ಕನ್ನಡಪ್ರಭ ವಾರ್ತೆ ಮೈಸೂರುನಗರದ ಕಾವೇರಿ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ ವಿಶ್ವ ಕ್ಯಾನ್ಸರ್ ದಿನ ಜಾಗೃತಿ ಕಾರ್ಯಕ್ರಮವು ಕಾವೇರಿ ಆರೋಗ್ಯ ವಿಜ್ಞಾನ ಸಂಸ್ಥೆಯ ಮಾಸ್ಟರ್ ಆಫ್ ಹಾಸ್ಪಪೆಟಾಲಿಟಿ ವಿಭಾಗದಲ್ಲಿ ಬುಧವಾರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕ್ಯಾನ್ಸರ್‌ತಡೆಗಟ್ಟುವಿಕೆ ಹಾಗೂ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್‌ಸರ್ಜಿಕಲ್‌ಆಂಕಾಲಜಿಸ್ಟ್‌ಡಾ. ಕಿರಣ್‌ಶಂಕರ್‌ಪಾಲ್ಗೊಂಡು ಮಾತನಾಡಿ, ಕ್ಯಾನ್ಸರ್‌ತಡೆಗಟ್ಟುವಿಕೆ, ಜೀವನ ಶೈಲಿ ಬದಲಾವಣೆ, ಮುಂಚಿತ ಪತ್ತೆ ಹಾಗೂ ಯುವಜನತೆ ಮತ್ತು ಆರೋಗ್ಯ ವೃತ್ತಿಪರರ ಜವಾಬ್ದಾರಿ ಕುರಿತು ಮಾಹಿತಿ ನೀಡಿದರು.ಸಂಸ್ಥೆಯ ಪ್ರಾಂಶುಪಾಲ ಡಾ.ಆರ್.ಎಂ. ಅರವಿಂದ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಆರೋಗ್ಯ ಜಾಗೃತಿಯಲ್ಲಿ ವಹಿಸಬೇಕಾದ ಪಾತ್ರವನ್ನು ವಿವರಿಸಿದರು.ಕಾರ್ಯಕ್ರಮಕ್ಕೆ ಕಾವೇರಿ ಸಂಸ್ಥೆಗಳ ಸಮೂಹದ ಡೀನ್‌ಪ್ರೊ. ಶ್ರೀಕಂಠಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಉಪ ಪ್ರಾಂಶುಪಾಲ ಪ್ರೊ. ಶಿಮ್ಯಾ ವಾಸು ಹಾಗೂ ಪ್ರೊ. ಸಂಪದಾ ಜೈನ್, ಸಾಂದ್ರ ಸಾಬು, ದಿವ್ಯಶ್ರೀ ಹಾಗೂ ಇತರ ಬೋಧಕರು ಇದ್ದರು.ವಿದ್ಯಾರ್ಥಿಗಳಿಂದ ಕ್ಯಾನ್ಸರ್‌ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನಗೊಂಡಿತು. ಕ್ಯಾನ್ಸರ್‌ತಡೆಗಟ್ಟುವಿಕೆ ಮತ್ತು ಮುಂಚಿತ ಚಿಕಿತ್ಸೆಯ ಮಹತ್ವವನ್ನು ಅದು ಪರಿಣಾಮಕಾರಿಯಾಗಿ ಸಾರಿತು. ಕಾರ್ಯಕ್ರಮದಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ್ದು, ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.