ಗದಗ: ವಿದ್ಯಾರ್ಥಿನಿಯರು ಸಮಾಜದಲ್ಲಿ ಧೈರ್ಯದಿಂದ ಬದುಕಬೇಕು. ಪೊಲೀಸ್ ಠಾಣೆಗೆ ಬರಲು ಯಾವುದೇ ಭಯ ಪಡಬಾರದು. ಸಮಾಜ ಹಾಳು ಮಾಡುವಂತಹ ಏನೇ ಘಟನೆ ನಡೆದರೆ ಕೂಡಲೇ 112ಗೆ ಕರೆ ಮಾಡಬೇಕು. ಇಲ್ಲದಿದ್ದರೆ ಹತ್ತಿರದಲ್ಲಿಸುವ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಬೇಕು ಎಂದು ಪಿಎಸ್‌ಐ ಆರ್.ಆರ್. ಮುಂಡವಾಡಗಿ ಹೇಳಿದರು.
ವ್ಯಾಟ್ಸ್ ಆ್ಯಪ್‌ನಲ್ಲಿ ಸ್ಟೆಟಸ್ ಇಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ದೂರದ ಊರಿಗೆ ಸಂಚರಿಸುವಾಗ ಸ್ಟೆಟಸ್‌ನಲ್ಲಿ ಮಾಹಿತಿಯನ್ನು ಹಾಕಬಾರದು. ಸ್ಟೆಟಸ್ ಹಾಕುವುದರಿಂದ ಕಳ್ಳತನ ಮಾಡಲು ಅನುಕೂಲ ಆಗುತ್ತೆ. ಹಾಗೂ ವ್ಯಾಟ್ಸ್ ಆ್ಯಪ್ ಡಿಪಿಗೆ ಪೋಟೊ ಹಾಕಬಾರದು. ಅದೇ ಪೋಟೊ ಬಳಸಿಕೊಂಡು ಎಡಿಟ್ ಮಾಡಿ ಬ್ಲ್ಯಾಕ್ ಮೇಲ್ ಮಾಡುವಂತಹ ಸಾಧ್ಯತೆ ಇರುತ್ತದೆ ಎಂದರು.
ನಿಮ್ಮ ಮೊಬೈಲ್‌ಗೆ ಅನುಮಾನಾಸ್ಪದ ಕರೆಗಳು ಬರಬಹುದು. ಬ್ಯಾಂಕ್ ಸಿಬ್ಬಂದಿ ಅಂತ ಕರೆ ಮಾಡಬಹುದು. ಅಂತಹ ಕರೆಗಳನ್ನು ಸ್ವೀಕರಿಸಬೇಡಿ. ಬ್ಯಾಂಕ್‌ನಿಂದ ಹಣ ಪಡೆದು ಮರಳುವಾಗ ಕಳ್ಳರ ಬಗ್ಗೆ ಗಮನವಿರಬೇಕು. ಕೆಲವು ವಯಸ್ಸಾದವರಿಗೆ ಹಾಗೂ ಅನಕ್ಷರಸ್ಥರಿಗೆ ಬ್ಯಾಂಕ್‌ನಲ್ಲಿ ವ್ಯವಹರಿಸುವ ಜ್ಞಾನ ಇರುವುದಿಲ್ಲ. ಅಂತಹ ಸಮಯದಲ್ಲಿ ಅವರ ಸಹಾಯಕ್ಕೆ ನೀವು ಧಾವಿಸಬೇಕು ಎಂದು ತಿಳಿಸಿದರು.ಈ ವೇಳೆ ವಿದ್ಯಾರ್ಥಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.