ಎಸ್ಸೆಸ್ಸೆಲ್ಸಿ: ಶಿರಾ ತಾಲೂಕಲ್ಲಿ 14 ಪರೀಕ್ಷಾ ಕೇಂದ್ರ, 4132 ವಿದ್ಯಾರ್ಥಿಗಳು

KannadaprabhaNewsNetwork |  
Published : Mar 11, 2026, 01:45 AM IST
10ಕೆಎನ್‌ಕೆ-1                                                                 ಕಲ್ಯಾಣೋತ್ಸವದಲ್ಲಿ ಸಚಿವ ಶಿವರಾಜ ತಂಗಡಗಿ ಕುಟುಂಬಸ್ಥರು ಭಾಗಿಯಾಗಿ ಕನ್ಯಾಧಾನ ಮಾಡಿದರು. 10ಕೆಎನ್‌ಕೆ-೨ಕನಕಗಿರಿಯ ರಾಜಬೀದಿಯಲ್ಲಿ ಗರುಡೋತ್ಸವವು ವೈಭವದಿಂದ ನಡೆಯಿತು.  | Kannada Prabha

ಸಾರಾಂಶ

ಮಾ. ೧೮ರಿಂದ ಏ.೪ರವರೆಗೆ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ-೧ ನಡೆಯುತ್ತಿದ್ದು, ಶಿರಾ ತಾಲೂಕಿನಲ್ಲಿ ಒಟ್ಟು ೧೪ ಪರೀಕ್ಷಾ ಕೇಂದ್ರ ಗುರುತಿಸಲಾಗಿದೆ (ಶಿರಾದಲ್ಲಿ ೪ ಮತ್ತು ಗ್ರಾಮೀಣ ಭಾಗದಲ್ಲಿ ೧೦ ಪರೀಕ್ಷಾ ಕೇಂದ್ರ) ಎಂದು ತಹಸೀಲ್ದಾರ್ ಆನಂದ ಕುಮಾರ್, ತಾಪಂ ಇಓ ಹರೀಶ್ ಆರ್., ಬಿಇಒ ಸಿ.ಎನ್.ಕೃಷ್ಣಪ್ಪ ಜಂಟಿ ಹೇಳಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾ

ಮಾ. ೧೮ರಿಂದ ಏ.೪ರವರೆಗೆ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ-೧ ನಡೆಯುತ್ತಿದ್ದು, ಶಿರಾ ತಾಲೂಕಿನಲ್ಲಿ ಒಟ್ಟು ೧೪ ಪರೀಕ್ಷಾ ಕೇಂದ್ರ ಗುರುತಿಸಲಾಗಿದೆ (ಶಿರಾದಲ್ಲಿ ೪ ಮತ್ತು ಗ್ರಾಮೀಣ ಭಾಗದಲ್ಲಿ ೧೦ ಪರೀಕ್ಷಾ ಕೇಂದ್ರ) ಎಂದು ತಹಸೀಲ್ದಾರ್ ಆನಂದ ಕುಮಾರ್, ತಾಪಂ ಇಓ ಹರೀಶ್ ಆರ್., ಬಿಇಒ ಸಿ.ಎನ್.ಕೃಷ್ಣಪ್ಪ ಜಂಟಿ ಹೇಳಿಕೆ ನೀಡಿದ್ದಾರೆ.ತಾಲೂಕಿನಾದ್ಯಂತ ಪರೀಕ್ಷೆ ಗೌಪ್ಯತೆಯಿಂದ ಮತ್ತು ಪಾರದರ್ಶಕವಾಗಿ ನಡೆಸಲು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸ್ಥಾನಿಕ ಜಾಗೃತದಳ, ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಿಸಲಾಗಿದೆ. ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲು ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಶಿರಾ ತಾಲೂಕಿನಲ್ಲಿ ೪೧೩೨ ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಅದರಲ್ಲಿ ೩೭೨೮ ಹೊಸವಿದ್ಯಾರ್ಥಿಗಳು, ೪೦೪ ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.ಪರೀಕ್ಷೆಗಾಗಿ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕಲಿಕೆ ಕಡೆಗೆ ಗಮನಹರಿಸಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ, ವಿದ್ಯುತ್ ಸಂಪರ್ಕ ಸೇರಿ ಯಾವುದೇ ರೀತಿ ಸಮಸ್ಯೆ ಉಂಟಾಗದಂತೆ ಕ್ರಮಕ್ಕೆ ಸೂಚಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಇದರ ಜೊತೆಗೆ ವೆಬ್ ಕ್ಯಾಮೆರಾದೊಂದಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸಿಕೊಂಡು ವೆಬ್ ಕ್ಯಾಸ್ಟಿಂಗ್ ಇರುತ್ತದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧಾ ಅಭ್ಯರ್ಥಿಗಳಿಗೆ ದಿಲ್ಲಿಯಲ್ಲಿ ಭವನ ನಿರ್ಮಾಣ
ಬಸ್‌ ಪ್ರಯಾಣ ದರ ಏರಿಕೆ ಆಗುತ್ತಾ?