ರಾಷ್ಟ್ರಮಟ್ಟದ ಸ್ಕೇಟಿಂಗ್‌ನಲ್ಲಿ ವಿದ್ಯಾರ್ಥಿಗಳ ಸಾಧನೆ

KannadaprabhaNewsNetwork |  
Published : Jun 23, 2026, 03:15 AM IST
ಸ್ಕೇಟಿಂಗ್‌ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ರೊಲರ್ಸ್‌ ಸ್ಕೇಟಿಂಗ್ ಸ್ಪೋರ್ಟ್ಸ್‌ ಫೆಡರೇಷನ್ ಆಫ್ ಇಂಡಿಯಾದಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ಸ್ಕೇಟಿಂಗ್ ಮೈದಾನದಲ್ಲಿ ನಡೆದ 8ನೇ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಮುದ್ದೇಬಿಹಾಳ ತಾಲೂಕಿನ ಏಕಲವ್ಯ ರೊಲರ್ಸ್ ಸ್ಕೇಟಿಂಗ್ ಅಕಾಡೆಮಿಯ ಕ್ರೀಡಾಪಟುಗಳು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ರೊಲರ್ಸ್‌ ಸ್ಕೇಟಿಂಗ್ ಸ್ಪೋರ್ಟ್ಸ್‌ ಫೆಡರೇಷನ್ ಆಫ್ ಇಂಡಿಯಾದಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ಸ್ಕೇಟಿಂಗ್ ಮೈದಾನದಲ್ಲಿ ನಡೆದ 8ನೇ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಮುದ್ದೇಬಿಹಾಳ ತಾಲೂಕಿನ ಏಕಲವ್ಯ ರೊಲರ್ಸ್ ಸ್ಕೇಟಿಂಗ್ ಅಕಾಡೆಮಿಯ ಕ್ರೀಡಾಪಟುಗಳು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಸಾಧನೆ ಮಾಡಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಏಕಲವ್ಯ ರೊಲರ್ಸ್ ಸ್ಕೇಟಿಂಗ್ ಅಕಾಡೆಮಿಯ ಸಂಸ್ಥಾಪಕ ಶಿವಕುಮಾರ ಶಾರದಳ್ಳಿ, ತಾಲೂಕಿನಿಂದ ಒಟ್ಟು 12 ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಎಲ್ಲ ವಿದ್ಯಾರ್ಥಿಗಳು ವೈಯಕ್ತಿವಾಗಿ ಹಾಗೂ ರಾಜ್ಯ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಪಂದ್ಯಶ್ರೇಷ್ಠರಾಗಿ ಹೊರಹೊಮ್ಮಿದ್ದಾರೆ.ರೊಲರ್ಸ್ ಸ್ಕೇಟಿಂಗ್ ಸ್ಪೋರ್ಟ್ಸ್‌ ಫೆಡರೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ರಮೇಶ ಸಿಂಗ್, ಪ್ರ.ಕಾರ್ಯದರ್ಶಿ ಸಂಜಯ ಕಾಂಬಳೆ ಹಾಗೂ ಮಹಾರಾಷ್ಟ್ರದ ರಾಜ್ಯಾಧ್ಯಕ್ಷ ರಾಜಥನ್ ರಾಕ್, ಪ್ರ.ಕಾರ್ಯದರ್ಶಿ ಅಭಿಜೀತ ರಾಕ್ ಮತ್ತು ಉಪ ಕಾರ್ಯದರ್ಶಿ ಖೇದರ್ ಬದಾಮಿಕರ್ ವಿಜೇತ ಮಕ್ಕಳಿಗೆ ಪದಕಗಳನ್ನು ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನದ ಟ್ರೋಪಿಯನ್ನು ನೀಡಿ ಅಭಿನಂದಿಸಿದರು.ವಿಜೇತ ವಿದ್ಯಾರ್ಥಿಗಳು:

ಪ್ರೊಫೆಷನ್ ಇನ್‌ಲೈನ್ ಸ್ಕೇಟಿಂಗ್: 10 ವರ್ಷದೊಳಗಿನ ಕ್ರೀಡಾಪಟುಗಳ 300 ಮೀ ಮತ್ತು 500 ಮೀ ಸ್ಪರ್ಧೆಯಲ್ಲಿ ವಿಕ್ರಾಂತ ಶಾರದಳ್ಳಿ ಚಿನ್ನದ ಪದಕ, ವೈಭವ ಬಿರಾದಾರ ಬೆಳ್ಳಿ, 12 ಷರ್ವದೊಳಗಿನ ವಿಭಾಗದಲ್ಲಿ ಅಕೀಲ ಅಸ್ಕಿ ಕಂಚು, 15 ವರ್ಷದೊಳಗಿನ ವಿಭಾಗದಲ್ಲಿ ಶಂಕುಂತಲಾ ಶಾರದಳ್ಳಿ 500 ಮೀ ಮತ್ತು 100 0ಮೀ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ.ಕ್ವಾರ್ಡ್‌ ಸ್ಕೇಟಿಂಗ್: 15 ವರ್ಷದೋಳಗಿನ ವಿಭಾಗದಲ್ಲಿ ಹೃದಯಾನಂದ ಕೊಪ್ಪ 500 ಮೀ ಬೆಳ್ಳಿ ಪದಕ, 1000 ಮೀ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾನೆ.

ರಿಕ್ಲೇಷನ್ ಇನ್‌ಲೈನ್ ಸ್ಕೇಟಿಂಗ್: 10 ವರ್ಷದೊಳಗಿನ ವಿಭಾಗದಲ್ಲಿ ಯುಸುಫ್ ಚಿಮ್ಮಲಗಿ 500ಮೀ.ನಲ್ಲಿ ಕಂಚು, ಶಾಹೀದಾ ಅಕ್ಕಲಕೋಟ 300 ಮೀ. ಮತ್ತು 500 ಮೀ.ನಲ್ಲಿ ಚಿನ್ನದ ಪದಕ, 12 ವರ್ಷದೊಳಗಿನ ವಿಭಾಗದಲ್ಲಿ ಮಹ್ಮದಾಹೀಲ್ ಅಕ್ಕಲಕೋಟ 300ಮೀ. ಮತ್ತು 500ಮೀ.ನಲ್ಲಿ ಚಿನ್ನ, ನಾಗಶೃತನ ಇಲ್ಲೂರ 300ಮೀ. ಮತ್ತು 500 ಮೀ.ನಲ್ಲಿ ಬೆಳ್ಳಿ, ಅಭಯ ದೇವಾಡಗಿ 300ಮೀ.ನಲ್ಲಿ ಕಂಚಿನ ಪದಕ ಪಡೆದಿದ್ದಾನೆ.ಪಾಲಕರಾದ ನಂದು ಅಸ್ಕಿ, ರಾಚೋಟಿ ಬಳಿಗಾರ, ಮಹ್ಮದಶಫೀಕ್ ಅಕ್ಕಲಕೋಟ, ಉಮಾಕಾಂತ ರುದ್ರವಾರ, ಮೊಸೀನ್ ಚಿಮ್ಮಲಗಿ ಕ್ರೀಡಾಪಟುಗಳಿಗೆ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರ ರೈತ ವಿರೋಧಿ ನೀತಿ ತಕ್ಷಣವೆ ಕೈಬಿಡಲಿ
ಮತ್ತೆ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ