ಹೆತ್ತವರ, ಗುರುಗಳ ಋಣ ತೀರಿಸಲು ವಿದ್ಯಾರ್ಥಿಗಳಿಗೆ ಕರೆ

KannadaprabhaNewsNetwork |  
Published : Feb 18, 2026, 02:00 AM IST
ಮಧುಗಿರಿಯ ಎಂಎನ್‌ಕೆ ಸಮುದಾಯ ಭವನದಲ್ಲಿ ನಡೆದ ಸಮವರ್ತನಂ 2026 ಕಾರ್ಯಕಾರಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ಗೌರವಿಸಲಾಯಿತು. | Kannada Prabha

ಸಾರಾಂಶ

ಪ್ರತಿ ವಿದ್ಯಾರ್ಥಿ ಸಾಧನೆ ಮೂಲಕ ಪೋಷಕರ ಮತ್ತು ಗುರು ಹಿರಿಯರಿಗೆ ಗೌರವ ತೋರಿ ಸಮಾಜದಲ್ಲಿ ಜನಮನ್ನಣೆಗಳಿಸಬೇಕು. ಸಮಾಜದ ಲಭ್ಯ ಸೌಲಭ್ಯ ಬಳಸಿಕೊಂಡು ಉನ್ನತ ಸ್ಥಾದಲ್ಲಿರುವ ವಿದ್ಯಾರ್ಥಿಗಳು ಕೆರೆಯ ನೀರನ್ನು ಕೆರೆಗೆ ಚಲ್ಲಿ ಎಂಬಂತೆ ಋಣ ತೀರಿಸೇಕು.

ಕನ್ನಡಪ್ರಭವಾರ್ತೆ ಮಧುಗಿರಿ

ವಿದ್ಯಾರ್ಥಿಗಳು ಪೋಷಕರ, ಗುರು, ಹಿರಿಯರ ಹಾಗೂ ಸಮಾಜದ ಋಣ ತೀರಿಸುವ ಮೂಲಕ ಸಮಾಜದ ಆಸ್ತಿಯಾಗಿ ಬೆಳೆದು ಸಾರ್ಥಕತೆ ತೋರಬೇಕು ಎಂದು ಕಾರ್ಡಿಯಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ಸುದೀರ್ ಪೈ ತಿಳಿಸಿದರು.

ಕಾರ್ಡಿಯಲ್ ಪಪೂ ಕಾಲೇಜು ವತಿಯಿಂದ ಎಂಎನ್‌ಕೆ ಸಮುದಾಯ ಭವನದಲ್ಲಿ ನಡೆದ ಸಮವರ್ತನಂ - 2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ವಿದ್ಯಾರ್ಥಿ ಸಾಧನೆ ಮೂಲಕ ಪೋಷಕರ ಮತ್ತು ಗುರು ಹಿರಿಯರಿಗೆ ಗೌರವ ತೋರಿ ಸಮಾಜದಲ್ಲಿ ಜನಮನ್ನಣೆಗಳಿಸಬೇಕು. ಸಮಾಜದ ಲಭ್ಯ ಸೌಲಭ್ಯ ಬಳಸಿಕೊಂಡು ಉನ್ನತ ಸ್ಥಾದಲ್ಲಿರುವ ವಿದ್ಯಾರ್ಥಿಗಳು ಕೆರೆಯ ನೀರನ್ನು ಕೆರೆಗೆ ಚಲ್ಲಿ ಎಂಬಂತೆ ಋಣ ತೀರಿಸೇಕು ಎಂದು ತಿಳಿಸಿದರು. ಇತ್ತಿಚೆಗೆ ಯುವಜನಾಂಗ ಟಿವಿ, ಮೊಬೈಯಲ್‌ ಗಳಿಗೆ ದಾಸರಾಗಿ ತಮ್ಮ ವಿವೇಚನಾ ಶಕ್ತಿ ಕಳೆದುಕೊಂಡಿದೆ. ಸಂಬಂಧಗಳಿಗೆ ಮಹತ್ವ ನೀಡುತ್ತಿಲ್ಲ ಎಂದು ವಿಷಾದಿಸಿದ ಅವರು, ವಿದ್ಯಾರ್ಥಿ ದಿಸೆಯಲ್ಲಿಯೇ ಶಿಸ್ತು ಬದ್ಧ ಜೀವನ ರೂಢಿಸಿಕೊಳ್ಳಬೇಕು. ಕರ್ತವ್ಯನಿಷ್ಠೆ, ಸಮಾಜಿಕ ಪ್ರಜ್ಞೆ ಅಳವಡಿಸಿಕೊಂಡು ಸರಳ ಸಜ್ಜನರಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳೇಕು. ಉತ್ತಮ ನಾಯಕನಾಗಿ ರೂಪುಗೊಳ್ಳಬೇಕು. ಎಲ್ಲರಿಗೂ ಮೂಲ ಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವಿರಬೇಕು. ವಿದ್ಯಾರ್ಥಿಗಳು ಅಂಕಗಳ ಜೊತೆಗೆ ಕ್ರೀಡೆ ಮತ್ತು ಸಂಸ್ಕೃತಿಗೆ ಆದ್ಯತೆ ನೀಡೇಕು. ಇತ್ತಿಚೆಗೆ ಪಿಯು ವ್ಯಾಸಂಗಕ್ಕೆ ಮೂಡಬಿದರೆ, ಬೆಂಗಳೂರು, ದಾವಣಗೆರೆಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿತ್ತಿದ್ದು, ನಮ್ಮ ಕಾಲೇಜಿನಲ್ಲಿಯೂ ಅದಕ್ಕಿಂತ ಹೆಚ್ಚು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಆದ್ದರಿಂದ ಮುಂಬರುವ ಶೈಕ್ಷಣಿಕ ವರ್ಷದಿಂದ ನಮ್ಮ ಕಾರ್ಡಿಯಲ್ ಕಾಲೇಜಿಗೆ ಮಕ್ಕಳನ್ನು ಸೇರಿಸಿ ಎಂದು ಮನವಿ ಮಾಡಿದರು.

ಏಜುಶೈನ್ ಅಕಾಡೆಮಿ ಮುಖ್ಯಸ್ಥ ಕಿರಣ್ ಸಿದ್ಧಿ ಮಾತನಾಡಿ, ವಿದ್ಯಾರ್ಥಿಗಳು ತಾಂತ್ರಿಕತೆ ಮೈಗೂಡಿಸಿಕೊಂಡು ಸವಾಲು ಎದುರಿಸುವತ್ತ ಮುಂದಾಗಬೇಕು ಎಂದು ಹೇಳಿದರು.

ಸಂಸ್ಥೆ ಕಾರ್ಯದರ್ಶಿ ಎಂ.ಕೆ. ನಂಜುಂಡರಾಜು ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು, ರಾಜ್ಯ ಮಟ್ಟದಲ್ಲಿ ಗುರಿತಿಸಿಕೊಂಡಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಓದಲು ಬೇರೆ ನಗರಗಳಿಗೆ ಕಳಿಸದೆ ತಾವಿರುವ ಸ್ಥಳದಲ್ಲಿಯೇ ದೊರಕುವ ಸೌಲಭ್ಯ ಸದುಪಯೋಗಪಡಿಸಿಕೊಂಡು ಶಿಕ್ಷಣ ಕೊಡಿಸಬೇಕೆಂದು ಮನವಿ ಮಾಡಿದರು.

ಕಳೆದ ಸಾಲಿನಲ್ಲಿ ಪಪೂ ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾರ್ಡಿಯಲ್ ಸಂಸ್ಥೆ ಅಧ್ಯಕ್ಷ ಪಿ.ರಮೇಶ್, ಖಜಾಂಚಿ ಶೈಲಾಶ್ರೀ ನಾಗರಾಜು ,ಆಡಳಿತ ಮಂಡಳಿಯ ರಾಮನಾಥ ಪ್ರಭು, ಪ್ರೀತಮ್‌, ಪ್ರಾಂಶುಪಾಲರಾದ ಹರೀಶ್‌, ವ್ಯವಸ್ಥಾಪಕಿ ನಂದಿನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು: ಶಾಸಕ ಕೆ.ಎಸ್.ಆನಂದ್
ದೇಶ ಉಳಿಯಲು ಹಿಂದೂ ಧರ್ಮ ಉಳಿಯಬೇಕು