ಲಕ್ಷ್ಮೇಶ್ವರ: ಎಚ್‌ಐವಿ ತಡೆಗಟ್ಟಲು ತೀವ್ರಗೊಳಿಸಿದ ಐಇಸಿ ಪ್ರಚಾರಾಂದೋಲನದ ಅಂಗವಾಗಿ ಬೀದಿನಾಟಕ ಪ್ರದರ್ಶನವನ್ನು ಪುರಸಭೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಅಚುಕಟ್ಟಾಗಿ ಅಭಿನಯಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.ಪಟ್ಟಣದ ಕಾಲೇಜು ಆವರಣ, ಪುರಸಭೆ ಆವರಣ ಮತ್ತು ಬಸ್ ನಿಲ್ದಾಣಗಳಲ್ಲಿ ಏಡ್ಸ್ ಜಾಗೃತಿ ಕುರಿತು ವಿದ್ಯಾರ್ಥಿಗಳು ಅರಿವು ಮೂಡಿಸಿದರು. ಸೇರಿದ್ದ ನೂರಾರು ಜನರು ನಾಟಕಗಳನ್ನು ವೀಕ್ಷಿಸಿದರು.
ಸ್ಪರ್ಶ, ಕೀಟಗಳ ಕಚ್ಚುವಿಕೆ, ಕೆಮ್ಮು ಅಥವಾ ಸೀನುವಿಕೆಯಿಂದ ಹರಡುವುದಿಲ್ಲ. ಸುರಕ್ಷಿತ ಲೈಂಗಿಕತೆ, ಸೂಜಿಗಳನ್ನು ಹಂಚಿಕೊಳ್ಳದಿರುವುದು ಮತ್ತು ಜಾಗೃತಿಯಿಂದ ಇರುವುದು ಮುಖ್ಯವಾಗಿದೆ. ಜನರು ಈ ರೋಗದ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಮಾಹಿತಿ ಪಡೆದುಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಎನ್.ಬಿ. ಸೂರಪ್ಪಗೌಡರ, ಪ್ರಾಚಾರ್ಯ ಎ.ವೈ. ಕಳ್ಳಿಮನಿ, ಉಪನ್ಯಾಸಕರಾದ ಎಸ್.ಜಿ. ಹುಳಕನವರ, ಶಿಲ್ಪಾ ಮುದಗಲ್, ಮಂಜುನಾಥ ಬೂದಿಹಾಳ, ವಿದ್ಯಾ ಬಾಲೆಹೊಸೂರು, ಪಿ.ಡಿ. ದೇಶಪಾಂಡೆ, ಎಚ್.ಎಲ್. ಕೋರಿ, ಎಫ್.ಸಿ. ಚಕಾರದ, ಭಾಷಾ ಬೋಂದ್ಲೆಖಾನ್, ಬಾಬು ಪಾಟೀಲ, ಉಕ್ಕಲಿ ಮುಂತಾದವರಿದ್ದರು.