡು ದೇಶಗಳನ್ನು ಭೇಟಿ ಮಾಡಿ ಶ್ರೀಲಂಕಾಕ್ಕೆ ತೆರಳಲಿರುವ ಶ್ರೀರಾಮ ಪಾಗ್ ಯಾತ್ರೆ ಬೆಂಗಳೂರಿನ ಮೂಲಕ ಹಾಸನಕ್ಕೆ ಬಂದಾಗ ಅದ್ಧೂರಿ ಸ್ವಾಗತ ಕೋರಿ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಜ್ಞಾನವಾಪಿಯಲ್ಲಿ ಜಯಗಳಿಸಿರುವುದು ನಮ್ಮ ಜೀವಿತಾವಧಿಯಲ್ಲಿ ತುಂಬ ಖುಷಿ ತಂದಿದೆ. ಜ್ಞಾನವಾಪಿ ಮಸೀದಿಯಲ್ಲಿ ಈಶ್ವರನಿಗಾಗಿ ಮುಂದಿನ ಹೋರಾಟ ಮುಂದುವರೆಯುವುದು ಎಂದು ಹೇಳಿದರು.
ಆ ಸ್ಥಳದಲ್ಲಿ ಈಶ್ವರ ಲಿಂಗದ ಮೇಲೆ ನೀರಿನ ಫೌಂಟೇನ್ ಮಾಡಿ ನೀರು ಹಾಕಿ ಮುಚ್ಚಿದ್ದಾರೆ. ಅದೇ ಸ್ಥಳಕ್ಕೆ ಉಗಿಯುತ್ತಾರೆ. ಮುಂದೆ ಅಲ್ಲಿನ ಶಿವಲಿಂಗಕ್ಕಾಗಿ ಹೋರಾಟ ಮಾಡುತ್ತೇವೆ. ಜ್ಞಾನವಾಪಿಯಲ್ಲೂ ಅಯೋಧ್ಯೆಯಂತೆ ಶಿವಲಿಂಗಕ್ಕಾಗಿ ಹೋರಾಟ ಮಾಡುತ್ತೇವೆ. ಅಯೋಧ್ಯೆ ಹೋರಾಟವೂ ಇದೇ ರೀತಿ ಪ್ರಾರಂಭವಾಗಿ ಜಯಗಳಿಸಿದೆ ಎಂದು ಹೇಳಿದರು.ರಾಮಜನ್ಮಭೂಮಿ ಅಯೋಧ್ಯೆಯಿಂದ ಶ್ರೀಲಂಕಾವರೆಗೆ, ರಾಮ್ ಬನ್ ಗಮನ್ ಯಾತ್ರೆ ಪ್ರಾರಂಭವಾಗಿ ಅಯೋಧ್ಯೆ ಮಣ್ಣಿನೊಂದಿಗೆ ೧೫೦೦೦ಕಿ.ಮೀ ಯಾತ್ರೆ ಹೊರಟಿರುವ ಮಹಾರಾಜ್ ಲಿಂಗಿಯಾ ಗುರುಗಳು. ಈ ವೇಳೆ ಹಾಸನಕ್ಕೆ ಭೇಟಿ ನೀಡಿರುವ ಲಿಂಗಿಯಾ. ಅಯೋಧ್ಯೆಯಿಂದ ಲಂಕೆವರೆಗೆ ಶ್ರೀ ರಾಮ ಕ್ರಮಿಸಿದ ಒಟ್ಟು ೨೦೦ ಸ್ಥಳಗಳ ಭೇಟಿ ನೀಡಿದ್ದು, ಈ ವೇಳೆ ಜ್ಞಾನವಾಪಿ ವಿಚಾರದಲ್ಲಿ ಲಿಂಗಿಯಾ ಗುರೂಜಿ ಮಾತನಾಡಿದರು.
ಆಧುನಿಕ ಶಿಕ್ಷಣದೊಂದಿಗೆ ಸಾಂಪ್ರದಾಯಿಕ ಮೌಲ್ಯಗಳಲ್ಲಿ ಗುರುಕುಲವನ್ನು ನಿರ್ಮಿಸಲು ಮತ್ತು ಸ್ಥಾಪಿಸಲು ವಾರಾಣಸಿಯ ವಿಂಧ್ಯವಾಸಿನಿ ಧಾಮದಲ್ಲಿ ‘ಶ್ರೀರಾಮ ವೈದಿಕ ಸಪ್ತಋಷಿ ಗುರುಕುಲ’ ಹೆಸರಿನಲ್ಲಿ ಮುಂಬರುವ ಶೈಕ್ಷಣಿಕ ಯೋಜನೆಗೆ ಈ ಯಾತ್ರೆ ಸಮರ್ಪಿಸುತ್ತದೆ. ಗುರುಕುಲ ಪದ್ಧತಿಯು ಭಾರತದ ಪ್ರಾಚೀನ ಶಿಕ್ಷಣ ವ್ಯವಸ್ಥೆಗೆ ಅಮೂಲ್ಯವಾದ ಕೊಡುಗೆಯನ್ನು ಹೊಂದಿದೆ. ಶ್ರೀರಾಮ ಪಾಗ್ ಯಾತ್ರೆಯು ಇಂದು ಅಯೋಧ್ಯೆ, ಶೃಂಗವೇರಪುರ, ಪ್ರಯಾಗರಾಜ್, ಚಿತ್ರಕೂಟ, ಸತ್ನಾ, ನಾಗ್ಪುರ, ನಾಸಿಕ್, ಲೇಪಾಕ್ಷಿ ಮತ್ತು ಬೆಂಗಳೂರು ಮೂಲಕ ಹಾಸನ ತಲುಪಿದೆ ಎಂದರು. ಯಾತ್ರೆಯಲ್ಲಿ ನೂರಾರು ರಾಮಭಕ್ತರು ಉಪಸ್ಥಿತರಿದ್ದರು. ಶ್ರೀಲಂಕಾಕ್ಕೆ ತೆರಳಲಿರುವ ಶ್ರೀರಾಮ ಪಾಗ್ ಯಾತ್ರೆ ಬೆಂಗಳೂರಿನ ಮೂಲಕ ಹಾಸನಕ್ಕೆ ಬಂದಿರುವುದು.