ರಾಮನಗರ: ನಗರದ ಜಾನಪದ ಲೋಕದಲ್ಲಿ ಫೆ.7 ಮತ್ತು 8ರಂದು ವಿದ್ಯಾರ್ಥಿ ಜಾನಪದ ಲೋಕೋತ್ಸವ-2026 ಆಯೋಜಿಸಲಾಗಿದೆ.
ಫೆ.7ರಂದು ಬೆಳಗ್ಗೆ 10.30ಕ್ಕೆ ವಿದ್ಯಾರ್ಥಿ ಜಾನಪದ ಲೋಕೋತ್ಸವಕ್ಕೆ ಚಲನಚಿತ್ರ ಮತ್ತು ರಂಗಭೂಮಿ ನಿರ್ದೇಶಕ ಡಾ.ಟಿ.ಎಸ್.ನಾಗಾಭರಣ ಚಾಲನೆ ನೀಡಲಿದ್ದು, ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಮನಗರದ ಶ್ರೀ ಆದಿಚುಂಚನಗಿರಿ ಶಾಖಾ ಮಠಾಧೀಶರಾದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಶಾಸಕ ಕೆ.ರಾಜು ಕರಕುಶಲ ಮೇಳ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ಮೈಸೂರು, ಚಿಕ್ಕಮಗಳೂರು, ತುಮಕೂರು, ಉಡುಪಿ, ಮಂಡ್ಯ, ಬೆಳಗಾವಿ, ಹಾಸನ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ನಗಾರಿ ಮೇಳ, ವೀರಗಾಸೆ, ಸೋಮನ ಕುಣಿತ, ಕಂಗಿಲು ಕುಣಿತ, ತಮಟೆ ವಾದನ, ಕೋಲಾಟ, ಕರಪಾಲ ಮೇಳ, ಗಾರುಡಿ ಗೊಂಬೆ ವಿವಿಧ ಕಲಾ ಪ್ರದರ್ಶನ ನೀಡಲಿದ್ದಾರೆ. ಆನಂತರ ಬೈರನಹಳ್ಳಿ ಶಿವರಾಮ್ ನಿರ್ದೇಶನದಲ್ಲಿ ಜಾನಪದ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಕೆರೆಗೆ ಹಾರ ಜನಪದ ರೂಪಕ ಪ್ರದರ್ಶಿಸುವರು ಎಂದರು.ಪ್ರಶಸ್ತಿ ಪ್ರದಾನ:
ಮಧ್ಯಾಹ್ನ 1.30ಕ್ಕೆ ಜನಪದ ಗೀತ ಗಾಯನೋತ್ಸವ, ಸಂಜೆ 4 ಗಂಟೆಗೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಸೂಫೀಯಾ ಢಮಾಮಿ ನೃತ್ಯ ತಂಡ ಸಿದ್ಧಿಯರ ಡಮಾಮಿ ನೃತ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಡಾ.ರತ್ನಮ್ಮ ಮತ್ತು ಸಂಗಡಿಗರು ಸೋಲಿಗರ ನೃತ್ಯ ಪ್ರದರ್ಶಿಸುವರು. ನಂತರ ಆಧುನಿಕ ಗಾಯಕರ ಜನಪದ ಗೀತ ಸಂಭ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ಎರಡೂ ದಿನಗಳ ಕಾಲವೂ ರಾಜ್ಯದ ಕಲಾ ತಂಡಗಳಿಂದ ವೈವಿಧ್ಯಮಯ ಕಲಾ ಪ್ರದರ್ಶನ, ಜನಪದ ಗೀತ ಗಾಯನ, ಕರಕುಶಲ ಪ್ರಾತ್ಯಕ್ಷಿಕೆ, ದೇಸಿ ಆಹಾರ ಮೇಳ, ಕುಂಬಾರಿಕೆ, ಬುಟ್ಟಿ ಎಣೆಯುವಿಕೆ, ಗಾರುಡಿ ಗೊಂಬೆ, ಪೆಟ್ಟಿಗೆ ಮಾರಮ್ಮ, ದಾಸಪ್ಪ ಜೋಗಪ್ಪ, ಕೊಂಬು ಕಹಳೆ, ಹುಲಿವೇಷ, ಬಳೆ ಮಲ್ಲಾರ ಪ್ರದರ್ಶನ ಇರಲಿದೆ ಎಂದು ಬೋರಲಿಂಗಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಇದ್ದರು.
ಬಾಕ್ಸ್............ಪ್ರಶಸ್ತಿ ಪುರಸ್ಕೃತರು:
ಜಾನಪದ ಲೋಕ ಪ್ರಶಸ್ತಿಗೆ ಚಾಮರಾಜನಗರ ಜಿಲ್ಲೆ ಜೋಗುಳಪದ ಹಾಡುಗಾರ್ತಿ ಚಿನ್ನಮ್ಮ, ಸೋಲಿಗ ಕಲಾವಿದೆ ಡಾ.ಎಸ್.ರತ್ನಮ್ಮ, ಮಂಡ್ಯ ಜಿಲ್ಲೆಯ ಪೂಜಾ ಮತ್ತು ಮರಗಾಲು ಕುಣಿತ ಕಲಾವಿದ ಕೆ.ಪಿ.ದೇವರಾಜು, ರಾಯಚೂರು ಜಿಲ್ಲೆ ತತ್ವಪದ ಕಲಾವಿದ ನಾರಾಯಣಪ್ಪ ಮಾಡಶಿರಾವಾರ, ಬೆಂಗಳೂರಿನ ತಂಬೂರಿ ಕಲಾವಿದ ತಂಬೂರಿ ಸಿದ್ದರಾಜು, ಗೊರವ ಕುಣಿತ ಕಲಾವಿದ ಎಂ.ಬಸವರಾಜು, ಧಾರವಾಡ ಜಿಲ್ಲೆಯ ಸಾಹಸ ಕಲಾವಿದ ಮುತ್ತಪ್ಪ ಬಸವಂತಪ್ಪ ದಾತನಾಳ, ಕಾಸರಗೋಡಿನ ಯಕ್ಷಗಾನ ವೇಷಧಾರಿ ಕಲಾವಿದ ಚನಿಯಪ್ಪನಾಯ್ಕ, ಚಿಕ್ಕಮಗಳೂರು ಜಿಲ್ಲೆಯ ಸೋಬಾನೆ ಹಾಡುಗಾರ್ತಿ ಟಿ.ಶಾರದಮ್ಮ, ಬೀದರ್ ಜಿಲ್ಲೆಯ ಲಂಬಾಣಿ ನೃತ್ಯಗಾರ್ತಿ ಭಾರತಿ ಬಾಯಿ, ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಯಕ್ಷಗಾನ ಕಲಾವಿದ ಬಿ.ಎಸ್.ಗೌಡ (ಬೀರಪ್ಪ ಶಿವುಗೌಡ), ಬಾಗಲಕೋಟೆ ಜಿಲ್ಲೆಯ ಕರಡಿ ಮಜಲು ಕಲಾವಿದ ಗಂಗಪ್ಪ ಮಹಾಲಿಂಗಪ್ಪ ಕರಡಿ ಆಯ್ಕೆಯಾಗಿದ್ದಾರೆ.
4ಕೆಆರ್ ಎಂಎನ್ 5,6,7,8,9.ಜೆಪಿಜಿ5.ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
7.ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ ಪುರಸ್ಕೃತ ಡಾ.ಕೆ.ಚಿನ್ನಪ್ಪಗೌಡ
8.ನಾಡೋಜ ಡಾ. ಜಿ. ನಾರಾಯಣ - ಜಾನಪದ ಲೋಕ ಪ್ರಶಸ್ತಿ ಪುರಸ್ಕೃತ ಚಿಕ್ಕಣ್ಣ9.ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ ಪುರಸ್ಕೃತ ಡಾ.ಸಿರಿಗಂಧ ವಿ.ಶ್ರೀನಿವಾಸ ಮೂರ್ತಿ