ನವಲಗುಂದ:
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಘಟಕ, ಆಂತರಿಕ ಭರವಸೆ ಗುಣಮಟ್ಟ ಕೋಶ ಹಾಗೂ ತಾಲೂಕು ಆಸ್ಪತ್ರೆ ನವಲಗುಂದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ಬಿ. ಬಾಗಡಿ, ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವಕರು ದುಶ್ಚಟಗಳಿಗೆ ಮಾರು ಹೋಗಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ವೈಯಕ್ತಿಕ ಶುಚಿತ್ವದತ್ತ ಗಮನ ಹರಿಸುತ್ತಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದಂತಹ ಮಾರಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಯುವಜನತೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ದೀರ್ಘಾಯುಷ್ಯವಂತರಾಗಿ ಜೀವನ ನಡೆಸಲು ಸಲಹೆ ನೀಡಿದರು.ರೆಡ್‌ಕ್ರಾಸ್ ಘಟಕ ಸಂಚಾಲಕಿ ಸವಿತಾ ಚಿಕ್ಕಣ್ಣವರ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಸಾತಿಹಾಳ ಐ.ಬಿ, ನಾಗರತ್ನ ಕುರಡೇಕರ್, ಬಿ.ವಿ. ಏಣಗಿ, ಶ್ರೀಧರ ಲೋನಕರ, ಗಣೇಶ ಧೋಂಗಡಿ, ಗಂಗಾಧರ ಗೌಡರ, ಚೈತ್ರಾ ಟಿ, ಪ್ರತಿಭಾ ನಿಡಗುಂದಿ, ಸಮೀರ್ ನದಾಫ, ವೈ.ಎನ್. ಗುಳಗಂದಿ, ಡಾ. ಪ್ರವೀಣ ದೊಡಮನಿ, ಸುಜಾತಾ ಬರದೂರ್, ಚೈತ್ರಾ ಪಾಟೀಲ, ಮಲ್ಲಿಕಾರ್ಜುನ ಗಡಾದ, ಜ್ಯೋತಿಭಾ ದೊಡಮನಿ, ಮಧು ಹುಣಸಗಿ, ಸುರೇಶ ಬಾರಕೇರ, ಮಂಜುನಾಥ ಜಾಡರ ಸೇರಿದಂತೆ ಹಲವರಿದ್ದರು. ವಿದ್ಯಾರ್ಥಿನಿ ಖಾದಿರಬಿ ನದಾಫ್ ನಿರೂಪಿಸಿದರು. ಐಕ್ಯೂಎಸಿ ಸಂಚಾಲಕ ಸಂತೋಷ ಹುಬ್ಬಳ್ಳಿ ಸ್ವಾಗತಿಸಿದರು. ವಸಂತ ಮುಂದಿನಮನಿ ವಂದಿಸಿದರು.