ಗ್ರಾಮೀಣಾಭಿವೃದ್ಧಿ ಸಚಿವರ ಭರವಸೆ ಮೇರೆಗೆ ಧರಣಿ ತಾತ್ಕಾಲಿಕ ಹಿಂಪಡೆತಕನ್ನಡಪ್ರಭ ವಾರ್ತೆ ರಾಮನಗರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರು ನೀಡಿದ ಆಶ್ವಾಸನೆ ಮೇರೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಫೆ.22ರಂದು ಹಮ್ಮಿಕೊಂಡಿದ್ದ ಬೃಹತ್ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದು, ಮೂರರಿಂದ ನಾಲ್ಕು ತಿಂಗಳೊಳಗೆ ಬೇಡಿಕೆಗಳು ಈಡೇರದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಪಂಚಾಯತ್ ರಾಜ್ ಆಯುಕ್ತಾಲಯದಿಂದ ಗ್ರಾಪಂ ಸಿಬ್ಬಂದಿ ವೇತನವನ್ನು ಪಂಚತಂತ್ರ 2.0 ತಂತ್ರಾಂಶದಲ್ಲಿ ಇ - ಹಾಜರಾತಿ ವಿವರಗಳನ್ನು ದಾಖಲಿಸಿ ಗ್ರಾಪಂ ಸಿಬ್ಬಂದಿಗಳ ವೇತನ ಪಾವತಿಸುವಂತೆ ಕಡ್ಡಾಯಗೊಳಿಸಲಾಗಿದೆ. ರಾಜ್ಯದ ಬಹುತೇಕ ಗ್ರಾಪಂ ನೌಕರರಿಗೆ 2024ರ ಜನವರಿ ತಿಂಗಳ ವೇತನದಲ್ಲಿ 1 ರಿಂದ 20 ದಿನಗಳ ವೇತನ ಕಡಿತವಾಗಿದೆ.ಬಹುತೇಕ ಗ್ರಾಪಂಗಳಲ್ಲಿ ಸರ್ವರ್ ತೊಂದೆರೆಯಿದೆ. ವಿದ್ಯುತ್ ಇಲ್ಲದಿರುವುದು, ಕಂಪ್ಯೂಟರ್ ಕೆಟ್ಟಿರುವುದು, ಚರ್ಮ ರೋಗವಿರುವ ನೌಕರರ ಬಯೋಮೆಟ್ರಿಕ್ ತಂತ್ರಾಂಶದಲ್ಲಿ ತೆಗೆದುಕೊಳ್ಳದಿರುವುದು, ಬಯೋಮೆಟ್ರಿಕ್ ನೀಡಲು ಮೊಬೈಲ್ ಅವಕಾಶ ಕಲ್ಪಿಸದಿರುವುದು, ರಜೆ ದಿನಗಳನ್ನು ಪರಿಗಣಿಸದಿರುವುದು ಮತ್ತು ವಾಟರ್ ಮ್ಯಾನ್ ಗಳು ಭಾನುವಾರ ಮತ್ತು ರಜಾ ದಿನಗಳಲ್ಲೂ ಕೆಲಸ ನಿರ್ವಹಿಸುತ್ತಾರೆ. ಹೀಗೆ ಅನೇಕ ತೊಂದರೆಗಳಿಂದ ಜನವರಿ ತಿಂಗಳ ವೇತನ ಕೆಲಸ ಮಾಡಿದರೂ ಪಾವತಿಯಾಗಿಲ್ಲ. ಆದ್ದರಿಂದ ಬಯೋಮೆಟ್ರಿಕ್ ಇ - ಹಾಜರಾತಿಯ ಲೋಪದೋಷಗಳನ್ನು ಸರಿಪಡಿಸುವವರೆಗೆ ಸಿಬ್ಬಂದಿಯ ಪೂರ್ಣ ವೇತನ ನೀಡಬೇಕೆಂದು ಒತ್ತಾಯಿಸಿದರು.
ಈಗಾಗಲೇ ಸಂಘದ ಜೊತೆ ಎರಡು ಬಾರಿ ಸಭೆ ನಡೆದಿದ್ದು, ಆ ವರದಿಯನ್ನು ಅಂತಿಮಗೊಳಿಸಿ ವೇತನ ಹೆಚ್ಚಳ ಮಾಡಬೇಕೆಂದು ಹಾಗೂ ಕನಿಷ್ಠ ವೇತನದ ಬಗ್ಗೆ ಚರ್ಚೆ ನಡೆದು ಮೂಲ ವೇತನವನ್ನು ಹೆಚ್ಚಳ ಮಾಡುವ ಬಗ್ಗೆ ಕಾರ್ಮಿಕ ಇಲಾಖೆಗೆ ಕಡತ ಕಳುಹಿಸಲು ಸಹ ಚರ್ಚೆಯಾಗಿದೆ. ಈ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್, ಮುಖಂಡರಾದ ಜಯಲಿಂಗು, ಪ್ರಸಾದ್, ಸುರೇಶ್, ರಾಜಶೇಖರ್, ನರಸಿಂಹಮೂರ್ತಿ, ನಾಗರಾಜು, ಶೇಖರ್ ಇತರರಿದ್ದರು.
ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.