ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ಹೊರಪೇಟೆಯಲ್ಲಿರುವ ವಿರಕ್ತ ಮಠದ ಆವರಣದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶ್ರೀಗಳು ಹಲವಾರು ವರ್ಷಗಳ ಕನಸು ಈಗ ನನಸಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರ ವಿಶೇಷ ಅನುದಾನದಲ್ಲಿ ಈ ಭವ್ಯ ಕಾರ್ಯ ನಡೆಯಲಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಈ ಕಟ್ಟಡ ನಿರ್ಮಾಣ ಕಾರ್ಯ ಆಗಲಿದೆ. ಸುಮಾರು 103 ಅಡಿ ಉದ್ದ, 95 ಅಡಿ ಅಗಲದಲ್ಲಿ ಕಟ್ಟಡ ನಿರ್ಮಾಣ ಆಗಲಿದೆ. 25 ಸುಸಜ್ಜಿತವಾದ ಕೊಠಡಿಗಳು, ಬಹಳ ದೊಡ್ಡದಾದ ಊಟ ಮತ್ತು ಪ್ರಾರ್ಥನಾ ಸಭಾಂಗಣ ನಿರ್ಮಾಣಗೊಳ್ಳಲಿದೆ. ಈ ಕಟ್ಟಡ ಆದಷ್ಟು ಬೇಗನೇ ನಿರ್ಮಾಣಗೊಳ್ಳಲಿದೆ. ಕಟ್ಟಡವನ್ನು ಖಾಸಗಿ ಸಂಸ್ಥೆ ಮಾಲೀಕರಾದ ಜ್ಞಾನ ಸುಂದರ್ ರವರು ವಹಿಸಿಕೊಂಡಿದ್ದಾರೆಂದು ಶ್ರೀಗಳು ತಿಳಿಸಿದರು. ಈ ವೇಳೆ ಮಠದ ಕಿರಿಯ ಸ್ವಾಮೀಜಿ ಅಭಿನವ ಕಾಡಸಿದ್ದೇಶ್ವರರು, ಜಿ, ಸಂಸ್ಥೆಯ ಕಾರ್ಯದರ್ಶಿ ಆಡಿಟರ್ ಗುರು ಚನ್ನಬಸಪ್ಪ, ವಿರಕ್ತ ಮಠದ ವ್ಯವಸ್ಥಾಪಕ ನಟೇಶ್, ಇಂಡಿಯನ್ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ, ಜ್ಞಾನ ಸುಂದರ್, ಕೈಲಾಶ್, ಮಲ್ಲಿಕಾರ್ಜುನ್, ಎಸ್. ಎಂ.ಕುಮಾರಸ್ವಾಮಿ, ಪಿ ಡಬ್ಲ್ಯು ಡಿ ಇಲಾಖಾ ಇಎಎ ಕಣ್ಮನಿ, ದೀಪು ಕಾನ್ವೆಂಟ್ ನ ಉತ್ತರ ಕರ್ನಾಟಕದ ವಿದ್ಯಾರ್ಥಿ ವೃಂದ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದರು.