ವಾಲ್ಮೀಕಿ ಸರ್ಕಲ್‌ ನಿರ್ಮಾಣವಾಗದಿದ್ದರೆ ಹೋರಾಟ: ಡಾ.ತುಳಸಿರಾಮ

KannadaprabhaNewsNetwork |  
Published : Oct 24, 2024, 12:55 AM IST
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಉನ್ನತ ಮಟ್ಟಕ್ಕೆ ಬೆಳೆಯಲಿ ಎನ್ನುವ ಉದ್ದೇಶದಿಂದ ಮೀಸಲಾತಿ ನೀಡಿ ದಾರಿದೀಪ

ಗದಗ: ಜಿಲ್ಲೆಯಲ್ಲಿ ಬಹುತೇಕ ವಾಲ್ಮೀಕಿ ಸಮುದಾಯದ ಜನರು ಇದ್ದಾರೆ. ನಗರದ್ಯಂತ ಹಲವು ಮಹನೀಯರ ವೃತ್ತಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇದು ಸ್ವಾಗತಾರ್ಹ. ಆದರೆ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣ ಆಗದಿರುವುದು ಬೇಸರದ ಸಂಗತಿಯಾಗಿದೆ. 2025ರ ವಾಲ್ಮೀಕಿ ಜಯಂತಿಯ ಒಳಗಾಗಿ ವಾಲ್ಮೀಕಿ ಸರ್ಕಲ್ ನಿರ್ಮಾಣವಾಗದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಡಾ. ತುಳಸಿರಾಮ ಹೇಳಿದರು.

ಅವರು ನಗರದಲ್ಲಿ ಇತ್ತೀಚೆಗೆ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡ ಆದಿಕವಿ ಶ್ರೀಮಹರ್ಷಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಗತ್ತಿಗೆ ಪ್ರಭು ಶ್ರೀರಾಮ ಚಂದ್ರನನ್ನು ಪರಿಚಯಿಸಿದ ಕೀರ್ತಿ ಆದಿಕವಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಉನ್ನತ ಮಟ್ಟಕ್ಕೆ ಬೆಳೆಯಲಿ ಎನ್ನುವ ಉದ್ದೇಶದಿಂದ ಮೀಸಲಾತಿ ನೀಡಿ ದಾರಿದೀಪ ಆಗಿದ್ದಾರೆ. ಪ್ರತಿಯೊಬ್ಬರು ತಮ್ಮ ಜೀವನದ ಕೊನೆಯ ಅವದಿವರಿಗೂ ಅಂಬೇಡ್ಕರ ಅವರನ್ನು ಮರೆಯಬಾರದು ಎಂದರು.

ಆರಂಭದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಲಾಯಿತು. ನಂತರ ರಾಜೇಶ್ವರಿ ಕಲಾ ಕುಟೀರ ತಂಡದ ಮೇಘನಾ ಆರ್. ವಾಲ್ಮೀಕಿ ಅವರಿಂದ ಭರತನಾಟ್ಯ ಪ್ರದರ್ಶನ ಜರುಗಿತು.

ಈ ವೇಳೆ ಪ್ರತಿ ವರ್ಷದಂತೆ ಈ ವರ್ಷವೂ ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರದ ಅದ್ಧೂರಿ ಮೆರವಣಿಯು ವಾಲ್ಮೀಕಿ ಸರ್ಕಲ್‌ ನಿಂದ ಬನ್ನಿಕಟ್ಟ ಪಂಚರಹೊಂಡ, ಬಸವೇಶ್ವರ ಸರ್ಕಲ್, ಟಾಂಗಾಕೂಟ ಮಹೇಂದ್ರಕರ್ ಸರ್ಕಲ್ ಹಾಗೂ ಡಿಸಿ ಮಿಲ್ ಮಾರ್ಗವಾಗಿ ಗಂಗಾಪುರ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಸಂಪನ್ನಗೊಂಡಿತ್ತು.

ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬೆಳದಡಿ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಅನಿಲಕುಮಾರ ಸಿದ್ದಮ್ಮನಹಳ್ಳಿ, ವಿಪ ಸದಸ್ಯ ಎಸ್.ವಿ. ಸಂಕನೂರ. ಮಹೇಶ ಪೋತದಾರ, ದೇವೇಂದ್ರಪ್ಪ ತಳವಾರ, ಶಕುಂತಲಾ ನಾಯಕ, ವೀರೇಶ ವಾಲ್ಮೀಕಿ, ನಾಗರಾಜ ತಳವಾರ, ಲಕ್ಷ್ಮಿಅನಿಲಕುಮಾರ ಸಿದ್ದಮ್ಮನಹಳ್ಳಿ, ಎಸ್.ಎನ್. ಬಳ್ಳಾರಿ, ವಸಂತಕುಮಾರ ಸಿದ್ದಮ್ಮನಹಳ್ಳಿ, ಗೊವೀಂದರಾಜ ಪನ್ನೂರ, ಅರುಣ ಬೆಳದಡಿ, ಶಿವಾನಂದ ತಳವಾರ, ವಸಂತ ವಾಲ್ಮೀಕಿ, ಅನಿಲ ಪೂಜಾರ, ಶ್ರೀಕಾಂತ ಪೂಜಾರ, ವಿಜಯ ಕುರಗೋಡ, ದತ್ತು ಬೆಳದಡಿ, ಕಿರಣ ನಾಯ್ಕರ, ಮಾರುತಿ ಕಾತರಕಿ, ಈಶ್ವರ ರೌಡೂರು, ರಮೇಶ ಹೊಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಬಾಹುಬಲಿ ಜೈನರ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ