
ಕನ್ನಡಪ್ರಭ ವಾರ್ತೆ ಕಲಬುರಗಿ
ಮೂಲ ಆಲೋಚನೆಗಳ ರಕ್ಷಣೆ ಮತ್ತು ನಾವೀನ್ಯತೆಯ ಉತ್ತೇಜನದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಮಹತ್ವ ವಿವರಿಸಿದ ಅವರು, ಸಂಶೋಧನೆ, ನಾವೀನ್ಯತೆ ಹಾಗೂ ನೈತಿಕ ಸಂಶೋಧನಾ ಪದ್ಧತಿಗಳಿಗೆ ಆದ್ಯತೆ ನೀಡಿ ರಾಷ್ಟ್ರೀಯ ಅಭಿವೃದ್ಧಿ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಸಲಹೆ ನೀಡಿದರು.ಮುಖ್ಯ ಭಾಷಣ ಮಾಡಿದ ನವದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಹಿರಿಯ ಪ್ರಧಾನ ವಿಜ್ಞಾನಿ ಡಾ. ಕನಿಕಾ ಮಲಿಕ್ ಅವರು, ತಾಂತ್ರಿಕ ಪ್ರಗತಿ, ಕಾನೂನು ರಕ್ಷಣೆ ಮತ್ತು ವಾಣಿಜ್ಯೀಕರಣದಲ್ಲಿ ಪೇಟೆಂಟ್‌ಗಳ ಮಹತ್ವ ವಿವರಿಸಿದರು. ಪೇಟೆಂಟ್ ಕರಡು ರಚನೆ, ಪರವಾನಗಿ ಮತ್ತು ಬೌದ್ಧಿಕ ಆಸ್ತಿ ನಿರ್ವಹಣೆಯ ಕುರಿತು ಅರಿವು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಕರೆ ನೀಡಿದರು. ವೈಜ್ಞಾನಿಕ ಸಂಶೋಧನೆಗಳನ್ನು ನವೀನ ಪರಿಹಾರಗಳಾಗಿ ಪರಿವರ್ತಿಸುವ ಮೂಲಕ ರಾಷ್ಟ್ರೀಯ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಹೇಳಿದರು.ಐಕ್ಯೂಎಸಿ ನಿರ್ದೇಶಕ ಹಾಗೂ ಇಂಜಿನಿಯರಿಂಗ್ ವಿಭಾಗದ ಡೀನ್ ಪ್ರೊ. ಎಂ. ಅಮರೇಂದ್ರ ಮತ್ಸ ಮಾತನಾಡಿ, ವಿಕಸಿತ ಭಾರತ ನಿರ್ಮಾಣಕ್ಕೆ ಪೇಟೆಂಟ್‌ಗಳ ಕುರಿತು ಅರಿವು ಮತ್ತು ತಾಂತ್ರಿಕ ನಾವೀನ್ಯತೆ ಅತ್ಯಗತ್ಯ. ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದರು.ಕಾನೂನು ಅಧ್ಯಯನ ವಿಭಾಗದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ ಅವರು ಕಾರ್ಯಾಗಾರದ ಕುರಿತು ವಿವರಿಸಿ, ವಿದ್ಯಾರ್ಥಿಗಳು ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪೇಟೆಂಟ್‌ಗಳ ಮೂಲಕ ತಮ್ಮ ಆವಿಷ್ಕಾರಗಳಿಗೆ ರಕ್ಷಣೆ ಒದಗಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ ಸಹ-ಸಂಯೋಜಕಿ ಜುನು ದಾಸ್ ಸಹಿತ ಪ್ರೊ. ಪ್ರಮೋದ್ ಕುಮಾರ್, ಡಾ. ರೇಣುಕಾ ಗುಬ್ಬೇವಾಡ, ಡಾ. ಜಗದೀಶ್ ಚಂದ್ರ, ಡಾ. ವೈಷ್ಣವಿ ನಾರಾಯಣಿ, ಡಾ. ಕೃಷ್ಣ ಕುಮಾರ್ ಶರ್ಮಾ, ಡಾ. ತಿಲಕಾ, ಡಾ. ಗುರುರಾಜ ಮುಕರಂಬಿ, ಡಾ. ಮಯೂರ್ ಪೂಜಾರ್, ಡಾ. ಜಗದೀಶ್ ಬಿರಾದಾರ, ಡಾ. ಮಲ್ಲಿಕಾರ್ಜುನ ಆನಂದ ಹಳ್ಳಿ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸಂಯೋಜಕಿ ಡಾ. ಶಶಿರೇಖಾ ಮಾಳಗಿ ಸ್ವಾಗತಿಸಿದರು. ಕಾನೂನು ವಿಭಾಗದ ಮುಖ್ಯಸ್ಥ ಡಾ.ಅನಂತ ಚಿಂಚುರೆ ವಂದಿಸಿದರು. ಕಾರ್ಯಕ್ರಮವು ವಂದೇ ಮಾತರಂನೊಂದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.
ಎರಡು ಅವಧಿಯ ಕಾರ್ಯಾಗಾರ: ಕಾರ್ಯಾಗಾರದಲ್ಲಿ ಎರಡು ತಾಂತ್ರಿಕ ಅವಧಿಗಳು ನಡೆದವು. ಮೊದಲ ಅವಧಿಯಲ್ಲಿ ಡಾ. ಕನಿಕಾ ಮಲಿಕ್ ಅವರು “ಪೇಟೆಂಟ್ ನೀತಿಶಾಸ್ತ್ರ: ಪೇಟೆಂಟ್ ಕರಡು ರಚನೆ ಮತ್ತು ಸಲ್ಲಿಕೆಯಲ್ಲಿನ ನೈತಿಕ ಪದ್ಧತಿಗಳು” ವಿಷಯದ ಕುರಿತು ಮಾತನಾಡಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ಎಂ. ಅಮರೇಂದ್ರ ಮಾಸ್ತ ವಹಿಸಿದ್ದರು. ಭೌತ ವಿಜ್ಞಾನಗಳ ನಿಕಾಯದ ಡೀನ್ ಪ್ರೊ. ರಾಜೀವ್ ಜೋಶಿ ಸಹ-ಅಧ್ಯಕ್ಷರಾಗಿದ್ದರು.ಎರಡನೇ ಅವಧಿಯಲ್ಲಿ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಅಶೋಕ್ ಪಿ. ವಾಡ್ಜೆ ಅವರು “ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ನೀತಿಶಾಸ್ತ್ರ: ಭಾರತದ ಕಾನೂನು ಚೌಕಟ್ಟು, ಸವಾಲುಗಳು ಮತ್ತು ಉತ್ತಮ ಪದ್ಧತಿಗಳು” ವಿಷಯದ ಕುರಿತು ಉಪನ್ಯಾಸ ನೀಡಿದರು. ಗಣಕ ವಿಜ್ಞಾನ ನಿಕಾಯದ ಡೀನ್ ಪ್ರೊ. ಆರ್. ಎಸ್. ಹೆಗಡಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ರಾಸಾಯನಿಕ ವಿಜ್ಞಾನಗಳ ನಿಕಾಯದ ಡೀನ್ ಪ್ರೊ. ಪಲ್ಲೆಪೋಗು ರಾಘವಯ್ಯ ಸಹ-ಅಧ್ಯಕ್ಷರಾಗಿದ್ದರು.