ಮಾಗಡಿ: ಗ್ರಾಮೀಣ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸ್ಥಳೀಯವಾಗಿ ಗ್ರಂಥಾಲಯದ ಸೌಲಭ್ಯ ಬಳಸಿಕೊಂಡಲ್ಲಿ ಉತ್ತಮ ಭವಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ಗ್ರಾಪಂ ಅಧ್ಯಕ್ಷ ಆರ್.ಸತೀಶ್ ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯೆ ಲಕ್ಷ್ಮೀದೇವಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಗ್ರಂಥಾಲಯ ಬಹುದೊಡ್ಡ ಕಾಣಿಕೆ ನೀಡುತ್ತಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ತಿಳಿಸಿದರು.
ಸಿಎಂಸಿಎ ಸಂಸ್ಥೆ ಹಿರಿಯ ಅಧಿಕಾರಿ ವಿಜಯ್ ರಾಂಪುರ ಮಾತನಾಡಿ, ತಂಬೂರಿ ಕಲಾವಿದ ಮಣಿನಾಲ್ಕೂರು ರಾಜ್ಯಾದ್ಯಂತ ಸಂಚರಿಸಿ ಸಾಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಭ್ರಾತೃತ್ವವನ್ನು ಗಾಯನದ ಮೂಲಕ ಯುವಜನರಲ್ಲಿ ಪಸರಿಸುತ್ತಿದ್ದಾರೆ. ಜಿಲ್ಲೆಯ 30 ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ, ಪ್ರತಿ ಭಾನುವಾರ ಬೆಳಿಗ್ಗೆ 10ರಿಂದ 1 ಗಂಟೆವರೆಗೆ, ಕಳೆದ 15 ವಾರಗಳಿಂದ ಚಟುವಟಿಕೆಗಳ ಅಧಿವೇಶನ ಆನ್‌ಲೈನ್ ನಲ್ಲಿ ನಿರಂತರವಾಗಿ ನಡೆಯುತ್ತಿದೆ. ಇದು ಮಕ್ಕಳಲ್ಲಿ ಸಂವಿಧಾನದ ಆಶಯಗಳನ್ನು ಮತ್ತು ಜೀವನ ಕೌಶಲ್ಯಗಳನ್ನು ಅವರಲ್ಲಿ ರೂಪಿಸಲು ಸಹಕಾರಿಯಾಗಿದೆ ಎಂದರು. ಗ್ರಾಪಂ ಉಪಾಧ್ಯಕ್ಷೆ ಎಂ.ಎನ್. ರಂಜಿತಾ, ಸದಸ್ಯರಾದ ವಿ.ಎಂ.ಬಸವರಾಜು, ಭಾಗ್ಯಮ್ಮ, ಲಕ್ಷ್ಮಮ್ಮ, ಸೀತಾರಾಮಯ್ಯ, ಪಂಚಾಯಿತಿ ಕರ ವಸೂಲಿಗಾರ ಚಿಕ್ಕರಂಗಯ್ಯ, ಗ್ರಂಥಾಲಯ ಮೇಲ್ವಿಚಾರಕ ನಂಜಪ್ಪ, ಮಾದಿಗೊಂಡನಹಳ್ಳಿ ಗ್ರಾಮದ ಮುಖಂಡ ನಾಗರಾಜು, ಕಾಯಕ ಮಿತ್ರ ಭವಾನಿ, ಸಿಎಂಸಿಎ ಸಂಸ್ಥೆ ಕಾರ್ಯಕ್ರಮ ವ್ಯವಸ್ಥಾಪಕ ಮಹಮ್ಮದ್ ಶಪೀ, ಹಿರಿಯ ಅಧಿಕಾರಿ ಮೈಸೂರಿನ ಸುನಿತಾ, ಆರ್.ಮಂಜುನಾಥ, ಶಿಲ್ಪ ನಾಗೇನಹಳ್ಳಿ ಇತರರು ಭಾಗವಹಿಸಿದ್ದರು. ಪೋಟೋ 6ಮಾಗಡಿ3:ಮಾಗಡಿ ತಾಲೂಕಿನ ಮಾದಿಗೊಂಡನಹಳ್ಳಿಯಲ್ಲಿ ಸಿಎಂಸಿಎ ಸಂಸ್ಥೆ ಹಾಗೂ ಗ್ರಾಪಂ ಏರ್ಪಡಿಸಿದ್ದ ಬಂಟ್ವಾಳದ ಯಕ್ಷಗಾನ ಕಲಾವಿದ ಮಣಿನಾಲ್ಕೂರು ಅವರ ನಾದ ಸಂಗೀತ ಕಾರ್ಯಕ್ರಮನ್ನು ಗಣ್ಯರು ಉದ್ಘಾಟಿಸಿದರು.